ಎಂ.ಎನ್.ಕೋಟೆ: ಗುಬ್ಬಿ ತಾಲೂಕಿನಲ್ಲಿ ಆಸ್ಪತ್ರೆಗಳಿಗೆ ವೈಧ್ಯಾಧಿಕಾರಿಗಳನ್ನು ನೇಮಕ ಮಾಡಲು ಸರ್ಕಾರ ಆದೇಶಿಸಿದ್ದು, ಶ್ರೀ ನೇಮಕ ಆಗಲಿದ್ದಾರೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಕೋಡಿನಾಗೇನಹಳ್ಳಿಯಲ್ಲಿ ಶನಿವಾರ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದ ಅವರು, ಗುಬ್ಬಿ ಪಟ್ಟಣದಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಎರಡು ಕಡೆ ಬಾಕ್ಸ್ ಚರಂಡಿಗಳಿಗೆ ಅನುದಾನ ಹಾಕಿದೇನೆ. ಶ್ರೀ ಕಾಮಗಾರಿ ಮುಗಿಯುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯ ಓಂಕಾರ್ ಪ್ರಸಾದ್, ಮಾಜಿ ಸದಸ್ಯರಾದ ಜಯಮಾಲಾ ಸದಾಶಿವಯ್ಯ, ಮಂಜುನಾಥ್, ಲ್ಮಪತಿ, ಪ್ರಸಾದ್, ವಕೀಲ ಪಾಂಡುರಂಗಯ್ಯ, ಮುಖಂಡರಾದ ಚಿದ್ದಾನಂದ್, ಚಂದ್ರಕಲಾ, ನಿರಂಜನ, ಕೆಂಚಕುಮಾರ್, ದಿವಾಕರಯ್ಯ, ಗುತ್ತಿಗೆದಾರ ಸಿದ್ದರಾಮಣ್ಣ ಹಾಗೂ ಗ್ರಾಮಸ್ಥರು ಇದ್ದರು.