ಶಹಾಬಾದ್: ಹಳೇ ಶಹಾಬಾದ್ ಬಡಾವಣೆಯಲ್ಲಿ ಸುಮಾರ ನಾಲ್ಕು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಪಾಂಡುರಂಗ ರುಕ್ಮಿಣಿ ದೇವರ ಆಷಾಢ ಉತ್ಸವ ಶುಕ್ರವಾರ ಪ್ರಾರಂಭವಾಯಿತು. ಬೆಳಗ್ಗೆ ದೇವರಿಗೆ ಕಾಕಡಾರತಿ, ಪಂಚಾಮೃತ, ಶ್ರೀ ಸೂಕ್ತ, ಪುರುಷ ಸೂಕ್ತ ಅಭಿಷೇಕ ನಡೆಯಿತು. ನಂತರ ವಿಶೇಷ ಅಲಂಕಾರ, ಐದು ದಿನಗಳ ಅಖಂಡ ದೀಪ ಸ್ಥಾಪನೆ ಜರುಗಿತು. ಮಹಾನೈವೇದ್ಯ, ಮಹಾ ಮಂಗಳಾರತಿ, ಮಹಾಪ್ರಸಾದ ವಿತರಣೆ ನಡೆಯಿತು. ಪ್ರತಿದಿನ ಚಕ್ರ ಭಜನೆ ಜರುಗಲಿದೆ. ಬುಧವಾರ ಭವ್ಯ ಮೆರವಣಿಗೆ, ಗೋಪಾಳ ಕಾವಲ, ಚಂದ್ರಭಾಗದಲ್ಲಿ ದೀಪ ವಿಸರ್ಜಣೆ ನಡೆಯುವುದು. ಅಪ್ಪಾರಾವ ಮಾಲಿಪಾಟೀಲ್, ಲ್ಮಕಾಂತ ಮಾಲಿಪಾಟೀಲ್, ರಮೇಶ ಭಟ್ಟ, ವಾಮನರಾವ ಮಾಲಿಪಾಟೀಲ್ ಇತರರಿದ್ದರು.