

ಪ್ರಮುಖ ಮುಖ್ಯಾಂಶಗಳು
ವಿನೋದ್ಕಾಮತ್, ಬೆಂಗಳೂರು: ಮೂರುವರೆಮುಹೂರ್ತಗಳ ಪೈಕಿ ಒಂದು ಪೂರ್ಣಮುಹೂರ್ತವಾಗಿರುವ ಅಕ್ಷಯತೃತೀಯಾದಲ್ಲಿ ಎಳ್ಳು ತರ್ಪಣೆನೀಡುವುದು, ಉದಕಕುಂಭದಾನ, ಮೃತ್ತಿಕಾಪೂಜೆ ಮಾಡುವುದಕ್ಕೆ ಮಹತ್ವವಿದೆ. ಅಕ್ಷಯ ತೃತೀಯಾದಂದುಇಡೀ ದಿನ ಶುಭ ಮುಹೂರ್ತವೇ ಆಗಿರುತ್ತದೆ;ಆದ್ದರಿಂದ ಈತಿಥಿಯಂದು ಧಾರ್ಮಿಕ ಕಾರ್ಯಗಳನ್ನುಮಾಡುವಾಗ ಮುಹೂರ್ತವನ್ನುನೋಡಬೇಕಾಗುವುದಿಲ್ಲ.ಈ ದಿನದಂದುಹಯಗ್ರೀವ ಅವತಾರ,ನರನಾರಾಯಣಪ್ರಕಟೀಕರಣ ಮತ್ತು ಪರಶುರಾಮನಅವತಾರವಾಗಿದೆ.ಈ ತಿಥಿಯಂದುಬ್ರಹ್ಮ ಮತ್ತು ಶ್ರೀವಿಷ್ಣುವಿನಮಿಶ್ರ ಲಹರಿಗಳು ಉಚ್ಚ ದೇವತೆಗಳಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ.ಆದುದರಿಂದಪೃಥ್ವಿಯ ಮೇಲಿನ ಸಾತ್ವಿಕತೆಯುಹೆಚ್ಚಾಗುತ್ತದೆ.ಈ ಕಾಲಮಹಾತ್ಮೆಯಿಂದಾಗಿಈ ತಿಥಿಯಂದು ಪವಿತ್ರ ಸ್ನಾನ,ದಾನಗಳಂತಹಧರ್ಮಕಾರ್ಯಗಳನ್ನು ಮಾಡಿದರೆಅವು ಗಳಿಂದ ಹೆಚ್ಚು ಆಧ್ಯಾತ್ಮಿಕಲಾಭವಾಗುತ್ತದೆ.ಈ ತಿಥಿಯಂದುದೇವತೆಗಳನ್ನು ಮತ್ತು ಪಿತೃಗಳನ್ನುಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳೂಅಕ್ಷಯವಾಗುತ್ತವೆ ಎಂದು ಮದನರತ್ನಕೃತಿಯಲ್ಲಿ ಉಲ್ಲೇಖಿಸಲಾಗಿದೆ.
