ಏಡ್ಸ್​ ಕುರಿತು ಜಾಗೃತಿ ಅಗತ್ಯ

ಅಥಣಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಏಡ್ಸ್​ ದಿನದ ಅಂಗವಾಗಿ ಜನಜಾಗೃತಿ ಜಾಥಾ ಜರುಗಿತು. ಇ.ಎಸ್​.ಈರಣ್ಣ, ನಾಮದೇವ ಸಾಲಮಂಟಪಿ, ರವಿಕುಮಾರ, ಓಂಕಾರಮೂರ್ತಿ, ರವೀಂದ್ರ ಹಾವರಗಿ, ಆಶಾ ಗಾವಡೆ ಇತರರಿದ್ದರು.
ಅಥಣಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಏಡ್ಸ್​ ದಿನದ ಅಂಗವಾಗಿ ಜನಜಾಗೃತಿ ಜಾಥಾ ಜರುಗಿತು. ಇ.ಎಸ್​.ಈರಣ್ಣ, ನಾಮದೇವ ಸಾಲಮಂಟಪಿ, ರವಿಕುಮಾರ, ಓಂಕಾರಮೂರ್ತಿ, ರವೀಂದ್ರ ಹಾವರಗಿ, ಆಶಾ ಗಾವಡೆ ಇತರರಿದ್ದರು.
Published on
ಅಥಣಿ: ಆಧುನಿಕ ಜೀವನಶೈಲಿಯಿಂದ ಯುವ ಜನತೆ ಏಡ್ಸ್​ನಂತಹ ಮಹಾಮಾರಿಗೆ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದ್ದು, ಇದನ್ನು ತಡೆಗಟ್ಟಲು ಯುವಜನರಲ್ಲಿ ಅರಿವು ಮೂಡಿಸುವುದು ಅವಶ್ಯ ಎಂದು ಅಥಣಿಯ 11ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಸಿವಿಲ್​ ನ್ಯಾಯಾಧೀಶ ಇ.ಎಸ್​.ಈರಣ್ಣ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆ, ಕಾನೂನು ಸೇವಾ ಸಮಿತಿ, ರೋಟರಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ವಿಶ್ವ ಏಡ್ಸ್​ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಧೀಶ ನಾಮದೇವ ಸಾಲಮಂಟಪಿ ಮಾತನಾಡಿದರು. ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ರವಿಕುಮಾರ, ಪ್ರಧಾನ ಸಿವಿಲ್​ ಹಾಗೂ ಜೆಎಂಎ್​ಸಿ ನ್ಯಾಯಾಧೀಶ ಓಂಕಾರಮೂರ್ತಿ, ಎರಡನೇ ಹೆಚ್ಚುವರಿ ಸಿವಿಲ್​ ಮತ್ತು ಜೆಎಂಎ್​ಸಿ ನ್ಯಾಯಾಧೀಶ ರವೀಂದ್ರ ಹಾವರಗಿ, ಎರಡನೇ ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ಸುನಿತಾ ಪ್ರಬಣ್ಣವರ, ರೋಟರಿ ಸಂಸ್ಥಾಪಕ ಅಧ್ಯ ಗಜಾನನ ಮಂಗಸೂಳಿ, ಸಿಡಿಪಿಒ ಮಂಜುನಾಥ ಸೌಂದಲಗೆಕರ, ರೋಟರಿ ಅಧ್ಯ ಸಚಿನ ದೇಸಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net