ಪ್ರಾರಂಭದಲ್ಲಿ ಹೊರ ರಾಜ್ಯಗಳಾದ ತುಮಿಳುನಾಡು ಮತ್ತು ಆಂಧ್ರಪ್ರದೇಶ ಹಾಗೂ ನಮ್ಮ ರಾಜ್ಯದ ಬೆಂಗಳೂರು, ಹೊಸಕೋಟೆ, ದೊಡ್ಡಬಳ್ಳಾಪುರ ಮುಂತಾದ ಕಡೆಗಳಿಂದ ವ್ಯಾಪಾರಸ್ಥರು ಮಾರುಕಟ್ಟೆಗೆ ಲಗ್ಗೆ ಇಟ್ಟ ಕಾರಣ ಪ್ರಾರಂಭದಲ್ಲಿ ರೈತರಿಗೆ ಬೆಲೆ ಕೈಹಿಡಿಯಿತು. ಕಳೆದ ಒಂದು ವಾರದಿಂದ ದೂರದ ವ್ಯಾಪಾರಸ್ಥರು ಮಾರುಕಟ್ಟೆಗೆ ಬರುವುದು ಕಡಿಮೆಯಾಗಿರುವುದರಿಂದ ಬೆಲೆ ಕಡಿಮೆಯಾಗಲು ಕಾರಣವಾಗಿದೆ ಎಂದು ಮಂಡಿ ಮಾಲೀಕರು ಹೇಳುತ್ತಿದ್ದಾರೆ.