ಪಟಾಕಿ ಚೀಟಿ ವಂಚಕರಿಗೆ ನಿರೀಕ್ಷಣಾ ಜಾಮೀನು firecracker

ಪಟಾಕಿ ಚೀಟಿ ವಂಚಕರಿಗೆ ನಿರೀಕ್ಷಣಾ ಜಾಮೀನು firecracker
ಪಟಾಕಿ ಚೀಟಿ ವಂಚಕರಿಗೆ ನಿರೀಕ್ಷಣಾ ಜಾಮೀನು firecracker
Published on

ಪ್ರಮುಖ ಮುಖ್ಯಾಂಶಗಳು

  • ಜಾಲತಾಣದಲ್ಲಿ ಪ್ರತ್ಯಕ್ಷ್ಯವಾಗಿ ಬೇರೆಯವರಿಂದ ಮೋಸದ ಕಥೆ
  • ಎಲ್ಲರಿಗೂ ಸಾಮಗ್ರಿ ಕೊಡುವ ಭರವಸೆ
ಬಂಗಾರಪೇಟೆ: ದೀಪಾವಳಿ ಹಬ್ಬದ ವೇಳೆ ಪಟಾಕಿ ಸಾಮಗ್ರಿ ನೀಡುತ್ತೇವೆ ಎಂದು ಪಟಾಕಿ ಚೀಟಿ ಹೆಸರಲ್ಲಿ ಸಾವಿರಾರು ಜನರಿಂದ ವರ್ಷವಿಡೀ ಪ್ರತಿ ತಿಂಗಳು ತಲಾ 6 ಸಾವಿರ ರೂ. ಕಟ್ಟಿಸಿಕೊಂಡು ಪರಾರಿಯಾಗಿದ್ದ ಭರತ್​ ಮತ್ತು ಆತನ ಸಹೋದರಿ ನಿರೀಕ್ಷಣಾ ಜಾಮೀನು ಪಡೆದಿದ್ದು, ಕೆಜಿಎ್​ ಸೈಬರ್​ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. firecracker
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಸಾವಿರಾರು ಜನರಿಂದ ಹಣ ಪಡೆದು ಏಜೆಂಟರ ಕೈಗೂ ಸಿಗದೆ ಪರಾರಿಯಾಗಿದ್ದರು. ವಂಚತರಾಗಿದ್ದ ಸದಸ್ಯರು ಬಂಗಾರಪೇಟೆ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆಜಿಎಫ್​ ಸೈಬರ್​ ಸೆಲ್​ಗೆ ವರ್ಗಾಯಿಸಿದ್ದರು. ಸೈಬರ್​ ಠಾಣೆಯ ಇನ್​ಸ್ಪೆಕ್ಟರ್​ ಲಕ್ಷಿ$್ಮ ನಾರಾಯಣ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಈ ಮಧ್ಯೆಯೇ ವಂಚಕರಿಬ್ಬರೂ ಪೊಲೀಸರು ಬಂಧಿಸದಂತೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದಾರೆ.
ಗಾರ್ಮೆಂಟ್​ ಕೆಲಸಗಾರರಿಗೂ ಸಂಬಳ ಇಲ್ಲ!: ಪಟಾಕಿ ಚೀಟಿ ಜತೆಗೆ ಪಟ್ಟಣದ ಕೆಜಿಎಫ್​ ರಸ್ತೆಯಲ್ಲಿ ಕಟ್ಟಡ ಬಾಡಿಗೆ ಪಡೆದು ನಡೆಸುತ್ತಿದ್ದ ಗಾರ್ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಸಂಬಳವನ್ನೂ ನೀಡದೆ ವಂಚಿಸಿದ್ದಾರೆ ಎನ್ನಲಾಗಿದೆ.
