ಜನ ಜಾಗೃತಿ ಮೂಡಿಸಿದ ಆಯುರ್ವೇದ ಬೈಕ್ ಜಾಥಾ; ಡಿ.25 ರಿಂದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ

ಆಯುರ್ವೇದ ಸಮ್ಮೇಳನದ ಜನಜಾಗೃತಿಗಾಗಿ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಚಾಲನೆ ನೀಡಿದರು. ಶಾಸಕ ರವಿಸುಬ್ರಮಣ್ಯ, ನಟ ಅಜಯ್ ರಾವ್, ಡಾ.ಗಿರಿಧರ ಕಜೆ ಮತ್ತಿತರರು ಉಪಸ್ಥಿತರಿದ್ದರು.
ಆಯುರ್ವೇದ ಸಮ್ಮೇಳನದ ಜನಜಾಗೃತಿಗಾಗಿ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಚಾಲನೆ ನೀಡಿದರು. ಶಾಸಕ ರವಿಸುಬ್ರಮಣ್ಯ, ನಟ ಅಜಯ್ ರಾವ್, ಡಾ.ಗಿರಿಧರ ಕಜೆ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜನ ಜಾಗೃತಿಗಾಗಿ ಬೆಂಗಳೂರಿನಲ್ಲಿ ನಡೆದ ಆಯುರ್ವೇದ ಬೈಕ್ ಜಾಥಾ
  • ಡಿ.25 ರಿಂದ 28 ವರೆಗೆ ಅರಮನೆ ಮೈದಾನದಲ್ಲಿ ದ್ವಿತೀಯ ಆಯುರ್ವೇದ ಸಮ್ಮೇಳನ
  • ಕಜೆ ಆಯುರ್ವೇದಿಕ ಚಾರಿಟಬಲ್ ಫೌಂಡೇಶನ್ ಆಯೋಜನೆ

ಬೆಂಗಳೂರು:ಕಜೆ ಆಯುರ್ವೇದಿಕ್ಚಾರಿಟೇಬಲ್ ಫೌಂಡೇಶನ್ ವತಿಯಿಂದಕೇಂದ್ರ ಆಯುಷ್ ಇಲಾಖೆ ಸಹಯೋಗದೊಂದಿಗೆಡಿ.25 ರಿಂದ28 ವರೆಗೆಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವದ್ವಿತೀಯ ಆಯುರ್ವೇದ ಸಮ್ಮೇಳನದಜನಜಾಗೃತಿಗಾಗಿ ಬೆಂಗಳೂರಿನಗಿರಿನಗರದಿಂದ ಆಯುರ್ವೇದ ಬೈಕ್ಜಾಥಾ ನಡೆಯಿತು.

ಬೈಕ್ಜಾಥಾವನ್ನು ಉದ್ಘಾಟಿಸಿ ಮಾತನಾಡಿದಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ,ಆಟ-ಪಾಠಹಾಗೂ ಚಿಂತನೆ ಸರಿಯಾದಾಗ ಆರೋಗ್ಯಪೂರ್ಣಜೀವನ ನಮ್ಮದಾಗುತ್ತದೆ.ಈ ಹಿನ್ನೆಲೆಯಲ್ಲಿಭಾರತೀಯರದ್ದು ವಸುಧೈವ ಕುಟುಂಬಕಂಎಂಬ ವಿಶ್ವಭ್ರಾತೃತ್ವದ ಚಿಂತನೆಯಾಗಿದೆ.ಕಾಯಿಲೆಗಳುರಸ್ತೆಯ ಹಂಪ್ ಇದ್ದಂತೆ.ನಾವು ವೇಗವಾದಜೀವನಶೈಲಿಯನ್ನು ಅಳವಡಿಸಿಕೊಂಡಾಗಕಾಯಿಲೆಗಳು ಬರುತ್ತವೆ ಎಂದುಅಭಿಪ್ರಾಯಪಟ್ಟರು.

ಜಾಥಾದಲ್ಲಿಬಸವನಗುಡಿಯ ಶಾಸಕ ಎಲ್..ರವಿಸುಬ್ರಮಣ್ಯ,ನಟ ಅಜಯ್ ರಾವ್ಮತ್ತಿತರರು ಪಾಲ್ಗೊಂಡಿದ್ದರು.ಜಾಗೃತಿ ಮೂಡಿಸುವಭಾಗವಾಗಿ ಇಂದು (ಭಾನುವಾರ)ಆಯುರ್ವೇದವಾಕಾಥಾನ್ ಹಾಗೂ ವಿಂಟೇಜ್ ಕಾರ್ರ‌್ಯಾಲಿ ಆಯೋಜಿಸಲಾಗಿದೆ.

ಆಯುರ್ವೇದದ ಮಹತ್ವವನ್ನು ಜನತೆಯ ಮುಂದಿಡಲು ಸಮ್ಮೇಳನವನ್ನು ಸಂಘಟಿಸಲಾಗಿದೆ. ಆಯುರ್ವೇದ ಅನುಭವ ಕೇಂದ್ರಗಳು, ಆಯುರ್ವೇದ ಆಹಾರ ಪ್ರದರ್ಶಿನಿ, ಆಯುರ್ವೇದ ಪಾಕೋತ್ಸವ, ಧನ್ವಂತರಿ ಮಹಾಯಜ್ಞ, ಔಷಧೀಯ ಸಸ್ಯಗಳ ಉಚಿತ ವಿತರಣೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಇರಲಿವೆ. 3 ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net