ಜನರ ಅಭಿಮಾನಕ್ಕೆ ಸದಾ ಚಿರಋಣಿ

ಬೈಲಹೊಂಗಲದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಜನ್ಮದಿನದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾ-ಧಿಕಾರಿ ಡಾ.ರವೀಂದ್ರ ಜಕನೂರ, ಡಾ.ಶರಣ ಅಂಗಡಿ, ಡಾ.ಮಂಜುನಾಥ ಮುದಕನಗೌಡರ ಶುಭ ಕೋರಿದರು.
ಬೈಲಹೊಂಗಲದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಜನ್ಮದಿನದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾ-ಧಿಕಾರಿ ಡಾ.ರವೀಂದ್ರ ಜಕನೂರ, ಡಾ.ಶರಣ ಅಂಗಡಿ, ಡಾ.ಮಂಜುನಾಥ ಮುದಕನಗೌಡರ ಶುಭ ಕೋರಿದರು.
Published on
ಬೈಲಹೊಂಗಲ: ನಾಲ್ಕು ಬಾರಿ ವಿಧಾನಸಭೆ, ಒಂದು ಬಾರಿ ವಿಧಾನಪರಿಷತ್​ ಪ್ರವೇಶಿಸುವ ಮೂಲಕ ಬೈಲಹೊಂಗಲ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ 55ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಶನಿವಾರ ಶುಭಾಶಯಗಳ ಮಹಾಪೂರ ಹರಿದು ಬಂದಿತು.
ಬೆಳಗ್ಗೆ ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ಕೇಕ್​ ಕತ್ತರಿಸಿ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ, ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಸದಾ ಇರಲಿ. ನಿಮ್ಮ ಅಭಿಮಾನಕ್ಕೆ ನಾನು ಸದಾ ಚಿರಋಣಿ. ಎಲ್ಲರೂ ಒಗ್ಗೂಡಿ ಮುಂಬರುವ ದಿನಗಳಲ್ಲಿ ೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮೂಲಕ ಜನರಿಗೆ ಸೌಕರ್ಯ ಕಲ್ಪಿಸೋಣ. ನಿಮ್ಮ ಸೇವೆಯೇ ನನ್ನ ಜೀವನದ ಮೊದಲ ಆದ್ಯತೆ ಎಂದು ಶುಭ ಕೋರಿದವರಿಗೆಲ್ಲ ಕೃತಜ್ಞತೆ ಸಲ್ಲಿಸಿದರು.
ಜನ್ಮದಿನದ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹೊರತಂದ "ಬೈಲಹೊಂಗಲ ಹೊನ್ನಕಲಶ' ವಿಶೇಷ ಪುರವಣಿ ವೀಸಿ ಶಾಸಕ ಮಹಾಂತೇಶ ಕೌಜಲಗಿ ಸಂತಸ ವ್ಯಕ್ತಪಡಿಸಿದರು.
ಬಳಿಕ ಪ್ರತಿಕೆಯೊಂದಿಗೆ ಮಾತನಾಡಿ, ನಗರದ ಸುತ್ತಲೂ 100 ಕೋಟಿ ರೂ. ವೆಚ್ಚದಲ್ಲಿ ರಿಂಗ್​ ರೋಡ್​ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆರ್ಥಿಕತೆ ಅಭಿವೃದ್ಧಿ ಹಾಗೂ ವ್ಯವಸ್ಥಿತ ಸಂಚಾರಕ್ಕೆ ಅನುಕೂಲವಾಗಲಿದೆ. ಬೈಲಹೊಂಗಲ ಪುರಸಭೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದರು. ಡಾ.ಮಹಾಂತೇಶ ಆರಾದ್ರಿಮಠ, ಕೆಎಲ್​ಇ ಉಪಾಧ್ಯ ಬಸವರಾಜ ತಟವಾಟಿ, ತಹಸೀಲ್ದಾರ್​ ಹನುಮಂತ ಶಿರಹಟ್ಟಿ, ಪೌರಾಯುಕ್ತ ವಿರೇಶ ಹಸಬಿ, ಡಾ.ಬಸವರಾಜ ಪರವನ್ನವರ, ರಮೇಶ ಪರಂಡಿ, ಅಶೋಕ ವಾಲಿ, ರಾಜು ಬಡ್ಲಿ, ಡಾ.ರವೀಂದ್ರಕುಮಾರ ಜಕನೂರ, ಡಾ.ಶರಣ ಅಂಗಡಿ, ಡಾ.ಮಂಜುನಾಥ ಮುದಕನಗೌಡರ, ಗ್ಯಾರಂಟಿ ಯೋಜನೆ ಸಮಿತಿ ತಾಲೂಕಾಧ್ಯಕ್ಷ ಮಹಾಂತೇಶ ಕಳ್ಳಿಬಡ್ಡಿ, ಹಸನ ಗೊರವನಕೊಳ್ಳ, ಡಾ.ಅಜಯ ಅಂಗಡಿ, ಡಾ.ಜಿ.ಎ.ಬಾಗೇವಾಡಿ, ಡಾ.ಮಹಾಂತೇಶ ಜಿಡ್ಡಿಮನಿ, ಲಕ್ಷ$್ಮ್ಮಣ ಸೋಮನಟ್ಟಿ ಸೇರಿ ವಿವಿಧ ಗಣ್ಯರು ಶಾಸಕರಿಗೆ ಜನ್ಮದಿನದ ಶುಭಾಶಯ ಕೋರಿದರು.
"ಸುದೀರ್ ಅವಧಿ ಶಾಸಕರಾದ ಮಹಾಂತೇಶ ಕೌಜಲಗಿ ಅವರಿಗೆ ಸರ್ಕಾರ ಹಣಕಾಸು ನಿಗಮ ಮಂಡಳಿ ಹೊಣೆ ನೀಡಿದ್ದು, ೇತ್ರದ ಜನರಲ್ಲಿ ಸಂತಸವಿಲ್ಲ. ಅವರ ಅಜ್ಜ, ಅಪ್ಪನಂತೆ ಅನುಭವಿ ಶಾಸಕರು ಮಂತ್ರಿಗಳಾಗಲಿ ಎಂಬುದು ಜನರ ಹೆಬ್ಬಯಕೆಯಾಗಿದೆ. ಶೂರರ ನಾಡು ಬೈಲಹೊಂಗಲ ಪ್ರಗತಿ ಪಥದತ್ತ ಸಾಗಲಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ವಿಜಯ ಬೋಳನ್ನವರ, ವಕೀಲ ಮಹೇಶ ಬೆಲ್ಲದ ತಿಳಿಸಿದರು."
ಕ್ಷೇತ್ರದಲ್ಲಿ ಅತ್ಯಾಧುನಿಕ ಬಸ್​ ನಿಲ್ದಾಣ ನಿರ್ಮಿಸಲಾಗಿದೆ. ಜತೆಗೆ ಇಂಚಲ ರಸ್ತೆಯಲ್ಲಿ 1,102 ಆಶ್ರಯ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸ್ವಚ್ಛತೆಯಲ್ಲಿ ರಾಜ್ಯದಲ್ಲೇ ಬೈಲಹೊಂಗಲ ನಗರಸಭೆ ನಂ.1 ಸ್ಥಾನಕ್ಕೇರಿಸಲು ಶ್ರಮವಹಿಸಲಾಗುವುದು.
> ಮಹಾಂತೇಶ ಕೌಜಲಗಿ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net