ಕಾಲವಿಭಾಗದಪ್ರಾರಂಭದ ದಿನವು ಭಾರತೀಯರಿಗೆಪವಿತ್ರವಾಗಿದೆ;ಆದುದರಿಂದ ಇಂತಹತಿಥಿಗಳಂದು ಸ್ನಾನದಾನಾದಿಧರ್ಮಕಾರ್ಯಗಳನ್ನು ಹೇಳಲಾಗಿದೆ.ಈ ದಿನದ ವಿಧಿಯೆಂದರೆಪವಿತ್ರ ನೀರಿನಲ್ಲಿ ಸ್ನಾನ,ಶ್ರೀವಿಷ್ಣುವಿನಪೂಜೆ, ಜಪ,ಹೋಮ,ದಾನ ಮತ್ತುಪಿತೃತರ್ಪಣ. ಈದಿನ ಅಪಿಂಡಕ ಶ್ರಾದ್ಧವನ್ನುಮಾಡಬೇಕು, ಅದುಸಾಧ್ಯವಿಲ್ಲದಿದ್ದರೆ ಎಳ್ಳಿನತರ್ಪಣವನ್ನಾದರೂ ಕೊಡಬೇಕು.ಸಂತರಿಗೆ ಅಥವಾಸಮಾಜದಲ್ಲಿ ಧರ್ಮಪ್ರಸಾರವನ್ನುಮಾಡುವವರಿಗೆ ಸತ್ಪಾತ್ರ ದಾನಮಾಡಬೇಕು.ಸತ್ಪಾತ್ರೇದಾನವನ್ನು ಮಾಡುವುದರಿಂದ ದಾನದಕರ್ಮವು ಅಕರ್ಮಕರ್ಮವಾಗುತ್ತದೆ.ಅಕರ್ಮಕರ್ಮವೆಂದರೆಪಾಪ-ಪುಣ್ಯಗಳಲೆಕ್ಕಾಚಾರ ತಗಲದಿರುವುದು.ಇದರಿಂದ ದಾನವನ್ನುನೀಡುವವನು ಯಾವುದೇ ಬಂಧನದಲ್ಲಿಸಿಲುಕದೇ, ಅವನಆಧ್ಯಾತ್ಮಿಕ ಉನ್ನತಿಯಾಗಲುಸಹಾಯವಾಗುತ್ತದೆ.ಅಕ್ಷಯ ತದಿಗೆಯದಿನ ಮಾಡಿದ ದಾನವು ಕ್ಷಯವಾಗದೆ,ಬಹಳಷ್ಟು ಪುಣ್ಯಸಿಗುತ್ತದೆ.ಯಾವುದಾದರೊಂದುಜೀವದ ಹಿಂದಿನ ಕರ್ಮಗಳು ಒಳ್ಳೆಯದಾಗಿದ್ದರೆಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ.ಇದರಿಂದ ಅವನಿಗೆಸ್ವರ್ಗಪ್ರಾಪ್ತಿಯಾಗಬಹುದು.
ಸ್ತ್ರೀಯರುಚೈತ್ರದಲ್ಲಿ ಕೂರಿಸಿದ ಚೈತ್ರಗೌರಿಯನ್ನು ಈ ದಿನ ವಿಸರ್ಜನೆಮಾಡುತ್ತಾರೆ.ಇದರ ಪ್ರಯುಕ್ತಮುತ್ತೈದೆಯರಿಗೆ ಅರಿಶಿನ-ಕುಂಕುಮನೀಡುತ್ತಾರೆ.
ಅಕ್ಷಯತದಿಗೆಯ ದಿನ ಉಚ್ಚಲೋಕದಿಂದಸಾತ್ತ್ವಿಕತೆಯು ಬರುತ್ತಿರುತ್ತದೆ.ಈ ಸಾತ್ತ್ವಿಕತೆಯನ್ನುಗ್ರಹಣ ಮಾಡಲು ಭುವರ್ಲೋಕದಲ್ಲಿನಅನೇಕ ಜೀವಗಳು ಪೃಥ್ವಿಯ ಸಮೀಪಕ್ಕೆಬರುತ್ತವೆ.ಭುವರ್ಲೋಕದಲ್ಲಿರುವಬಹುತೇಕ ಜೀವಗಳು ಮನುಷ್ಯರಪೂರ್ವಜರಾಗಿರುತ್ತಾರೆ.ಪೂರ್ವಜರ ಋಣವೂಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ.ಈ ಋಣವನ್ನುತೀರಿಸಲು ಮನುಷ್ಯನು ಪ್ರಯತ್ನಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ.ಪೂರ್ವಜರಿಗೆಗತಿ ಸಿಗಬೇಕೆಂದು ಅಕ್ಷಯ ತದಿಗೆಯದಿನ ಎಳ್ಳು ತರ್ಪಣೆಯನ್ನುಮಾಡುತ್ತಾರೆ.
