ಗೋರಕ್ಷಕರ ಮೇಲಿನ ಹಲ್ಲೆಗೆ ಬಜರಂಗದಳ ಖಂಡನೆ

ಗೋರಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳ ಕಾರ್ಯಕರ್ತರು ಪಟ್ಟಣದಲ್ಲಿ ತಹಸೀಲ್ದಾರ್​ ಕಲಗೌಡ ಪಾಟೀಲಗೆ ಮನವಿ ಸಲ್ಲಿಸಿದರು. ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಪುನೀತ್​ ಕೆರೆಹಳ್ಳಿ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಬಸವರಾಜ ಪರವಣ್ಣವರ, ಲಕ್ಷಿ$್ಮ ಇನಾಮದಾರ ಇತರರಿದ್ದರು.

Published on
ವಿಜಯವಾಣಿ ಸುದ್ದಿಜಾಲ ಚನ್ನಮ್ಮನ ಕಿತ್ತೂರು
ಬಕ್ರೀದ್​ ಸಂದರ್ಭದಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ ಗೋರಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್​ ಕಲಗೌಡ ಪಾಟೀಲಗೆ ಮಂಗಳವಾರ ಮನವಿ ಸಲ್ಲಿಸಿದರು.
ಹಿಂದೂ ಕಾರ್ಯಕರ್ತ ಪುನೀತ್​ ಕೆರೆಹಳ್ಳಿ ಮಾತನಾಡಿ, ಗೋವು ರಕ್ಷಣೆಗೆ ಮುಂದಾದ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳ ಕಾರ್ಯಕರ್ತರ ವಿರುದ್ಧ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಜಗುರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಗೋಮಾತೆ ರಕ್ಷಣೆ ನಮ್ಮೆಲ್ಲರ ಹೊಣೆ. ಗೋರಕರ ವಿರುದ್ಧ ದಾಖಲಿಸಿದ ಪ್ರಕರಣ ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್​ ಕಲಗೌಡ ಪಾಟೀಲ, ಡಿವೈಎಸ್ಪಿ ವೀರಯ್ಯ ಹಿರೇಮಠ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳ ಕಾರ್ಯಕರ್ತರ ಪ್ರಕರಣ ಹಿಂಪಡೆದರು. ಗುರು ಮಡಿವಾಳೇಶ್ವರ ಮಠದ ಪಂಚಾರಿ ಸ್ವಾಮೀಜಿ, ದೇಗುಲಹಳ್ಳಿ
ವೀರೇಶ್ವರ ಸ್ವಾಮೀಜಿ, ಪ್ರಮೋದಕುಮಾರ ಒಕ್ಕುಂದಮಠ, ಪುಂಡಲೀಕ ದಳವಾಯಿ,
ಕೃಷ್ಣಾಜಿ ಭಟ್ಟ, ಮಲ್ಲಸರ್ಜ ರೆಡ್ಡಿ, ಮಡಿವಾಳಿ ಮುರುಗೋಡ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಮುಖಂಡರಾದ ಬಸವರಾಜ ಪರವಣ್ಣವರ, ಲಕ್ಷಿ$್ಮ ಇನಾಮದಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net