ಪತ್ನಿಯ ಮೇಲಿನ ದ್ವೇಷಕ್ಕೆ ತಮಿಳುನಾಡಿನಿಂದ ಬೈಕ್‌ನಲ್ಲೇ ಬಂದ ಆರೋಪಿ ವೆಂಕಟೇಶನ್, ಆ್ಯಸಿಡ್, ಚಾಕು ಮತ್ತು ಮಾರಕಾಸ್ತ್ರ ತೆಗೆದುಕೊಂಡು ಬಂದಿದ್ದನು. ಮಧುಮಿತಾ, ಮೊದಲ ಪಾಳಿಯ ಕೆಲಸಕ್ಕೆ ಬೆಳಗ್ಗೆಯೇ ಕ್ಲಿನಿಕ್‌ಗೆ ಬಂದು 9ಗಂಟೆ ಸುಮಾರಿಗೆ ಆಸ್ಪತ್ರೆ ಸಮೀಪದಲ್ಲೇ ಉಪಾಹಾರಕ್ಕೆ ಹೋಗುತ್ತಿದ್ದರು. ಆಗ ಆರೋಪಿ ಹೆಲ್ಮೆಟ್ ಧರಿಸಿಕೊಂಡೆ ಆಕೆ ಮೇಲೆ ದಾಳಿಗೆ ಮುಂದಾಗಿದ್ದಾನೆ. ಮಧುಮಿತಾ ತಪ್ಪಿಸಿಕೊಂಡು ಆಸ್ಪತ್ರೆಯ ಪಾರ್ಕಿಂಗ್ ಸ್ಥಳ್ಕಕೆ ಓಡಿಹೋಗಿದ್ದಾಳೆ. ಹಿಂಬಾಲಿಸಿಕೊಂಡು ಹೋಗಿದ್ದ ಆರೋಪಿ ಆ್ಯಸಿಡ್ ಎರಚಿದ್ದಾನೆ. ನಂತರ ಮಾರಕಾಸ್ತ್ರದಿಂದ ಆಕೆಯ ಕುತ್ತಿಗೆ ಹಾಗೂ ದೇಹದ ಇತರೆಡೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆಕೆಯ ರಕ್ಷಣೆಗೆ ಧಾವಿಸಿದ ಸ್ಥಳೀಯರ ಮೇಲೂ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ. ಈ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೇರೆಯಾಗಿವೆ.