ಹಲ್ಲೆ ಮಾಡಿದವರನ್ನು ಕೂಡಲೇ ಬಂಽಸಿ

ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಜಾವೇದ್ ಇನಾಮದಾರ ಅವರಿಗೆ ಮಂಗಳವಾರ ದಲಿತ ಸಂಘರ್ಷ ಸಮಿತಿ ಪದಾಽಕಾರಿಗಳು ಮನವಿ ಸಲ್ಲಿಸಿದರು. ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ಉಪ ವಿಭಾಗೀಯ ಸಂಚಾಲಕ ರಮೇಶ್ ಬಡಿಗೇರ, ಚನ್ನಬಸಪ್ಪ ದೇವಪುರ, ವೆಂಕಟೇಶ ದೇವಪುರ ಇತರರಿದ್ದರು.
ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಜಾವೇದ್ ಇನಾಮದಾರ ಅವರಿಗೆ ಮಂಗಳವಾರ ದಲಿತ ಸಂಘರ್ಷ ಸಮಿತಿ ಪದಾಽಕಾರಿಗಳು ಮನವಿ ಸಲ್ಲಿಸಿದರು. ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ಉಪ ವಿಭಾಗೀಯ ಸಂಚಾಲಕ ರಮೇಶ್ ಬಡಿಗೇರ, ಚನ್ನಬಸಪ್ಪ ದೇವಪುರ, ವೆಂಕಟೇಶ ದೇವಪುರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಲಿತ ಸಂಘರ್ಷ ಸಮಿತಿ ಒತ್ತಾಯ
  • ಸುರಪುರ ಡಿವೈಎಸ್‌ಪಿ ಜಾವೇದ್‌ಗೆ ಮನವಿ
ಸುರಪುರ :

ತಾಲೂಕಿನ ಶಖಾಪುರ ಎಸ್.ಎಚ್. ಗ್ರಾಮದಲ್ಲಿ ದಲಿತರ ಮೇಲೆ ಹ¯್ಲೆ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಽಸಿ ಅವರನ್ನು ಗಡಿಪಾರು ಮಾಡಬೇಕು ಮತ್ತು ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ ಬಣ) ಆಗ್ರಹಿಸಿದೆ.

ಇಲ್ಲಿನ ಡಿವೈಎಸ್‌ಪಿ ಕಚೇರಿಯಲ್ಲಿ ಮಂಗಳವಾರ ಡಿವೈಎಸ್‌ಪಿ ಜಾವೇದ್ ಇನಾಮದಾರ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಮಿತಿ ಮುಖಂಡರು, ಶವದ ಕುಣಿ ತೊಡುವುದಕ್ಕೆ ನಿರಾಕರಿಸಿದ ಕಾರಣಕ್ಕೆ ದ್ವೇಷ ಸಾಽಸಿ, ಸಾರ್ವಜನಿಕವಾಗಿ ಅವಮಾನಿಸಿ, ಜÁತಿ ನಿಂದನೆ ಮಾಡಿ, ಮಾರಣಾಂತಿಕ ಹ¯್ಲÉ ನಡೆಸಿ ಕೊಲೆಗೆ ಯತ್ನ ಮಾಡಲಾಗಿದೆ. ಈ ಸಂಬAಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸುಮಾರು ೧೭ ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದ ಎಲ್ಲ ಕಿಡಿಗೇಡಿಗಳನ್ನು ತಕ್ಷಣ ಬಂಽಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಕುಟುಂಬಗಳಿಗೆ ಪೊಲೀಸï ರಕ್ಷಣೆ ಒದಗಿಸಬೇಕು. ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೊಳಗಾದ ಕುಟುಂಬದವರ ವಿರುದ್ಧ ಯಾವುದೇ ಕೌಂಟರ್ ಕೇಸ್ ದಾಖಲಿಸಬಾರದು ಎಂದು ಒತ್ತಾಯಿಸಿದರು.
ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ಉಪ ವಿಭಾಗೀಯ ಸಂಚಾಲಕ ರಮೇಶ್ ಬಡಿಗೇರ, ಚನ್ನಬಸಪ್ಪ ದೇವಪುರ, ವೆಂಕಟೇಶ ದೇವಪುರ, ಎಂ.ಪಟೇಲï, ಶೇಖರ ಮಂಗಳೂರು, ರಾಜು ಬಡಿಗೇರ, ಖಾಜÁ ಅಜ್ಮೀರ್ ಖುರೇಶಿ, ಮೌನೇಶ್ ದೇವತ್ಕಲï, ಹಣಮಂತ ರತ್ತಾಳ, ಮೌನೇಶ ಹುಣಸಿಹೊಳೆ, ದ್ಯಾವಪ್ಪ ಕಾಂಬಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net