21 ಸಾವಿರ ಜನಕ್ಕೆ ಬೂದಿ: ತಾಯಿ ಚೌಡೇಶ್ವರಿ ಪಟಾಕಿ ಚೀಟಿ ಹೆಸರಿನಲ್ಲಿ ಸುಮಾರು 21,000 ಜನರಿಗೆ 12.60 ಕೋಟಿ ರೂ. ಮಾಸಿಕ ಕಂತುಗಳ ರೂಪದಲ್ಲಿ ಪಡೆದು ಹಬ್ಬದ ಸಾಮಗ್ರಿ ನೀಡದೆ ಹಬ್ಬಕ್ಕೂ 2 ದಿನ ಮುನ್ನ ತಲೆ ಮರೆಸಿಕೊಂಡಿದ್ದ ಭರತ್​ ವಿರುದ್ಧ ನೊಂದ 17 ಗ್ರಾಹಕರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಅಂದಿನಿಂದ ಪತ್ನಿ ಮತ್ತು ತಂಗಿಯೊಂದಿಗೆ ತಲೆಮರೆಸಿಕೊಂಡಿದ್ದ ಆರೋಪಿ, ವಾರದ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಅಳಲು ತೋಡಿಕೊಂಡಿದ್ದಾನೆ.
ವಿಡಿಯೋದಲ್ಲಿ ಹೇಳಿದ್ದೇನು?: ವಂಚಕ ಭರತ್​ ಕ್ಷಮಾಪಣಾ ವಿಡಿಯೋ ಮಾಡಿದ್ದು, ಅದರಲ್ಲಿ ನನ್ನನ್ನು ಕ್ಷಮಿಸಿ, ಇಡೀ ತಾಲೂಕಿನ ಜನತೆ ನನ್ನ ಮೇಲೆ ಇಟ್ಟಿದ್ದ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನನಗೆ ಎಷ್ಟು ಲಕ್ಷ ರೂ. ನಷ್ಟವಾಗಿದೆ ಎಂದು ನಿಮ್ಮೆಲ್ಲರಿಗೂ ಗೊತ್ತಿದೆ. ಆದರೂ ನಿಮಗೆ ಸಿಗಬೇಕಾದ ವಸ್ತುಗಳನ್ನೆಲ್ಲ ತಲುಪಿಸಿ ಮಾನ ಉಳಿಸಿಕೊಂಡಿದ್ದೇನೆ. ಆಂಧ್ರಪ್ರದೇಶದ ಕುಪ್ಪಂ ಸಮೀಪದ ರಾಳ ಬೂದುಗೂರು ಗ್ರಾಮದ ವ್ಯಕ್ತಿ ಮಾತು ನಂಬಿ ಮೂರು ಕಡೆ ಗಾರ್ಮೆಂಟ್ಸ್​ ತೆರೆದೆ. ಅಲ್ಲದೆ ದೀಪಾವಳಿ ಸಾಮಗ್ರಿ ಹೆಸರಿನಲ್ಲಿ ಅವರ ಸಂಬಂಧಿಕರ ಅಕ್ಕಿ ಮಿಲ್​, ಪ್ರಾವಿಷನ್​ ಸ್ಟೋರ್​ ಇದೆ. ಎಲ್ಲ ಸಾಮಗ್ರಿ ಅಲ್ಲಿಂದಲೇ ನೇರ ಗ್ರಾಹಕರಿಗೆ ತಲುಪಿಸುವ ಭರವಸೆ ಕೊಟ್ಟು ನನ್ನ ಬಳಿ ಹಣ ಪಡೆದು ಹಬ್ಬ ಹತ್ತಿರದಲ್ಲಿರುವಾಗ ಪರಾರಿಯಾದವ ಇನ್ನೂ ಪತ್ತೆಯಾಗಿಲ್ಲ. ಆದರೂ ದೃತಿಗೆಡದೆ ತಿಳಿದವರ ಬಳಿ ಸಾಲ ಪಡೆದು ಒತ್ತಡವಿರುವ ಕಡೆಯೆಲ್ಲ ಸಾಧ್ಯವಾದಷ್ಟು ಸಾಮಗ್ರಿ ನೀಡಲಾಗುತ್ತಿದೆ. ಸಮಯದ ಅಭಾವ, ಗ್ರಾಹಕರು ಮತ್ತು ಇತರರ ಕರೆಗಳ ಕಾಟದಿಂದ ಸರಿಯಾಗಿ ಸಾಮಗ್ರಿ ವ್ಯವಸ್ಥೆ ಮಾಡಲಾಗಲಿಲ್ಲ. ಶೀಘ್ರ ಎಲ್ಲರ ಮುಂದೆ ಬಂದು ಮಾತನಾಡುತ್ತೇನೆ ಎಂದು ತಿಳಿಸಿದ್ದಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net