ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಪಾಶ್ಚಾತ್ಯ ಪ್ರಭಾವದಿಂದ ಹೊರದೇಶಗಳದ್ದು ಮಾತ್ರ ವಿಜ್ಞಾನ. ನಮ್ಮ ದೇಶದ ಜ್ಞಾನ,ವಿಜ್ಞಾನವಲ್ಲ ಎಂದು ನಂಬಿಸುವ ಕೆಲಸವಾಗುತ್ತಿದೆ. ಆಯುರ್ವೇದ ವಿಚಾರದಲ್ಲೂ ಇದನ್ನೇ ನೋಡುತ್ತಿದ್ದೇವೆ. ‘ಆಯುರ್ವೇದ ವೈದ್ಯ ವಿಜ್ಞಾನವೇ ಅಲ್ಲ’ ಎಂದು ಹೇಳುವ ಜನರು ಇಂದಿಗೂ ಇದ್ದಾರೆ. ಆಯುರ್ವೇದ ಸಂಶೋಧನೆಗಳಿಗೆ ವೈದ್ಯಕೀಯ ಅಂಕಿಅಂಶದ ಕೊರತೆ ಇದೆ. ಇದನ್ನು ನಿವಾರಿಸುವ ಸಲುವಾಗಿ ಸಮ್ಮೇಳನದಲ್ಲಿ ಸಾವಿರಕ್ಕೂ ಅಧಿಕ ವೈಜ್ಞಾನಿಕ ಪ್ರಬಂಧಗಳು ಮಂಡನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಆಯುರ್ವೇದ ಸಂಶೋಧನೆಗೆ ಅಗತ್ಯ ಅಂಕಿ ಅಂಶ ಒದಗಿಸಲಿದೆ ಎಂದು ಹಿರಿಯ ಪತ್ರಕರ್ತ ರವಿ ಹೆಗಡೆ ಹೇಳುತ್ತಾರೆ.