ವಿದ್ಯಾರ್ಥಿವೇತನಕ್ಕೆ ಬಜಾಜ್‌ನಿಂದ ₹400 ಕೋಟಿ

ರೂಪಾ ರಾಹುಲ್ ಬಜಾಜ್ ಮಹಿಳಾ ಇಂಜಿನಿಯರ್ ವಿದ್ಯಾರ್ಥಿವೇತನ
ರೂಪಾ ರಾಹುಲ್ ಬಜಾಜ್ ಮಹಿಳಾ ಇಂಜಿನಿಯರ್ ವಿದ್ಯಾರ್ಥಿವೇತನ
Published on
ಪುಣೆ: ಬಜಾಜ್ ಆಟೋ ಲಿಮಿಟೆಡ್‌ನ ಸಿಎಸ್‌ಆರ್ ಅಂಗವಾದ ಬಜಾಜ್ ಆಟೋ ಫೌಂಡೇಶನ್‌ನಿಂದ ರೂಪಾ ರಾಹುಲ್ ಬಜಾಜ್ ಮಹಿಳಾ ಇಂಜಿನಿಯರ್ ವಿದ್ಯಾರ್ಥಿವೇತನಕ್ಕೆ (ಆರ್‌ಎಸ್‌ಬಿಎಸ್‌ಡಬ್ಲ್ಯುಇ) 400 ಕೋಟಿ ರೂ. ರಾಜೀವ್ ಬಜಾಜ್ ಘೋಷಣೆ ಮಾಡಿದೆ.
ಪುಣೆಯಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಯೋಕಾನ್ ಲಿಮಿಟೆಡ್‌ನ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಸಮ್ಮುಖದಲ್ಲಿ ಬಜಾಜ್ ಆಟೋ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ರಾಜೀವ್ ಬಜಾಜ್ ಘೋಷಣೆ ಮಾಡಿದರು.
ಔಪಚಾರಿಕವಾಗಿ ಕೆಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಮಾತನಾಡಿದ ರಾಜೀವ್ ಬಜಾಜ್, ದೇಶದಲ್ಲಿ ಮಹಿಳಾ ಇಂಜಿನಿಯರ್‌ಗಳ ಸಬಲೀಕರಣಕ್ಕಾಗಿ 400 ಕೋಟಿ ರೂ. ನೀಡಲು ಸಂಸ್ಥೆ ಬದ್ಧವಾಗಿದೆ. ಈ ಮೂಲಕ ಮಹಿಳಾ ಉದ್ಯೋಗಿಗಳ ಕೌಶಲ ಮತ್ತು ಸಬಲೀಕರಣಕ್ಕೆ ಹೆಚ್ಚಿನ ಹೊತ್ತು ನೀಡಲಾಗುತ್ತದೆ. ಐಐಟಿಗಳು, ಎನ್‌ಐಟಿಗಳು, ಐಐಐಟಿಗಳು ಮತ್ತು ಪ್ರತಿಷ್ಠಿತ ರಾಜ್ಯ, ಖಾಸಗಿ ವಿವಿಗಳು ಸೇರಿ 40 ಪ್ರಮುಖ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಅರ್ಹ ವಿದ್ಯಾರ್ಥಿನಿಯರಿಗೆ ತಲಾ 8 ಲಕ್ಷ ರೂ. ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಈ ಶಿಕ್ಷಣ ಸಂಸ್ಥೆಗಳಿಂದ 506 ಪ್ರತಿಭಾನ್ವಿತ ಯುವ ವಿದ್ಯಾರ್ಥಿನಿಯರು ಆಯ್ಕೆ ಮಾಡಿ ಸ್ಕಾಲರ್‌ಶಿಪ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಮೆಕಾನಿಕಲ್, ಎಲೆಕ್ಟ್ರಾನಿಕ್ಸೃ್, ಇಂಡಸ್ಟ್ರಿಯಲ್, ರೋಬಾಟಿಕ್ಸೃ್ ಇಂಜಿನಿಯರಿಂಗ್ ಮತ್ತು ಸಂಬಂಧಿತ ಕ್ಷೇತ್ರಗಳ ಕೋರ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ಯುವತಿಯರಿಗಾಗಿ ಈ ವಿದ್ಯಾರ್ಥಿವೇತನವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
"

