ಮಹಿಳೆ ಮೇಲೆ ಹಲ್ಲೆ ನಡೆಸಿದಾತನ ಬಂಧನ

Arrest of man who assaulted a woman
Arrest of man who assaulted a woman
Published on
ಪಾವಗಡ: ಪಟ್ಟಣದ ಶನಿಮಹಾತ್ಮ ಗುಡಿಯ ಬಳಿ ಜು.3 ರಂದು ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬುಧವಾರ ಪಟ್ಟಣದ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಮಡಕಶಿರ ತಾಲೂಕಿನ ಗೊಲ್ಲಪಲ್ಲಿಯ ನಿವಾಸಿ ಮಂಜುನಾಥ್​ (35) ಬಂಧಿತ. ಮಂಜುನಾಥ್​ ಗಾರೆ ಕೆಲಸ ಮಾಡುತ್ತಿದ್ದು, ಬುಧವಾರ ಪಾವಗಡ ಬಸ್​ ನಿಲ್ದಾಣದ ಬಳಿ ಸ್ಥಳ ಮಹಜರು ನಡೆಸಲಾಯಿತು. ವೃತ್ತ ನಿರೀಕ್ಷಕ ಸುರೇಶ್​ ನೇತೃತ್ವದ ತಂಡದ ಎಸ್​ಐ ಸುಧೀರ್​, ಸುನಿಲ್​, ಎಎಸ್​ಐ ತಿಮ್ಮರಾಜು ಹಾಗೂ ಸಿಬ್ಬಂದಿ ಗೋಪಿ, ಶಿವಶಂಕರ್​, ಸಂಪತ್​, ದೀಪಕ್​, ಮಾರುತಿ ಹಾಗೂ ಮಾಂತೇಶ್​ ಅಪರಾಧಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net