ವಿಡಿಯೋದಲ್ಲಿ ಏನಿದೆ: 13 ಸೆಕೆಂಡ್ ಇರುವ ವಿಡಿಯೋದಲ್ಲಿ ಅಪ್ಪಿ ಅಣ್ಣ ಎನ್ನುವವರನ್ನು ಆಧರಿಸಿ ಮಾತನಾಡಿರುವ ಮೋಹನ್, "ನಾವು ಯಾರಿಗೂ ಮೋಸ ಮಾಡಿಲ್ಲ. ಸಾಯುವ ನಿರ್ಧಾರ ಮಾಡಿದ್ದೇವೆ, ತುಂಬಾ ಕಷ್ಟ ಆಗುತ್ತಿದೆ. ಏನು ಮಾಡಲೂ ನಮ್ಮ ಬಳಿ ಆಗುತ್ತಿಲ್ಲ, ನಾನಿರುವ ದೊಡ್ಡ ಮನೆ ಮೀನಾ ಅವರಿಗೆ ಕೊಟ್ಟುಬಿಡು, ಜಮೀನು ಮಾರಾಟ ಮಾಡಿ ನೀನು ಸ್ವಲ್ಪ ಹಣ ತೆಗೆದುಕೊ, ನನ್ನ ಅಕ್ಕನನ್ನು ನೋಡಿಕೊಂಡ ಭಾನು ಅವರಿಗೆ ಸ್ವಲ್ಪ ಹಣ ಕೊಡು, ನಾವು ಯಾರಿಗೂ ಮೋಸ ಮಾಡಿಲ್ಲ. ಬಡ್ಡಿ ಕಟ್ಟಿ ಸಾಕಾಗಿದೆ. ಹಾಗಾಗಿ ನಾವು ಆತ್ಮಹತ್ಯೆ ನಿರ್ಧಾರ ಮಾಡಿದ್ದೇವೆ. ....ನಾವು ಹೋಗುತ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ವಿಡಿಯೋದಲ್ಲಿ ತಾಯಿ ಆಶಾ, ಮಗ ಮೋಹನ್ ಹಾಗೂ ಮಗ ಮಯಾಂಕ್ ಇದ್ದು, ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ವಿಡಿಯೋ ಮಾಡಿದ ಕೆಲವೇ ಣದ ಬಳಿಕ ಮೋಹನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.