ಉದ್ಯೋಗ ಬಿಡಿ ಉದ್ಯಮಿಗಳಾಗಿ

ಕಲಬುರಗಿ ಪಿಡಿಎ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಮದ್ರಾಸ್​ ಐಐಟಿ ಪ್ರಾಧ್ಯಾಪಕ ಡಾ.ರವಿಕುಮಾರ್​ ಚಾಲನೆ ನೀಡಿದರು. ಶಶೀಲ್​ ನಮೋಶಿ, ರಾಜಾ ಭೀಮಳ್ಳಿ, ಉದಯ ಚಿಂಚೋಳಿ, ಡಾ.ಸಿದ್ರಾಮ್​ ಪಾಟೀಲ್​, ಶ್ರೀಹರ್ಷ ಜೋಶಿ, ವಿವೇಕ ಕಟಗಿ ಇತರರಿದ್ದರು.
ಕಲಬುರಗಿ ಪಿಡಿಎ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಮದ್ರಾಸ್​ ಐಐಟಿ ಪ್ರಾಧ್ಯಾಪಕ ಡಾ.ರವಿಕುಮಾರ್​ ಚಾಲನೆ ನೀಡಿದರು. ಶಶೀಲ್​ ನಮೋಶಿ, ರಾಜಾ ಭೀಮಳ್ಳಿ, ಉದಯ ಚಿಂಚೋಳಿ, ಡಾ.ಸಿದ್ರಾಮ್​ ಪಾಟೀಲ್​, ಶ್ರೀಹರ್ಷ ಜೋಶಿ, ವಿವೇಕ ಕಟಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮದ್ರಾಸ್​ ಐಐಟಿ ಪ್ರಾಧ್ಯಾಪಕ ಡಾ.ರವಿಕುಮಾರ ಸಲಹೆ
  • ಪಿಡಿಎ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಕಲಬುರಗಿ: ಸಿರಾಮಿಕ್​ ವಿದ್ಯಾರ್ಥಿಗಳು ಬರಿ ಉದ್ಯೋಗಕ್ಕಾಗಿ ಹಾತೊರೆಯದೆ ಉದ್ಯಮಿಗಳಾಗಿ ಇನ್ನೊಬ್ಬರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಐಐಟಿ ಮದ್ರಾಸ್​ ಪ್ರಾಧ್ಯಾಪಕ, ಎಕ್ಸಾರ್ಡಿನರಿ ಸೆಂಟರ್​ ಮುಖ್ಯಸ್ಥ ಡಾ.ರವಿಕುಮಾರ್​ ಸಲಹೆ ಮಾಡಿದರು.
ಕಲಬುರಗಿ ಪಿಡಿಎ ಇಂಜಿನಿಯರಿಂಗ್​ ಕಾಲೇಜಿನ ಸಿರಾಮಿಕ್​ ಮತ್ತು ಸಿಮೆಂಟ್​ ವಿಭಾಗದ ಇಂಡಿಯನ್​ ಸಿರಾಮಿಕ್​ ಸೊಸೈಟಿ ಸ್ಟೂಡೆಂಟ್​ ಚಾಪ್ಟರ್​ ಶನಿವಾರ ಆಯೋಜಿಸಿದ್ದ ಸಿರಾಮಿಕ್ಸ್​ :ಎಜ್ಯುಕೇಶನ್​ ಟು ಎಂಟರ್​ಪೆಸೆಸ್​ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಟ್ಟಡ, ನಿತ್ಯ ಬಳಕೆಯಲ್ಲಿ ಬೇಕಾಗುವ ಸಿಮೆಂಟ್​, ಟೈಲ್ಸ್​, ಕಪ್​, ಸೊಸರ್​ಗಳಾಗಲಿ, ಅಂತರಿ ಯಾನಕ್ಕೆ ಬೇಕಾಗುವ ಸಿಲಿಕಾ ಟೈಲ್ಸ್​ಗಳಾಗಲಿ, ಸ್ಟೀಲ್​ ಉದ್ಯಮಕ್ಕೆ ಬೇಕಾಗುವ ಅತಿ ಉಷ್ಣ ರೋಧಕ ರಿಫ್ಯಾಕ್ಟರಿ ಇಟ್ಟಿಗೆಗಳಾಗಲಿ, ಆಧುನಿಕ ಎಲೆಕ್ಟ್ರಾನಿಕ್​ ಉಪಕರಣಗಳಂತಹ ಸೆಲ್​ ಫೋನ್​, ಲ್ಯಾಪ್ಟಾಪ್​ ಕಂಪ್ಯೂಟರ್​ಗಳಲ್ಲಿನ ಕೆಪಾಸಿಟರ್​, ಪಿಸೋ ಎಲೆಕ್ಟ್ರಿಕ್​ ಮಟೀರಿಯಲ್ಸ್​, ಸೆನ್ಸರ್​ಗಳೆಲ್ಲವೂ ಸಿರಾಮಿಕ್​ ವಸ್ತುಗಳೆ ಆಗಿವೆ ಎಂದರು.
