

ಬೆಂಗಳೂರು: 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಹಿರಿಯ ನಾಯಕ ಕಾಗೋಡು ತಿಮ್ಮಪ್ಪ, ಗದಗಿನ ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸೇರಿದಂತೆ ಕಲೆ, ಸಾಹಿತ್ಯ, ಕೃಷಿ, ವಿಜ್ಞಾನ, ಸಮಾಜ ಸೇವೆ ಮತ್ತು ಕ್ರೀಡೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಒಟ್ಟು 71 ಮಂದಿ ಸಾಧಕರನ್ನು ಈ ಅತ್ಯುನ್ನತ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 25 ಗ್ರಾಮ ಚಿನ್ನದ ಪದಕ ಹಾಗೂ 5 ಲಕ್ಷ ರೂಪಾಯಿಗಳ ನಗದು ಪುರಸ್ಕಾರವನ್ನು ಒಳಗೊಂಡಿದೆ.
ಜಾನಪದ: ದಾವಲಸಾಬ ಅತ್ತಾರ (ಕೊಪ್ಪಳ), ಗೌರಮ್ಮ (ಚಾಮರಾಜನಗರ), ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ), ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ), ಈರಣ್ಣ ರುದ್ರಾಕ್ಷಿ (ರಾಯಚೂರು), ಶಿವಲಿಂಗಪ್ಪ ತಂದೆ ರಾಮಣ್ಣ (ಕೊಪ್ಪಳ), ಸುರೇಶ್ ರಾಮಚಂದ್ರ ಜೋಶಿ (ವಿಜಯಪುರ).
ಸಂಗೀತ: ಡಾ. ಸಿ.ಎ. ಶ್ರೀಧರ್ (ಮೈಸೂರು), ಡಾ. ಎ. ನಾರಾಯಣ ಸ್ವಾಮಿ (ಹಾಸನ), ಬಿ. ಮುರುಳಿ (ಬೆಂಗಳೂರು ಗ್ರಾಮಾಂತರ).
ನೃತ್ಯ: ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ).
ಚಲನಚಿತ್ರ ಹಾಗೂ ಕಿರುತೆರೆ: ಬಾಬಜೀ ವೆಂಕಟರಮಣ (ಧಾರವಾಡ), ಅಶೋಕ್ (ಬೆಂಗಳೂರು ಗ್ರಾಮಾಂತರ), ಕೆ.ಎಸ್. ರವೀಂದ್ರ ನಾಥ್ (ಕಿರುತೆರೆ, ಬೆಂಗಳೂರು ನಗರ).
ಯಕ್ಷಗಾನ ಹಾಗೂ ಬಯಲಾಟ: ಗೋಪಾಲ ಗಾಣಿಗ (ಯಕ್ಷಗಾನ, ಉಡುಪಿ), ಹುಲಿಗೆಮ್ಮ (ಬಯಲಾಟ, ಬಳ್ಳಾರಿ).
ರಂಗಭೂಮಿ: ಡಿ. ಕೆಂಪಣ್ಣ (ಬೆಂಗಳೂರು ಗ್ರಾಮಾಂತರ), ಕೆ. ಜಯಲಕ್ಷ್ಮಿ ಪಾಟೀಲ್ (ಧಾರವಾಡ), ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ), ಕೆ.ಆರ್. ಸುಮತಿ (ಮೈಸೂರು), ಹೆಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ), ಹೊನ್ನ ನಾಯಕ್ (ಮೈಸೂರು).
ಶಿಲ್ಪಕಲೆ ಹಾಗೂ ಚಿತ್ರಕಲೆ: ಜಿ.ವಿ. ಹಂಸಾನಂದ ಆಚಾರ್ಯ (ಶಿಲ್ಪಕಲೆ, ವಿಜಯನಗರ), ಕಾಡಪ್ಪ (ಶಿಲ್ಪಕಲೆ, ಬೆಳಗಾವಿ), ಸಿ.ಬಿ. ಸೋಮಶೆಟ್ಟಿ (ಚಿತ್ರಕಲೆ, ಬೀದರ್).
ಕರಕುಶಲ: ಶಾಂತಾಬಾಯಿ ಮೋಹನ್ ಕಾಂಬಳೆ (ಬೀದರ್).
ಕೃಷಿ ಹಾಗೂ ಪರಿಸರ: ಹೆಚ್.ಕೆ. ಶ್ರೀಕಂಠು (ಕೃಷಿ, ಬೆಂಗಳೂರು ದಕ್ಷಿಣ), ಬಿ.ಎ. ಚನ್ನಪ್ಪಗೌಡ (ಕೃಷಿ, ಬೆಂಗಳೂರು ನಗರ), ಡಾ. ಸ್ವಾಮಿ ಆನಂದ್. ಆರ್ (ಪರಿಸರ, ಮೈಸೂರು).
ವಿಜ್ಞಾನ - ತಂತ್ರಜ್ಞಾನ: ಪ್ರೊ. ರಾಜಾಸಾಬ್ ಎ.ಎಚ್ (ಕಲಬುರಗಿ), ಡಾ. ರಾಜಶೇಖರ ಮೂರ್ತಿ (ಹೊರದೇಶ - ಕೆನಡಾ).
