ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ.. Assault on female PSI

AI Photo
AI Photo
Published on

ಪ್ರಮುಖ ಮುಖ್ಯಾಂಶಗಳು

  • ಕೈ ಹಿಡಿದು ಎಳೆದಾಡಿ, ಅಶ್ಲೀಲ ಪದಗಳಿಂದ ನಿಂದನೆ
  • ಕೆ.ಆರ್.ಪುರ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ
  • ಆರೋಪಿಗಳಿಂದ ಅಧಿಕಾರಿಯ ಬಲಗೈಗೆ ಗಾಯ

ಬೆಂಗಳೂರು:

ಜಗಳ ಬಿಡಿಸಲು ಹೋಗಿದ್ದ ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮೇಲೆ ಹಲ್ಲೆ ಮಾಡಿದ್ದಲ್ಲದೆ, ಅಶ್ಲೀಲ ಪದಗಳಿಂದ ನಿಂದಿಸಿದ ಪ್ರಕರಣ ಕೆ.ಆರ್. ಪುರದಲ್ಲಿ ನಡೆದಿದೆ.

ಕೆ.ಆರ್.ಪುರ ಸಂಚಾರ ಠಾಣೆ ಪಿಎಸ್‌ಐ ನಯನಾ ಹಲ್ಲೆಗೆ ಒಳಗಾದ ಅಧಿಕಾರಿ. ಇವರು ನೀಡಿದ ದೂರಿನ ಮೇರೆಗೆ ಹೇಮಂತ್ ರೆಡ್ಡಿ, ರಾಹುಲ್, ಹರ್ಷಿತ್ ರೆಡ್ಡಿ ಹಾಗೂ ರಾಧಾಕೃಷ್ಣ ರೆಡ್ಡಿ ಸೇರಿ ಇತರರ ವಿರುದ್ಧ ಎ್ಐಆರ್ ದಾಖಲಾಗಿದ್ದು, ಆರೋಪಿಗಳಿಗೆ ನೋಟಿಸ್ ನೀಡಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆ.ಆರ್. ಪುರದ ಭಟ್ಟರಹಳ್ಳಿ ಸಿಗ್ನಲ್ ಬಳಿ ಆ.12ರಂದು ಬೆಳಗ್ಗೆ 9 ಗಂಟೆ ವೇಳೆ ಘಟನೆ ನಡೆದಿದೆ. ಕೃತ್ಯವು ಅಧಿಕಾರಿಗಳ ಬಾಡಿವೋರ್ನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸಮೇತ ದೂರು ದಾಖಲಿಸಿದ್ದಾರೆ.
ಆರೋಪಿ ಹೇಮಂತ್ ರೆಡ್ಡಿ ಸಂಚಾರ ನಿಯಮ ಉಲ್ಲಂಸಿ ಟ್ರಾಫಿಕ್ ಜಾಮ್‌ವುಂಟು ಮಾಡಿ ಸಾರ್ವಜನಿಕರೊಬ್ಬರ ಜತೆಗೆ ಜಗಳ ಮಾಡುತ್ತಿದ್ದ. ಸ್ಥಳದಲ್ಲಿದ್ದ ಸಂಚಾರ ಪೊಲೀಸ್ ಪೆದೆ ಮಂಜುನಾಥ್ ಅವರು ಆರೋಪಿಗೆ ಜಗಳ ನಿಲ್ಲಿಸಿ, ಟ್ರಾಫಿಕ್ ಜಾಮ್ ಆಗಿದೆ. ಮೊದಲು ವಾಹನ ತೆಗೆಯಿರಿ ಎಂದಿದ್ದಾರೆ. ಆರೋಪಿ ಇಷ್ಟಕ್ಕೆ ಅವರೊಂದಿಗೂ ಜಗಳಕ್ಕೆ ಬಿದ್ದಿದ್ದ. ಆಗ ಮಹಿಳಾ ಪಿಎಸ್‌ಐ ನಯನಾ ಅವರು ಸ್ಥಳಕ್ಕೆ ಆಗಮಿಸಿ ‘ಏ ಜಗಳ ನಿಲ್‌ಸ್ರಪ್ಪ’ ಎಂದು ಮಧ್ಯ ಪ್ರವೇಶಿಸಿದಾಗ ಆಕ್ರೋಶಗೊಂಡಿದ್ದ ಆರೋಪಿಯು ಮಹಿಳಾ ಅಧಿಕಾರಿಯ ಕೈ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾನೆ.
ಆರೋಪಿ ತನ್ನ ಸಹಚರ ರಾಹುಲ್ ಎಂಬಾತನನ್ನು Phone ಮಾಡಿ ಕರೆಸಿದ್ದಾನೆ. ಆತ ನಾನು ವಿದ್ಯಾರ್ಥಿ ನಿಮ್ಮಿಂದ ಏನೂ ಮಾಡೊದಕ್ಕೆ ಆಗುವುದಿಲ್ಲ ಎಂದು ಅವಾಜ್ ಹಾಕಿದ್ದಾನೆ. ಆ ವೇಳೆಗೆ ಪ್ರಮುಖ ಆರೋಪಿ ಹೇಮಂತ ರೆಡ್ಡಿಯ ಸಹೋದರ ಹರ್ಷಿತ್ ರೆಡ್ಡಿ ಹಾಗೂ ಆತನ ತಂದೆ ರಾಧಾಕೃಷ್ಣ ರೆಡ್ಡಿ ಸ್ಥಳಕ್ಕೆ ಬಂದು, ‘ಏ ದರಿದ್ರದವಳೆ, ಹೊಟ್ಟೆಗೆ ಏನು ತಿಂತಿಯಾ-ತಲೇಲಿ ಬುದ್ಧಿ ಇಲ್ವಾ. ನಾನ್ ಲಾಯರ್, ನಿನ್ ಬಟ್ಟೆ ಬಿಚ್ಚಿಸಿ ಬಿಡ್ತಿನಿ ಎಂದು ದಮಕಿ ಹಾಕಿದ್ದಾನೆ.

ಜಾಲತಾಣದಲ್ಲಿ Photo
ಹರಿಬಿಡುವುದಾಗಿ ಬೆದರಿಕೆ..!

ಆರೋಪಿಗಳು ಮಹಿಳಾ ಅಧಿಕಾರಿಗೆ ಗೌರವ ನೀಡದೇ ಅವಾಚ್ಯ ಹಾಗೂ ಅಶ್ಲೀಲ ಪದಗಳಿಂದ ಸಾರ್ವಜನಿಕ ಪ್ರದೇಶದಲ್ಲಿ ನಿಂದಿಸಿದ್ದಾರೆ. ಇಷ್ಟೇ ಅಲ್ಲದೆ, ಮಹಿಳಾ ಅಧಿಕಾರಿಯ ೆಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತೇವೆಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net