ಜಿಮ್ನಾಸ್ಟಿಕ್ಸ್​ನಲ್ಲಿ ಅನು ಮುತ್ತಗಿ ಸಾಧನೆ

ಅನು ಮುತ್ತಗಿ
ಅನು ಮುತ್ತಗಿ
Published on
ಧಾರವಾಡ: ನಗರದ ಎಸ್​ಡಿಎಂ ಇಂಜಿನಿಯರಿಂಗ್​ ಕಾಲೇಜಿನ ವಿದ್ಯಾಥಿರ್ನಿ ಅನು ಅಶೋಕ ಮುತ್ತಗಿ ಜಿಮ್ನಾಸ್ಟಿಕ್ಸ್​ನಲ್ಲಿ ಉತ್ತ ಸಾಧನೆ ಮಾಡಿದ್ದಾಳೆ. ಕರ್ನಾಟಕ ಒಲಿಂಪಿಕ್​ ಸಂಸ್ಥೆಯು ತುಮಕೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟದ ರಿದಮಿಕ್​ ಜಿಮ್ನಾಸ್ಟಿಕ್ಸ್​ನಲ್ಲಿ ಅನು 5 ಕಂಚಿನ ಪದಕ ಪಡೆದಿದ್ದಾರೆ.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ ಮುತ್ತಗಿ ಅವರ ಪುತ್ರಿ ಅನು, ರಿದಮಿಕ್​ ಜಿಮ್ನಾಸ್ಟಿಕ್ಸ್​ ಕ್ಲಬ್​, ರಿದಮಿಕ್​ ಜಿಮ್ನಾಸ್ಟಿಕ್ಸ್​ ಬಾಲ್​, ರಿದಮಿಕ್​ ಜಿಮ್ನಾಸ್ಟಿಕ್ಸ್​ ರಿಬ್ಬನ್​, ರಿದಮಿಕ್​ ಜಿಮ್ನಾಸ್ಟಿಕ್ಸ್​ ಹೂಪ್​ ಹಾಗೂ ಅಲ್ರೌಂಡ್​ ವೈಯಕ್ತಿಕ ಚಾಂಪಿಯನ್​ ತೃತಿಯ ಸ್ಥಾನ ಪಡೆದಿರುವುದು ಹೆಗ್ಗಳಿಕೆ.
ಅನು ಮುತ್ತಗಿ ಜಿಮ್ನಾಸ್ಟಿಕ್ಸ್​ನಲ್ಲಿ ಈವರೆಗೆ 10 ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾಳೆ. ವಿದ್ಯಾಥಿರ್ನಿಯ ಸಾಧನೆಯನ್ನು ಪಾಲಕರು, ಕಾಲೇಜು ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net