ಮಾಧ್ಯಮ / ಛಾಯಾಚಿತ್ರ: ಉಮಾಪತಿ (ಚಿತ್ರದುರ್ಗ), ಎಂ.ಪಿ. ಸುಶೀಲ (ಬೆಂಗಳೂರು ನಗರ), ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ).
ಸಂಕೀರ್ಣ: ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ (ಬಾಗಲಕೋಟೆ), ಡಿ.ಎಸ್. ಚೌಗಲೆ (ಬೆಳಗಾವಿ), ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಬೆಂಗಳೂರು ನಗರ), ಬಿ.ಪಿ. ಆರಾಧ್ಯ (ವಾಸ್ತುಶಾಸ್ತ್ರ, ಬೆಂಗಳೂರು ದಕ್ಷಿಣ), ರವಿ ಪ್ರವೀಣ್ ನೊರೋನಾ (ಬೆಂಗಳೂರು ನಗರ), ಎಂ.ಆರ್. ಜೈಶಂಕರ್ (ಚಿಕ್ಕಮಗಳೂರು), ಪ್ರಸಾದ್ ಬಿಡ್ಡಪ್ಪ (ಕೊಡಗು), ವಾಸಪ್ಪ ಯಲ್ಲಪ್ಪ ಕುಸಗೂರ (ಹಾವೇರಿ).
ಸಮಾಜ ಸೇವೆ: ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ (ಗದಗ), ಕಾಗೋಡು ತಿಮ್ಮಪ್ಪ (ಶಿವಮೊಗ್ಗ), ಬಸವರಾಜು (ಮಂಡ್ಯ), ಡಾ. ಎಸ್.ಎಂ. ಎಲಿ (ದಾವಣಗೆರೆ), ಡಾ. ಜಿ.ಎಸ್. ಚಂದ್ರ ಶೇಖರ್ (ಉತ್ತರ ಕನ್ನಡ), ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ), ಕೄಷ್ಣೇಗೌಡ (ಚಿಕ್ಕಬಳ್ಳಾಪುರ), ಎ.ಸಿ. ಭಂಡಾರಿ (ದಕ್ಷಿಣ ಕನ್ನಡ), ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ).
ವೈದ್ಯಕೀಯ ಹಾಗೂ ಆಡಳಿತ: ಡಾ. ವಿಜಯೇಂದ್ರ ಹೊನ್ನೂರಪ್ಪ (ವೈದ್ಯಕೀಯ, ಬೆಂಗಳೂರು ನಗರ), ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ವೈದ್ಯಕೀಯ, ಬೆಳಗಾವಿ), ತೆರೆಸಾ ಭಟ್ಟಾಚಾರ್ಯ (ಆಡಳಿತ, ಬೆಂಗಳೂರು ನಗರ), ಡಾ. ಕೆ.ಎಸ್. ಸೋಮಶೇಖರ್ (ಆಡಳಿತ, ಹೊರನಾಡು).
ಇಂಜಿನಿಯರಿಂಗ್: ಡಾ. ಕೆ.ಎನ್. ವೆಂಕಟ ಕೃಷ್ಣಾರಾವ್ (ಚಿಕ್ಕಬಳ್ಳಾಪುರ).
ಸಾಹಿತ್ಯ: ಡಾ. ಇಂದಿರಾ ಹೆಗಡೆ (ದಕ್ಷಿಣ ಕನ್ನಡ), ವೀರಹನುಮಾನ್ (ರಾಯಚೂರು), ಪ್ರೊ. ನಾರಾಯಣಘಟ್ಟ (ತುಮಕೂರು), ಸಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು), ಡಾ. ಕರೀಗೌಡ ಬೀಚನಹಳ್ಳಿ (ತುಮಕೂರು), ಡಾ. ಸಿದ್ಧರಾಮ ಹೊನ್ಕಲ್ (ಯಾದಗಿರಿ).
ಶಿಕ್ಷಣ: ಫಾ|| ಜೊಸೆಫ್ (ಬೆಂಗಳೂರು ನಗರ), ಶಾಂತಪ್ಪ ದಶವಂತ (ವಿಜಯಪುರ), ಸಂಗೀತಾ ಎನ್ ಕಟ್ಟಿಮನಿ (ಕಲಬುರಗಿ), ಡಾ. ಎನ್.ಎಸ್. ರಂಗರಾಜು (ಮೈಸೂರು).
ನ್ಯಾಯಾಂಗ ಹಾಗೂ ಇತರೆ: ಬಿ.ವಿ. ಆಚಾರ್ಯ (ನ್ಯಾಯಾಂಗ, ಉಡುಪಿ), ರಮೇಶ್ ಗೌಡ (ಹೊರನಾಡು/ಹೊರದೇಶ).
ಕ್ರೀಡೆ: ಜಿಮ್ ರವಿ (ಕೋಲಾರ), ಡಾ. ಎ.ಬಿ. ಸುಬ್ಬಯ್ಯ (ಕೊಡಗು), ಎಂ. ಗಿರೀಶ್ (ಬೆಂಗಳೂರು ನಗರ).