

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಮಲ್ಲೇಶ್ವರದಕನ್ನಡ ಗಣಕ ಉಚಿತ ತರಬೇತಿ ಕೇಂದ್ರವುಮಾತೃಭಾಷೆ ದಿನಾಚರಣೆ ಹಿನ್ನಲೆಯಲ್ಲಿಹಮ್ಮಿಕೊಂಡಿದ್ದ ಐಟಿ ಕನ್ನಡಕಾರ್ಯಾಗಾರಕ್ಕೆ ಮಾಜಿ ಉಪಮುಖ್ಯಮಂತ್ರಿಹಾಗೂ ಮಲ್ಲೇಶ್ವರ ಶಾಸಕಡಾ.ಸಿ.ಎನ್.ಅಶ್ವತ್ಥನಾರಾಯಣಚಾಲನೆ ನೀಡಿದರು.
ಈ ವೇಳೆಮಾತನಾಡಿದ ಅವರು,ಮಾತೃಭಾಷೆ ಅಭಿಮಾನಎಲ್ಲರಲ್ಲೂ ಇರಬೇಕು.ವ್ಯಾವಹಾರಿಕವಾಗಿಎಷ್ಟೇ ಅನ್ಯಭಾಷೆಯನ್ನು ಕಲಿತರೂನಮ್ಮ ಮಾತೃಭಾಷೆ ನಮಗೆ ಅತ್ಯಗತ್ಯ.ಆ ಕಾರಣದಿಂದಲೇಆಸಕ್ತ ಯುವಕ -ಯುವತಿಯರಿಗೆಕನ್ನಡ ಗಣಕ ತರಬೇತಿ ನೀಡುವಕೆಲಸವನ್ನು ಆರ್.ಎ.ಪ್ರಸಾದ್ಕಳೆದ ಹಲವು ವರ್ಷಗಳಿಂದ ಮಾಡಿಕೊಂಡುಬಂದಿದ್ದಾರೆ.ಕನ್ನಡ ಗಣಕ ಉಚಿತತರಬೇತಿ ಕೇಂದ್ರದಿಂದ ಹಲವರುತರಬೇತಿ ಪಡೆದು ಬದುಕು ಕಟ್ಟಿಕೊಂಡಿದ್ದಾರೆ.ಮಾತೃಭಾಷೆದಿನಾಚರಣೆ ಸಂದರ್ಭದಲ್ಲಿ ಅರ್ಥಪೂರ್ಣಕಾರ್ಯಾಗಾರ ಹಮ್ಮಿಕೊಂಡಿರುವುದುಸ್ತುತ್ಯಾರ್ಹ.ಸರ್ಕಾರ,ವಿವಿಧ ಸಂಘಸಂಸ್ಥೆಗಳು ಇಂತಹ ಕಾರ್ಯಕ್ಕೆಹೆಚ್ಚಿನ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿಕನ್ನಡ ಅಭಿವೃದ್ಧಿ ಪ್ರಾಧಿಕಾರದಕಾರ್ಯದರ್ಶಿ ಡಾ.ಸಂತೋಷ್ಹಾನಗಲ್, ಕನ್ನಡಪರಹೋರಾಟಗಾರಿ ಕನ್ನಡ ನಾಣಿ,ತರಬೇತಿ ಕೇಂದ್ರದಸಂಸ್ಥಾಪಕ ಆರ್.ಎ.ಪ್ರಸಾದ್ಮತ್ತಿತರರು ಇದ್ದರು.
ಬೆಂಗಳೂರು ಎಲ್ಲ ಜಾತಿ, ಭಾಷೆಯ ಜನರಿಗೂ ಅವಕಾಶ ನೀಡಿದೆ. ಮನೆಯಲ್ಲಿ ಅವರವರ ಭಾಷೆ ಮಾತನಾಡಲಿ ಆದರೆ ಹೊರಗಡೆ ವ್ಯವಹಾರಕ್ಕೆ ಕನ್ನಡವನ್ನೇ ಬಳಸಬೇಕು.