ಹೆಚ್ಚಿನ ಪರಿಹಾರಕ್ಕೆ ಸಿಎಂಗೆ ಮನವಿ

ಶಹಾಪುರ ತಾಲೂಕಿನ ಮಡ್ನಾಳ್ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಶಾಸಕ ಶರಣಬಸಪ್ಪ ದರ್ಶನಾಪುರ ಅವರು ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಶರಣಪ್ಪ ಸಲಾದಪುರ, ಶಿವಮಾಂತ ಚಂದಾಪುರ, ಶಿವಣಗೌಡ ಮಡ್ನಾಳ್, ಬಸವರಾಜಪ್ಪಗೌಡ ಪಾಟೀಲ್ ಇತರರಿದ್ದರು.
ಶಹಾಪುರ ತಾಲೂಕಿನ ಮಡ್ನಾಳ್ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಶಾಸಕ ಶರಣಬಸಪ್ಪ ದರ್ಶನಾಪುರ ಅವರು ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಶರಣಪ್ಪ ಸಲಾದಪುರ, ಶಿವಮಾಂತ ಚಂದಾಪುರ, ಶಿವಣಗೌಡ ಮಡ್ನಾಳ್, ಬಸವರಾಜಪ್ಪಗೌಡ ಪಾಟೀಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನಾಪುರ ಭರವಸೆ
  • ಮೃತ ಕುಟುಂಬಸ್ಥರಿಗೆ ವೈಯಕ್ತಿಕ ತಲಾ ರು.೧ ಲಕ್ಷ ವಿತರಣೆ
ಶಹಾಪುರ: 

ಭಾನುವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಡ್ನಾಳ್ ಗ್ರಾಮದ ಮೂವರು ಮಹಿಳಾ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಸೋಮವಾರ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂ. ಪರಿಹಾರ ವಿತರಿಸಿದರು.

ಬೆಳಗ್ಗೆ ೧೧ರ ಸುಮಾರಿಗೆ ಮಡ್ನಾಳ್ ಗ್ರಾಮಕ್ಕೆ ಆಗಮಿಸಿದ ಅವರು, ಮೃತಪಟ್ಟ ಮೂರು ಜನರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಇಂತಹ ಘಟನೆ ಆಗಬಾರದಿತ್ತು. ವೈಯಕ್ತಿಕವಾಗಿ ನನಗೆ ಅತಿ ನೋವಾಗಿದೆ. ಬಡವರ ಜೀವ ಹೀಗೆ ಹೋಗಬಾರದು. ಈ ಕುಟುಂಬಗಳಿಗೆ ತುಂಬಲಾರದ ನಷ್ಟವಾಗಿದ್ದು, ತಾವು ಯಾವತ್ತು ಈ ಕುಟುಂಬಗಳಿಗೆ ಬೆನ್ನೆಲುಬಾಗಿ ಇರುವುದಾಗಿ ಶಾಸಕರು ಹೇಳಿದರು.
ಮಂಗಳವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಘಟನೆ ಬಗ್ಗೆ ತಿಳಿಸಿ ಆದಷ್ಟು ಭೇಗ ಸರ್ಕಾರದಿಂದ ಹೆಚ್ಚಿನ ಪರಿಹಾರ ಒದಗಿಸಿಗುವ ನಿಟ್ಟಿನಲ್ಲಿ ಪೂರ್ಣ ಪ್ರಯತ್ನ ಮಾಡುವುದಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ಭರವಸೆ ನೀಡಿದರು.
ಮೂವರು ಮೃತಪಟ್ಟು, ೧೪ ಜನ ಗಾಯಗೊಂಡ ಈ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು ಕಂಡು ಶಾಸಕ ಶರಣಬಸಪ್ಪ ಕೆಲ ಹೊತ್ತು ಮೌನಕ್ಕೆ ಜಾರಿದರು. ಇಡೀ ಗ್ರಾಮದಲ್ಲಿ ಸೂತಕದ ವಾತವರಣ ಇದ್ದಿದ್ದನ್ನು ಕಂಡು ಮರುಗಿದರು. ವಿಜಿ-ರಾಮ್ ಜಿ ನರೇಗಾದಲ್ಲಿ ಕೂಲಿ ಕೆಲಸ ಮಾಡುವ ಮೂಲಕ ಊರಲ್ಲೇ ಇದ್ದು ಜೀವನ ಮಾಡಬೇಕು. ಈ ನಿಟ್ಟಿನಲ್ಲಿ ಜಿಪಂ ಸಿಒಇ ಅವರೊಂದಿಗೆ ಮಾತನಾಡುವುದಾಗಿ ಹೇಳಿದರು.
ಮೃತಪಟ್ಟವರು ಮತ್ತು ಗಾಯಗೊಂಡವರು ಅತ್ಯಂತ ಕಡು ಬಡವರಾಗಿದ್ದು, ಹೊಟ್ಟೆಪಾಡಿಗಾಗಿ ಬೆಳಗಿನ ಜಾವ ವಾಹನದಲ್ಲಿ ಹೊಲದಲ್ಲಿ ಕೆಲಸ ಮುಗಿಸಿ ಬರುವಾಗ ಈ ಘಟನೆಯಾಗಿರುವುದು ಮನಕಲುಕುತ್ತಿದೆ ಎಂದು ಶಾಸಕರು ಗದ್ಗತರಾದರು. ಭಗವಂತ ಅವರ ಕುಟುಂಬಗಳಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದರು.
ಗಾಯಗೊAಡವರಲ್ಲಿ ನಾಲ್ವರು ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಸೂಕ್ತ ಮತ್ತು ಗುಣಮಟ್ಟ ಚಿಕಿತ್ಸೆ ನೀಡುವಂತೆ ಸಂಬAಧಪಟ್ಟ ವೈದ್ಯರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ವೇಳೆ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ  ಶರಣಪ್ಪ ಸಲಾದಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾಂತ ಚಂದಾಪುರ, ಮುಖಂಡರಾದ ಶಿವಣಗೌಡ ಮಡ್ನಾಳ್, ಬಸವರಾಜಪ್ಪಗೌಡ ಪಾಟೀಲ್, ಮಾಹಾಂತಗೌಡ ಪಾಟೀಲ್, ದೌಲತ್ ನಾಯ್ಕೊಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net