ಗುಬ್ಬಿ ತಾಲೂಕಿನ ಕೋಡಿನಾಗೇನಹಳ್ಳಿ, ಅದಲಗೆರೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎಸ್.ಆರ್ ಶ್ರೀನಿವಾಸ್ ಭೂಮಿ ಪೂಜೆ ಸಲ್ಲಿಸಿದರು. ಗ್ರಾಪಂ ಮಾಜಿ ಸದಸ್ಯರಾದ ಜಯಮಾಲ ಸದಾಶಿವಯ್ಯ, ಮಂಜುನಾಥ್, ಓಂಕಾರ್, ಪರಮಣ್ಣ, ಭೈರಮ್ಮ, ಈಶ್ವರಯ್ಯ ಇದ್ದರು.
Published on:
Copied
Follow Us
ಎಂ.ಎನ್.ಕೋಟೆ :ಅತಿ ಶೀಘ್ರದಲ್ಲಿ ಗ್ರಾಪಂ ಚುನಾವಣೆ ನಡೆಯುತ್ತದೆ. ಈಗಾಗಲೇ ಮೀಸಲಾತಿ ಪ್ರಕಟವಾಗುತ್ತಿದೆ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಕೋಡಿನಾಗೇನಹಳ್ಳಿ, ಅದಲಗೆರೆಯಲ್ಲಿ ಮಂಗಳವಾರ ಸಿಸಿ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿ ಮಾದರಿಯಾಗಿದ್ದಾರೆ. ಸಿಎಂ ಆಗಿದಾಗ ಉತ್ತಮ ಆಡಳಿತವನ್ನು ಜನಸಾಮಾನ್ಯರಿಗೆ ನೀಡಿದಾರೆ. ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಮುಂಭಾರುವ ಚುನಾವಣೆಗಳು ನಡೆಯುತ್ತವೆ ಎಂದರು.
ತಾಲೂಕಿನಲ್ಲಿ ವೈದ್ಯಾಧಿಕಾರಿಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಸಂಬಂದಪಟ್ಟ ಅಧಿಕಾರಿಗಳ ಜತೆ ಮಾತನಾಡಿ ಎಲ್ಲಲ್ಲಿ ಡಾಕ್ವರ್ ಇಲ್ಲ ಅಲ್ಲಿಗೆ ವೈದ್ಯಾಧಿಕಾರಿಗಳನ್ನು ನೇಮಕ ಮಾಡುತ್ತೇವೆ. ಎಂ.ಎನ್.ಕೋಟೆ ಆಸ್ಪತ್ರೆಗೆ ವೈದ್ಯಾಧಿಕಾರಿಗಳು ತಕ್ಷಣ ನೇಮಕ ಮಾಡಲಾಗುತ್ತದೆ ಮತ್ತು ಅಗತ್ಯ ಮೂಲ ಸೌಲಭ್ಯ ಒದಗಿಸಿ ಆಸ್ಪತ್ರೆಗೆ ಬರುವವರಿಗೆ ಅನುಕೂಲ ಮಾಡಲಾಗುತ್ತದೆ.
ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ 9 ಕಡೆ ವಿದ್ಯುತ್ ಉಪಕೇಂದ್ರ ತೆರೆದು ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಮಾಡಲಾಗುತ್ತದೆ ಎಂದು ತಿಳಿಸಿದರು.
ವಕೀಲ ಪಾಂಡುರಂಗಯ್ಯ, ಪಿಡಿಒ ರವಿ, ಮುಖಂಡರಾದ ಮಹಾದೇವಯ್ಯ, ವಿದ್ಯಾಧರ್, ಮಲ್ಲಿಕಣ್ಣ ಇದ್ದರು.