ಒಂದುತಟ್ಟೆಯಲ್ಲಿ ಶ್ರೀವಿಷ್ಣು,ಬ್ರಹ್ಮ ಅಥವಾದತ್ತನ ಆವಾಹನೆಯನ್ನು ಮಾಡಬೇಕು.ಆಮೇಲೆ ದೇವತೆಗಳುಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿಬಂದಿದ್ದಾರೆಂದು ಭಾವವನ್ನಿಟ್ಟುಕೈಯಲ್ಲಿ ಎಳ್ಳನ್ನು ತೆಗೆದುಕೊಂಡುಅವರ ಚರಣಗಳ ಮೇಲೆ ಅರ್ಪಿಸಬೇಕು.ಇನ್ನೊಂದುತಟ್ಟೆಯಲ್ಲಿ ನಮ್ಮ ಪೂರ್ವಜರಆವಾಹನೆಯನ್ನು ಮಾಡಬೇಕು.ಆಮೇಲೆ ಪೂರ್ವಜರುತಟ್ಟೆಯಲ್ಲಿ ಬಂದಿದ್ದಾರೆಂದುಭಾವವನ್ನಿಟ್ಟು ದೇವತೆಗಳ ತತ್ವದಿಂದಭರಿತವಾದ ಎಳ್ಳನ್ನು ಅವರಿಗೆಅರ್ಪಿಸಬೇಕು,ಅಂದರೆ ಸಾತ್ವಿಕವಾಗಿರುವಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡುಅದರ ಮೇಲಿನಿಂದ ತಟ್ಟೆಯಲ್ಲಿನಿಧಾನವಾಗಿ ನೀರನ್ನು ಬಿಡಬೇಕುಮತ್ತು ಆ ಸಮಯದಲ್ಲಿ ಬ್ರಹ್ಮ,ವಿಷ್ಣುಅಥವಾ ಇವರಿಬ್ಬರ ಅಂಶವಿರುವದತ್ತನಿಗೆ ಪೂರ್ವಜರಿಗೆ ಗತಿನೀಡಬೇಕೆಂದು ಪ್ರಾರ್ಥನೆಯನ್ನುಮಾಡಬೇಕು.
ಯುಗಾದಿಯಶುಭಮುಹೂರ್ತದಂದು ಉಳುಮೆ ಮಾಡಿದಹೊಲದ ಸಾಗುವಳಿಯ ಕೆಲಸವನ್ನುಅಕ್ಷಯ ತೃತೀಯಾದ ಒಳಗೆ ಪೂರ್ಣಗೊಳಿಸಬೇಕು.ಅಕ್ಷಯ ತೃತೀಯಾದಂದುಸಾಗುವಳಿ ಮಾಡಿದ ಜಮೀನಿನಲ್ಲಿರುವಮಣ್ಣನ್ನು ಕೃತಜ್ಞತೆಯ ಭಾವದಿಂದಪೂಜಿಸಬೇಕು.ಅನಂತರ ಪೂಜಿಸಿದಮಣ್ಣಿನಲ್ಲಿ ಬೀಜಗಳನ್ನು ಬಿತ್ತಬೇಕು.ಅಕ್ಷಯ ತೃತೀಯಾದಮುಹೂರ್ತದಲ್ಲಿ ಬೀಜಗಳನ್ನುಬಿತ್ತಲು ಪ್ರಾರಂಭಿಸಿದರೆ ಆ ದಿನವಾತಾವರಣದಲ್ಲಿ ಕಾರ್ಯನಿರತವಾಗಿರುವದೈವೀ ಶಕ್ತಿಯು ಬೀಜಗಳಲ್ಲಿಬರುವುದರಿಂದ ಸಮೃದ್ಧವಾದ ಫಸಲುಬರುತ್ತದೆ. ಇದೇರೀತಿಯಲ್ಲಿ ಅಕ್ಷಯ ತೃತೀಯಾದಂದುಹೊಂಡಗಳನ್ನು ಮಾಡಿ ಗಿಡಗಳನ್ನುನೆಟ್ಟರೆ ಹಣ್ಣಿನ ತೋಟವೂ ಹೇರಳವಾದಉತ್ಪಾದನೆಯನ್ನು ನೀಡುತ್ತದೆಎಂಬ ನಂಬಿಕೆ ಇದೆ.