ಹಂತಕರನ್ನು ಬಂಽಸಿ ಗಲ್ಲು ಶಿಕ್ಷೆಗೆ ಗುರಿಪಡಿಸಿ

ರಾಯಚೂರು ಜಿ¯್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ನಡೆದ ದಲಿತ ಮುಖಂಡ ಭೂಮಾನಂದನ ಅಮಾನುಷ ಹತ್ಯೆ ಖಂಡಿಸಿ ಶುಕ್ರವಾರ ಯಾದಗಿರಿ ಡಿಸಿ ಕಚೇರಿ ಎದುರು ಎಂಆರ್‌ಪಿಎಸ್ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಕಾಶಪ್ಪ ಮಾದಿಗ ಹೆಗ್ಗಣಗೇರಾ, ಚಂದ್ರಶೇಖರ ನಡುಮನಿ, ಮಲ್ಲು ಬೆಳಗೇರಾ, ಭೀಮರಾಯ ಸಾತನೂರ, ಅನೀಲï ದಾಸನಕೇರಿ ಇತರರಿದ್ದರು.
ರಾಯಚೂರು ಜಿ¯್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ನಡೆದ ದಲಿತ ಮುಖಂಡ ಭೂಮಾನಂದನ ಅಮಾನುಷ ಹತ್ಯೆ ಖಂಡಿಸಿ ಶುಕ್ರವಾರ ಯಾದಗಿರಿ ಡಿಸಿ ಕಚೇರಿ ಎದುರು ಎಂಆರ್‌ಪಿಎಸ್ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಕಾಶಪ್ಪ ಮಾದಿಗ ಹೆಗ್ಗಣಗೇರಾ, ಚಂದ್ರಶೇಖರ ನಡುಮನಿ, ಮಲ್ಲು ಬೆಳಗೇರಾ, ಭೀಮರಾಯ ಸಾತನೂರ, ಅನೀಲï ದಾಸನಕೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂಆರ್‌ಪಿಎಸ್ ಸಂಘಟನೆ ಒತ್ತಾಯ
  • ೫೦ ಲಕ್ಷ ರೂ. ಪರಿಹಾರ ನೀಡಿ
  • ಜಿಲ್ಲಾಽಕಾರಿ ಮೂಲಕ ಮನವಿ
ಯಾದಗಿರಿ :

ರಾಯಚೂರು ಜಿ¯್ಲÉಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳದಲ್ಲಿ ನಡೆದ ದಲಿತ ಮುಖಂಡ ಭೂಮಾನಂದ ಅವರ ಅಮಾನುಷ ಹತ್ಯೆ ಖಂಡಿಸಿ, ಅಪರಾಽಗಳನ್ನು ಬಂಽಸಿ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಮಾದಿಗ ದಂಡೋರ (ಎಂಆರ್‌ಪಿಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪದಾಽಕಾರಿಗಳು ಮತ್ತು ಕಾರ್ಯಕರ್ತರು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿ¯್ಲÁಽಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿ¯್ಲÁಧ್ಯಕ್ಷ ಕಾಶಪ್ಪ ಮಾದಿಗ ಹೆಗ್ಗಣಗೇರಾ, ಭೂಮಾನಂದ ಅವರ ಹತ್ಯೆ ಪ್ರಕರಣ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ಕೃತ್ಯದಲ್ಲಿ ಭಾಗಿಯಾದ ಅಪರಾಽಗಳು ಹಾಗೂ ಇದರ ಹಿಂದಿರುವ ಸಂಚುಕೋರರನ್ನು ಕೂಡಲೇ ಪತ್ತೆ ಹಚ್ಚಿ ಬಂಽಸಬೇಕು. ರಾಜ್ಯದಲ್ಲಿ ದಲಿತ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಇರುವ ಜೀವ ಬೆದರಿಕೆ ಗುರುತಿಸಿ, ಅವರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೃತ ಭೂಮಾನಂದ ಅವರ ಕುಟುಂಬಕ್ಕೆ ಸರ್ಕಾರವು ೫೦ ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ದಲಿತರ ಮೇಲೆ ನಡೆಯುವ ಯಾವುದೇ ರೀತಿಯ ದೌರ್ಜನ್ಯ, ಅನ್ಯಾಯ ಮತ್ತು ಹತ್ಯೆಗಳ ವಿರುದ್ಧ ಮಾದಿಗ ದಂಡೋರ ಸಂಘಟನೆ ಹೋರಾಟ ನಡೆಸಲಿದೆ ಎಂದು ಹೇಳಿದರು.
ಈ ವೇಳೆ ಜಿ¯್ಲÁ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಡುಮನಿ, ಉಪಾಧ್ಯಕ್ಷ ಮಲ್ಲು ಬೆಳಗೇರಾ, ಕಾರ್ಯದರ್ಶಿ ಭೀಮರಾಯ ಸಾತನೂರ, ಖಜಾಂಚಿ ಬ್ರಹ್ಮನಂದ ಯಾದಗಿರಿ ತಾಲೂಕು ಅಧ್ಯಕ್ಷ ಅನೀಲï ದಾಸನಕೇರಿ, ವಡಗೇರಾ ತಾಲೂಕು ಅಧ್ಯಕ್ಷ ಶರಣಪ್ಪ, ಉಪಾಧ್ಯಕ್ಷ ತಿಪ್ಪಣ್ಣ ಗೊಂದೆನೋರ್, ಮಲ್ಲು ಕುಮನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net