ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಕೆ.ಪಿ.ನಂಜುಂಡಿ ಮಾತನಾಡಿ, ರಾಜ್ಯದಲ್ಲಿ ಅಂದಾಜು 40 ಲಕ್ಷ ವಿಶ್ವಕರ್ಮ ಸಮುದಾಯದ ಜನರು ಇದ್ದಾರೆ. ಜನಸಂಖ್ಯೆಯಲ್ಲಿ ಕುರುಬ ಸಮುದಾಯದ ನಂತರ ನಾವು ಹೆಚ್ಚು ಇದ್ದೇವೆ. ಆದರೆ, ರಾಜಕೀಯ ನಿರ್ಲಕ್ಷ್ಯದಿಂದ ಸಾಮಾಜಿಕ ನ್ಯಾಯದಿಂದ ನಮ್ಮನ್ನು ಹೊರಗಿಡಲಾಗಿದೆ. ಜಾತಿಜನಗಣತಿ ಸಂದರ್ಭದಲ್ಲಿ 40 ಲಕ್ಷ ಇದ್ದ ಜನಸಂಖ್ಯೆಯನ್ನು 8 ಲಕ್ಷಕ್ಕೆ ತಂದಿಟ್ಟಿದ್ದಾರೆ. ದೇಶದ ಸಾಂಸ್ಕೃತಿಕ ರಾಯಭಾರಿಗಳನ್ನು ಕರೆಯುವ ನಮ್ಮ ಸಮಾಜವನ್ನು ಹಿಂದಿನಿಂದಲೂ ಕಡೆಗಣಿಸಲಾಗುತ್ತಿದೆ. ಆದ್ದರಿಂದ, ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಸಮುದಾಯದ ಅಭ್ಯುದಯಕ್ಕಾಗಿ ಸರ್ಕಾರ ಆದ್ಯತೆ ನೀಡುವಂತಾಗಬೇಕು ಎಂದು ಮನವಿ ಮಾಡಿದರು.