ಬೆಂಗಳೂರು ನಗರ ಜಿಲ್ಲೆ-4(ಬಿಯುಡಿ) ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು, ಮದ್ಯದಂಗಡಿ ಮತ್ತು ಪಬ್‌ನಲ್ಲಿ ತಕ್ಷಣ ಅಗ್ನಿ ಅವಘಡ ಸಂಭವಿಸಿದರೆ ಏನು ಕ್ರಮಕೈಗೊಳ್ಳಬೇಕು, ಮೊದಲೇ ಬೆಂಕಿ ಅನಾಹುತ ಪತ್ತೆ ಹಚ್ಚುವ ತಡೆಯುವ ವಿಧಾನಗಳು, ರಕ್ಷಣಾ ಕ್ರಮಗಳು ಮತ್ತು ಸರ್ಕಾರ ನಿಗದಿಪಡಿಸಿರುವ ಕಡ್ಡಾಯ ಸುರಕ್ಷತಾ ಮಾನದಂಡಗಳ ಪಾಲನೆ ಕುರಿತು ಮಾಹಿತಿ ಒದಗಿಸಿದರು.