ಬದುಕಿಗೆ ಆದರ್ಶ ತುಂಬುವುದು ಕಲೆ

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ  ಕಲಾಸಂಭ್ರಮ ಕಾರ್ಯಕ್ರಮವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಆರ್.ಐಶ್ವರ್ಯಾ, ಗುಂಡಪ್ಪಗೌಡ, ಪಿ.ವಿಶ್ವನಾಥ್, ಶ್ರೀಶೈಲ ರಾಮಣ್ಣವರ್, ಕೆ.ಸಿ.ತೇಜಸ್ ಬಾಬು ಇನ್ನಿತರರಿದ್ದರು.
ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಲಾಸಂಭ್ರಮ ಕಾರ್ಯಕ್ರಮವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಆರ್.ಐಶ್ವರ್ಯಾ, ಗುಂಡಪ್ಪಗೌಡ, ಪಿ.ವಿಶ್ವನಾಥ್, ಶ್ರೀಶೈಲ ರಾಮಣ್ಣವರ್, ಕೆ.ಸಿ.ತೇಜಸ್ ಬಾಬು ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮತ
ಮೈಸೂರು: ವೃತ್ತಿಪರ ಕೋರ್ಸ್‌ಗಳು ಜೀವನೋಪಾಯಕ್ಕಾಗಿ ಇದ್ದರೆ, ಕಲೆಯು ಆದರ್ಶ ಬದುಕಿಗೆ ಸ್ಫೂರ್ತಿಯನ್ನು ತುಂಬುತ್ತದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ  ಆಯೋಜಿಸಿದ್ದ ಪ್ರಸಕ್ತ ಸಾಲಿನ ಕಲಾಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಭಾವನೆ ಅಭಿವ್ಯಕ್ತಿಸುವ ಸಾಧನವೇ ಭಾಷೆ. ಎಲ್ಲರೂ ತಮ್ಮ ಮಾತೃಭಾಷೆ ಪ್ರೀತಿಸಬೇಕು. ಇತರ ಭಾಷೆಗಳನ್ನು ಕಲಿತು, ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಲೆಯು ವೇದಿಕೆಗೆ ಸೀಮಿತವಾಗಬಾರದು. ಅದು ಬದುಕಿಗೆ ಅನ್ವಯವಾಗಬೇಕು. ಆಗ ಬದುಕು ನಿಸ್ಸಾರವಾಗದೆ ಬಣ್ಣಮಯವಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಕಲಾಸಂಭ್ರಮ ಕಾರ್ಯಕ್ರಮ ಅರ್ಥಪೂರ್ಣವಾದುದು. ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಅನಾವರಣಗೊಳಿಸಲು ಈ ತರಹದ ವೇದಿಕೆ ಅತ್ಯಗತ್ಯವಾಗಿದ್ದು, ಈ ರೀತಿಯ ಕಾರ್ಯಕ್ರಮಗಳು ಯಶಸ್ವಿಯಾಗಬೇಕು. ಆ ಮೂಲಕ ಪ್ರತಿಭೆಗಳು ಬೆಳಕಿಗೆ ಬರಬೇಕು ಎಂದರು.
ಮೈಸೂರು ಜಾನಪದ ಕಲೆಗಳ ತವರೂರು. ಕಲೆ, ಸಾಹಿತ್ಯ, ಪರಂಪರೆ ಇಲ್ಲಿ ಹಾಸುಹೊಕ್ಕಾಗಿದೆ. ನಗರದಲ್ಲಿರುವ ಪಾರಂಪರಿಕ ಕಟ್ಟಡಗಳೇ ಇದಕ್ಕೆ ಸಾಕ್ಷಿ. ಮೈಸೂರಿನ ಪರಂಪರೆಯ ಘನತೆ ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಉತ್ತಮ ವಾತಾವರಣ, ಪರಿಸರ ಹಾಗೂ ಪರಂಪರೆಗೆ ಮೈಸೂರು ಹೆಸರುವಾಸಿಯಾಗಿದ್ದು, ಮೈಸೂರಿನವರಾದ ನಮ್ಮೆಲ್ಲರಿಗೂ ಇದು ಹೆಮ್ಮೆ ತರುವಂತಹ ವಿಷಯವಾಗಿದೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಮಾತನಾಡಿ, ಕಲೆಗಳ ಮೇಳೈಸುವಿಕೆ ಬದುಕಿನ ಮುಖ್ಯ ಅಂಗ. ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಬೇಕು ಎಂದು ನುಡಿದರು. 
ಸಂಸ್ಥೆಯ ಅಧ್ಯಕ್ಷ ಗುಂಡಪ್ಪಗೌಡ ಮಾತನಾಡಿ, ಜಾನಪದ ಗೀತೆ ಮತ್ತು ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ಸಂಸ್ಕೃತಿಯನ್ನು ಜೀವಂತವಾಗಿರಿಸಬಹುದು ಎಂದರು.
ಸಂಸ್ಥೆಯ  ಕಾರ್ಯದರ್ಶಿ ಪಿ.ವಿಶ್ವನಾಥ್, ಕೋಶಾಧ್ಯಕ್ಷ ಶ್ರೀಶೈಲ ರಾಮಣ್ಣವರ್, ಕಾಲೇಜು ನಿರ್ವಹಣ ಮಂಡಳಿಯ ಅಧ್ಯಕ್ಷ  ಕೆ.ಸಿ.ತೇಜಸ್ ಬಾಬು, ಪ್ರಾಂಶುಪಾಲ ಡಾ.ಎಸ್.ಮರೀಗೌಡ, ಸಂಚಾಲಕಿ ಕೆ.ಎಂ.ಹೇಮಾ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net