ನೀರಗಂಟಿಯಿಂದ ಕೈ ಮುಖಂಡನ ಮೇಲೆ ಹಲ್ಲೆ

Attack on Kai leader with a water cannon
Attack on Kai leader with a water cannon
Published on
ಬಾಗೇಪಲ್ಲಿ: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವಂತೆ ತಾಕೀತು ಮಾಡಿದ ಕಾಂಗ್ರೆಸ್​ ಮುಖಂಡನ ಮೇಲೆ ಗುರುವಾರ ನೀರಗಂಟಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಕಾನಗಮಾಕಲಪಲ್ಲಿ ಗ್ರಾಮದಲ್ಲಿ ನೀರಿನ ಘಟಕದಿಂದ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ ಎಂದು ಕೈ ಮುಖಂಡ ರವೀಂದ್ರನಾಥ್​ ಗ್ರಾಪಂ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ ರಾಮರೆಡ್ಡಿ ಗ್ರಾಮದಲ್ಲಿ ಪರಿಶೀಲಿಸಿ ನೀರಿನ ಘಟಕದಲ್ಲಿ ಸ್ವಚ್ಛತೆ ಕಾಪಾಡಿ ನೀರು ಪೂರೈಸುವಂತೆ ನೀರಗಂಟಿ ಗಣೇಶ್​ಗೆ ಸೂಚಿಸಿದ್ದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರವೀಂದ್ರನಾಥ್​, ನೀರು ಸರಬರಾಜು ಮಾಡುವಲ್ಲಿ ನೀರಗಂಟಿ ರ್ನಿಲಕ್ಷ$್ಯ ವಹಿಸಿದ್ದಾರೆ. ಪ್ರತಿನಿತ್ಯ ಬೆಳಗ್ಗೆ, ಸಂಜೆ ನೀರು ಬಿಡುವಂತೆ ನೀರಗಂಟಿಗೆ ತಾಕೀತು ಮಾಡುತ್ತಿದ್ದಂತೆ ಗ್ರಾಪಂ ಸಿಬ್ಬಂದಿ ಸಮ್ಮುಖದಲ್ಲೇ ಕಲ್ಲಿನಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾನೆ. ರವೀಂದ್ರನಾಥ್​ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗಣೇಶ್​ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net