ಪಿಎಚ್.ಡಿ ಪ್ರವೇಶಕ್ಕೆ ಬೆಂ.ವಿವಿ ಅರ್ಜಿ ಆಹ್ವಾನ

ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ಫೆ.2ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಫೆ.28 ಕೊನೆಯ ದಿನ
  • ಅಂತರ್ಜಾಲದಲ್ಲಿ ಸಲ್ಲಿಸಿದ ಮೂಲ ಅರ್ಜಿಯ ಪ್ರತಿಯನ್ನು ವಿಶ್ವವಿದ್ಯಾಲಯದ ಸಂಬಂಧಪಟ್ಟ ವಿಭಾಗಗಳಿಗೆ ತಲುಪಿಸಲು ಮಾ.11 ಕೊನೆಯ ದಿನ
  • ಜ್ಞಾನಭಾರತಿಯಲ್ಲಿರುವ ವಿಭಾಗಗಳಿಗೆ ಖುದ್ದಾಗಿ, ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕವೂ ಕಳುಹಿಸಬಹುದು.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು 2026ನೇಸಾಲಿನ ಪಿಎಚ್.ಡಿ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.
ಪ್ರವೇಶ ಪರೀಕ್ಷೆಯ ಆಧಾರದಲ್ಲಿ ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಪಡೆಯಲ್ಪಟ್ಟ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಿಗದಿಪಡಿಸಿದ ಅರ್ಜಿ ನಮೂನೆ ಹಾಗೂ ಇತರೆ ವಿವರಗಳನ್ನು ಅರ್ಹತೆ, ಪ್ರವೇಶ ಶುಲ್ಕ, ವಿಭಾಗವಾರು ಖಾಲಿ ಇರುವ ಸೀಟುಗಳು ಹಾಗೂ ಪ್ರವೇಶಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು www.bangaloreuniversity.karnataka.gov.in
ನಲ್ಲಿ ಪಡೆಯಬಹುದಾಗಿದೆ.
ಫೆ.2ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಫೆ.28 ಕೊನೆಯ ದಿನವಾಗಿದೆ. ದಂಡ ಸಹಿತ ಶುಲ್ಕ ಪಾವತಿಗೆ ಮಾ.7 ಕೊನೆಯ ದಿನವಾಗಿದೆ. ಅಂತರ್ಜಾಲದಲ್ಲಿ ಸಲ್ಲಿಸಿದ ಮೂಲ ಅರ್ಜಿಯ ಪ್ರತಿಯನ್ನು ವಿಶ್ವವಿದ್ಯಾಲಯದ ಸಂಬಂಧಪಟ್ಟ ವಿಭಾಗಗಳಿಗೆ ತಲುಪಿಸಲು ಮಾ.11 ಕೊನೆಯ ದಿನವಾಗಿದೆ. ಜ್ಞಾನಭಾರತಿಯಲ್ಲಿರುವ ವಿಭಾಗಗಳಿಗೆ ಖುದ್ದಾಗಿ, ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕವೂ ಕಳುಹಿಸಬಹುದು. ನಿಗದಿತ ಅರ್ಜಿಗಳನ್ನು ಅಂತರ್ಜಾಲದ ಮೂಲಕ ಮಾತ್ರ ಪಡೆಯಬೇಕು ಎಂದು ವಿವಿ ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net