ದಸರಾ ಉದ್ಘಾಟಿಸಲು ಅರುಣ್ ಯೋಗಿರಾಜ್ ಆಯ್ಕೆಯಾಗಲಿ

ಮಹೇಶ ವಿಶ್ವಕರ್ಮ
ಮಹೇಶ ವಿಶ್ವಕರ್ಮ
Published on
ವಿಜಯವಾಣಿ ಸುದ್ದಿಜಾಲ ಚಿಂಚೋಳಿ
ಅಯೋಧ್ಯೆಯ ಶ್ರೀರಾಮ ಮಂದಿರದ ಬಾಲರಾಮನ ದಿವ್ಯ ವಿಗ್ರಹವನ್ನು ಕೆತ್ತುವ ಮೂಲಕ ವಿಶ್ವದ ಗಮನ ಸೆಳೆದಿರುವ ಹೆಮ್ಮೆಯ ಶಿಲ್ಪಿ ಅರುಣ ಯೋಗಿರಾಜ್ ಅವರನ್ನು ದಸರಾ ಉದ್ಘಾಟಿಸಲು ಆಯ್ಕೆ ಮಾಡಬೇಕು ಎಂದು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಮಹೇಶ ವಿಶ್ವಕರ್ಮ ಒತ್ತಾಯಿಸಿದ್ದಾರೆ.

ಅರುಣ್ ಯೋಗಿರಾಜ್ ತಮ್ಮ ಅಪೂರ್ವ ಶಿಲ್ಪಿಕಲೆ ಮೂಲಕ ಭಾರತದ ಸಾಂಸ್ಕೃತಿ, ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿರುವ ಕನ್ನಡ ನಾಡಿನ ಹಾಗೂ ಮೈಸೂರಿನ ಗೌರವದ ಪ್ರತೀಕವಾಗಿದ್ದಾರೆ. ಅವರ ಸಾಧನೆ ಗುರುತಿಸಿ, ನಾಡಹಬ್ಬ ದಸರಾ ಉದ್ಘಾಟನೆಯ ಗೌರವವನ್ನು ನೀಡುವುದು ಮೈಸೂರು ಹಾಗೂ ಕರ್ನಾಟಕದ ಕಲಾ ಪರಂಪರೆಗೆ ಸಲ್ಲುವ ವಿಶೇಷ ಸನ್ಮಾನವಾಗಲಿದೆ.

ಆದ್ದರಿಂದ 2026ರ ದಸರಾ ಮಹೋತ್ಸವವನ್ನು ಅರುಣ್ ಯೋಗಿರಾಜ್ ಅವರ ಮೂಲಕ ಉದ್ಘಾಟಿಸುವ ಮೂಲಕ ರಾಜ್ಯ ಸರಕಾರ ಅವರ ಸಾಧನೆಗೆ ಗೌರವ ಸಲ್ಲಿಸಬೇಕೆಂದು ವಿನಮ್ರವಾಗಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net