ಮಹಿಳೆಯರು ತಾಳ್ಮೆ, ಸಹಾನುಭೂತಿ ಮತ್ತು ಶ್ರದ್ಧೆಯ ಅಂತರ್ಗತ ಕೌಶಲಗಳನ್ನು ಹೊಂದಿದ್ದಾರೆ. ಇಂಜಿನಿಯರಿಂಗ್ ಉದ್ಯೋಗಗಳಲ್ಲಿ ಉತ್ತಮ ಸಾಧನೆ ಗುಣಲಕ್ಷಣಗಳಾಗಿವೆ. ಇದನ್ನು ಬಹಳ ಹಿಂದೆಯೇ ಗುರುತಿಸಿದ್ದೇವೆ ಮತ್ತು ಮಹಿಳಾ ಇಂಜಿನಿಯರ್‌ಗಳನ್ನು. ಎರಡು ದಶಕದ ಹಿಂದೆ ಬಜಾಜ್ ಆಟೋದಲ್ಲಿ ಯಾವುದೇ ಮಹಿಳಾ ಉದ್ಯೋಗಿಗಳಿರಲಿಲ್ಲ. ಈಗ 20 ಸಾವಿರ ಉದ್ಯೋಗಿಗಳಲ್ಲಿ ಶೇ.20 ಮಹಿಳಾ ನೌಕರರಿದ್ದಾರೆ.

— ರಾಜೀವ್ ಬಜಾಜ್, ಬಜಾಜ್ ಆಟೋ ಲಿ.ನ ವ್ಯವಸ್ಥಾಪಕ ನಿರ್ದೇಶಕ

ಹೂಡಿಕೆಯ ಕೊರತೆ
ವಿಜ್ಞಾನ, ಇಂಜಿನಿಯರಿಂಗ್ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳಿಗೆ ಸಮಾನ ಅವಕಾಶ ಸಿಗಬೇಕು. ಇದಕ್ಕಾಗಿ ರೂಪಾ ರಾಹುಲ್ ಬಜಾಜ್ ವಿದ್ಯಾರ್ಥಿವೇತನದಂತಹ ಯೋಜನೆ ಅಗತ್ಯವಿದೆ ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹೇಳಿದರು. 1978ರಲ್ಲಿ ಬೆಂಗಳೂರಿನ 10 ಸಾವಿರ ರೂ. ಹೂಡಿಕೆ ಮಾಡಿ ಕಂಪನಿಯನ್ನು ಪ್ರಾರಂಭಿಸಿದೆ. ಕೆಲವರಿಗೆ ಮಾತ್ರ ಅರ್ಥವಾಗಿತ್ತು. ಬ್ಯಾಂಕ್‌ನಲ್ಲಿ ಸಾಲಸೌಲಭ್ಯ ಸಿಗುವ ಸ್ಥಿತಿ ಇರಲಿಲ್ಲ. ಇದೀಗ ಬಯೋಕಾನ್ 17,270 ಕೋಟಿ ರೂ. ಆದಾಯದೊಂದಿಗೆ ಜಾಗತಿಕ ಬಯೋಫಾರ್ಮಾಸ್ಯುಟಿಕಲ್ ಕಂಪನಿಯಾಗಿ ಬೆಳೆದಿದೆ. ನಮಗೆ ಪ್ರತಿಭೆ ಮತ್ತು ವೈಜ್ಞಾನಿಕ ಸಾಮರ್ಥ್ಯಗಳ ಕೊರತೆಯಿಲ್ಲ. ನಮಗೆ ಬಂಡವಾಳ ಹೂಡಿಕೆಯ ಕೊರತೆಯಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net