ಅಧ್ಯತೆ ವಹಿಸಿದ ಹೈ.ಕ.ಶಿಣ ಸಂಸ್ಥೆಯ ಅಧ್ಯ ಡಾ.ಶಶಿಲ್​ ನಮೋಶಿ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿ ಬಳಗ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜನೆ ಮಾಡಿದ್ದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಕ್ಕೆ ನಮ್ಮ ಕಾಲೇಜಿನ ಮಾಜಿ ವಿದ್ಯಾರ್ಥಿಗಳು ಕೈಜೋಡಿಸಿರುವುದು ಇನ್ನಷ್ಟು ಹೆಮ್ಮೆ ಮೂಡಿಸಿದೆ ಎಂದರು.
ಸಂಸ್ಥೆಯ ಉಪಾಧ್ಯ ರಾಜಾ ಭೀಮಳ್ಳಿ, ಇಂಡಿಯನ್​ ಸಿರಾಮಿಕ್​ ಸೊಸೈಟಿಯ ರಾಷ್ಟ್ರೀಯ ಉಪಾಧ್ಯರು, ಹೈದರಾಬಾದ್​ ಬಿಎಚ್​ಇಎಲ್​ ಜನರಲ್​ ಮ್ಯಾನೇಜರ್​ ಡಾ.ಸಿ.ಡಿ.ಮಧುಸೂಧನ್​, ಇಂಡಿಯನ್​ ಸಿರಾಮಿಕ್​ ಸೊಸೈಟಿ ಕರ್ನಾಟಕ ಚಾಪ್ಟರ್​ ಅಧ್ಯ ಡಾ.ಶಾಮರಾವ್​ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ ಗೌರವ ಅತಿಥಿಗಳಾಗಿದ್ದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ನ್ಯಾಷನಲ್​ ಇನ್ಸ್​ಟಾಲ್​ ಟೆಕ್ನಾಲಜಿ ಸುರತ್ಕಲ್​ ಡಾ.ಸೌಮೇನ್​ ಮಂಡಲ್​, ಡಿಎಂಆರ್​ಎಲ್​ ಹೈದರಾಬಾದ್​ ವಿಾನಿ ಡಾ.ವೆಂಕಟ್​ ಏಕಾದಪುರೆ, ಬಳ್ಳಾರಿಯ ಜೆಎಸ್​ಡಬ್ಲೂ$್ಯ ಸ್ಟೀಲ್​ ಕಂಪನಿಯ ಜನರಲ್​ ಮ್ಯಾನೇಜರ್​ ಶ್ರೀಹರ್ಷ ಜೋಶಿ, ಅಲ್ಟ್ರಾಟೆಕ್​ ಸಿಮೆಂಟ್​ ಕಂಪನಿಯ ವ್ಯವಸ್ಥಾಪಕ ವಿವೇಕ ಕಟಗಿ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
"

ಇಂದಿನ ಅಧುನಿಕ ಜಗತ್ತಿಗೆ ಸಿರಾಮಿಕ್​ ವಸ್ತುಗಳು ಅತಿ ಅಗತ್ಯ. ಸಿರಾಮಿಕ್​ ಇಂಜಿನಿಯರ್​ಗಳ ಅವಶ್ಯಕತೆ ಇದೆ, ಸಿರಾಮಿಕ್​ ೇತ್ರದಲ್ಲಿ ಬರಿ ಉದ್ಯೋಗವಲ್ಲದೆ, ಉದ್ಯಮಿಗಳಾಗುವ ವಿಫುಲ ಅವಕಾಶಗಳಿವೆ.

ಡಾ.ರವಿಕುಮಾರ್​,

ಪ್ರಾಧ್ಯಾಪಕ, ಐಐಟಿ ಮದ್ರಾಸ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net