ವಿಬಿ-ಜಿ ರಾಮ-ಜಿ ಯೋಜನೆ ಸದುಪಯೋಗ ಪಡೆದುಕೊಳ್ಳಿ

ಬಸವಕಲ್ಯಾಣ ತಾಲೂಕಿನ ಮೊರಖಂಡಿ ಗ್ರಾಮದಲ್ಲಿ ಬುಧವಾರ ವಿಬಿ&ಜಿ ರಾಮ&ಜಿ ಯೋಜನೆ ಕುರಿತು ಜಾಗೃತಿ ಮೂಡಿಸಲಾಯಿತು. ತಾಪಂ ಎಡಿ ಮಹ್ಮದ್​ ಸಲೀಂ, ಪಿಡಿಒ ವಿಷ್ಣುಕಾಂತರಡ್ಡಿ ಪಾಟೀಲ್​,  ಟಿಸಿ ಶಿವರಾಜ ಪಾಟೀಲ್​, ವೀರಾರಡ್ಡಿ ಇತರರಿದ್ದರು.
ಬಸವಕಲ್ಯಾಣ ತಾಲೂಕಿನ ಮೊರಖಂಡಿ ಗ್ರಾಮದಲ್ಲಿ ಬುಧವಾರ ವಿಬಿ&ಜಿ ರಾಮ&ಜಿ ಯೋಜನೆ ಕುರಿತು ಜಾಗೃತಿ ಮೂಡಿಸಲಾಯಿತು. ತಾಪಂ ಎಡಿ ಮಹ್ಮದ್​ ಸಲೀಂ, ಪಿಡಿಒ ವಿಷ್ಣುಕಾಂತರಡ್ಡಿ ಪಾಟೀಲ್​, ಟಿಸಿ ಶಿವರಾಜ ಪಾಟೀಲ್​, ವೀರಾರಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಎಡಿ ಮಹ್ಮದ್​ ಸಲೀಂ ಮನವಿ
  • ಮೊರಖಂಡಿ-ಬೆಟ್ಟಬಾಲಕುಂದಾದಲ್ಲಿ ಜಾಗೃತಿ ಕಾರ್ಯಕ್ರಮ
ಬಸವಕಲ್ಯಾಣ: ವಿಬಿ-ಜಿ ರಾಮ-ಜಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹ್ಮದ್​ ಸಲೀಂ ಹೇಳಿದರು.
ತಾಲೂಕಿನ ಬೆಟ್ಟಬಾಲಕುಂದಾ ಹಾಗೂ ಮೊರಖಂಡಿ ಗ್ರಾಮದಲ್ಲಿ ವಿಬಿ-ಜಿ ರಾಮ-ಜಿ ಯೋಜನೆ ಕುರಿತು ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂತನವಾಗಿ ಅನುಷ್ಠಾಗೊಂಡ ವಿಬಿ-ಜಿ ರಾಮ-ಜಿ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಮಾಡಲು ಸಾಕಷ್ಟು ಅವಕಾಶ ಕಲ್ಪಿಸಲಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಯಶಸ್ವಿ ಗೊಳಿಸಬೇಕು ಎಂದು ತಿಳಿಸಿದರು.
ಹಿಂದಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಒಂದು ಕುಟುಂಬಕ್ಕೆ 100 ದಿನ ಉದ್ಯೋಗ ಖಾತ್ರಿ ನೀಡಲಾಗಿತ್ತು, ಆದರೆ ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ- 125 ದಿನ ಖಾತ್ರಿ ನೀಡಲಾಗಿದೆ ಮತ್ತು ಪ್ರತಿದಿನ 370 ರೂ. ನೀಡಲಾಗುತ್ತಿತ್ತು ಈಗ 382 ರೂ. ಗಳಿಗೆ ಹೆಚ್ಚಿಸಲಾಗಿದೆ ಎಂದರು.
ಬೆಟ್ಟಬಾಲಕುಂದಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಷ್ಣುಕಾಂತರಡ್ಡಿ ಪಾಟೀಲ್​, ಟಿಸಿ ಶಿವರಾಜ ಪಾಟೀಲ್​, ಐಇಸಿ ಸಂಯೋಜಕ ವೀರಾರಡ್ಡಿ, ಟಿಎ ಗಳಾದ ಅವಿನಾಶ, ಸಚಿನ ವೈರಾಗೆ, ಡಿಇಒ ವಿಠಲ, ಸತೀಶ, ಕರಬಸಪ್ಪ, ಕಾಯಕ ಮಿತ್ರಗಳಾದ ನಿಕೀತಾ, ರಜನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net