ಬೆಂ.ವಿವಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ: 50 ಸಾವಿರ ರೂ. ವೇತನ
ಬೆಂಗಳೂರು ವಿಶ್ವವಿದ್ಯಾಲಯ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪದವಿ, ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳಿಗೆ ಬೋಧಕರನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಅರ್ಜಿ ಸಲ್ಲಿಸಲು ಮೇ 22 ಕೊನೆಯ ದಿನವಾಗಿದೆ.
ನೆಟ್-ಸೆಟ್, ಪಿಎಚ್.ಡಿ ಸೇರಿ ಯುಜಿಸಿ ಅರ್ಹತೆ ಹೊಂದಿದ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 16 ತಾಸುಗಳಂತೆ ಮಾಸಿಕ ಗರಿಷ್ಠ 64 ತಾಸು ಬೋಧನೆ
ಯುಜಿಸಿ ಅರ್ಹತೆ ಹೊಂದಿದ ಅರೆಕಾಲಿಕ ಉಪನ್ಯಾಸಕರಿಗೆ ಪ್ರತಿ ತಾಸಿನ ಬೋಧನೆಗೆ 780 ರೂ. ಹಾಗೂ ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ ಪ್ರತಿ ತಾಸಿಗೆ 680 ರೂ.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಪೂರ್ಣ ಹಾಗೂ ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಪದವಿ, ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳಿಗೆ ಬೋಧಕರನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಅರ್ಜಿ ಸಲ್ಲಿಸಲು ಮೇ 22 ಕೊನೆಯ ದಿನವಾಗಿದೆ.
ನೆಟ್-ಸೆಟ್, ಪಿಎಚ್.ಡಿ ಸೇರಿ ಯುಜಿಸಿ ಅರ್ಹತೆ ಹೊಂದಿದ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 16 ತಾಸುಗಳಂತೆ ಮಾಸಿಕ ಗರಿಷ್ಠ 64 ತಾಸು ಬೋಧನೆಗೆ 50 ಸಾವಿರ ರೂ. ಸಂಭಾವನೆ ನೀಡಲಾಗುತ್ತದೆ.
ಯುಜಿಸಿ ಅರ್ಹತೆ ಹೊಂದಿದ ಅರೆಕಾಲಿಕ ಉಪನ್ಯಾಸಕರಿಗೆ ಪ್ರತಿ ತಾಸಿನ ಬೋಧನೆಗೆ 780 ರೂ. ಹಾಗೂ ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ ಪ್ರತಿ ತಾಸಿಗೆ 680 ರೂ. ನೀಡಲಾಗುತ್ತದೆ. ಅಧಿಸೂಚನೆ ಲಿಂಕ್: https://bit.ly/4dRUyvb