ಖಾತ್ರಿ ಯೋಜನೆ ಲಾಭ ಪಡೆಯಿರಿ

ಚಿಟಗುಪ್ಪ ತಾಲೂಕಿನ ಚಾಂಗಲೇರಾ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆಯಲ್ಲಿ ತಾಪಂ ಇಒ  ಲಿಂಗರಾಜ ಪಾಟೀಲ್​ ಮಾತನಾಡಿದರು. ರಾಹುಲ್​ ಕೈವಾರೆ, ಸುಶಾಂತಕುಮಾರ, ಸುಧಾಕರ ಪಾಟೀಲ್​ ಇತರರಿದ್ದರು.
ಚಿಟಗುಪ್ಪ ತಾಲೂಕಿನ ಚಾಂಗಲೇರಾ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆಯಲ್ಲಿ ತಾಪಂ ಇಒ ಲಿಂಗರಾಜ ಪಾಟೀಲ್​ ಮಾತನಾಡಿದರು. ರಾಹುಲ್​ ಕೈವಾರೆ, ಸುಶಾಂತಕುಮಾರ, ಸುಧಾಕರ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಒ ಲಿಂಗರಾಜ ಪಾಟೀಲ್​ ಮನವಿ
  • ಚಾಂಗಲೇರಾದಲ್ಲಿ ಗ್ರಾಮ ಸಭೆ ಖಾತ್ರಿ ಯೋಜನೆ ಲಾಭ ಪಡೆಯಿರಿ
ಚಿಟಗುಪ್ಪ: ಕೂಲಿ ಕಾರ್ಮಿಕರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಪಡೆದು ಜೀವನೋಪಾಯ ಬಲಪಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಿಂಗರಾಜ ಪಾಟೀಲ್​ ಹೇಳಿದರು.
ತಾಲೂಕಿನ ಚಾಂಗಲೇರಾ ಗ್ರಾಮ ಪಂಚಾಯಿತಿ ಬುಧವಾರ ಆವರಣದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಜಿಎನ್​ಆರ್​ಇಜಿಎಸ್​) ಹಾಗೂ 15ನೇ ಹಣಕಾಸು ಆಯೋಗದ ಕಾಮಗಾರಿಗಳ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ವಿಕಸಿತ್​ ಭಾರತ್​ ಗ್ಯಾರಂಟಿ ಫಾರ್​ ರೋಜ್​ಗಾರ್​ ಮತ್ತು ಆಜೀವಿಕಾ ಮಿಷನ್​ ಗ್ರಾಮೀಣ ಯೋಜನೆಯಡಿ ಪ್ರತಿಯೊಂದು ಕುಟುಂಬಕ್ಕೂ ವರ್ಷಕ್ಕೆ 125 ಮಾನವ ದಿನಗಳ ಉದ್ಯೋಗ ನೀಡುವ ಅವಕಾಶವಿದ್ದು, ಪ್ರತಿ ಕೂಲಿ ಕಾರ್ಮಿಕರಿಗೆ ದಿನಕ್ಕೆ 382 ರೂ. ಕೂಲಿ ನೀಡಲಾಗುತ್ತಿದೆ. ಯೋಜನೆಯ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯಕ್ರಮ ವ್ಯವಸ್ಥಾಪಕ ರಾಹುಲ್​ ಕೈವಾರೆ ಸಾಮಾಜಿಕ ಲೆಕ್ಕ ಪರಿಶೋಧನೆಯ ಉದ್ದೇಶ, ಪ್ರಕ್ರಿಯೆ ಹಾಗೂ ಸಾರ್ವಜನಿಕರ ಪಾತ್ರದ ಕುರಿತು ಸಮಗ್ರ ಮಾಹಿತಿ ನೀಡಿದರು.
ಗ್ರಾಮಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಸುಶಾಂತಕುಮಾರ, ತಾಂತ್ರಿಕ ಸಂಯೋಜಕ ಸುಧಾಕರ ಪಾಟೀಲ್​, ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ವಿಶ್ವನಾಥ, ತಾಂತ್ರಿಕ ಸಹಾಯಕ ಮೈಬೂಬಸಾಬ್​, ಪಂಚಾಯಿತಿ ಕಾರ್ಯದರ್ಶಿ ಶ್ಯಾಮುವೆಲ್​, ಚಿತ್ರಶೇಖರ, ಜಾಕೀರ್​ ಹುಸೇನ್​, ಗಣಪತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net