

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಹಲವುವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರುಮತ್ತು ಸಹಾಯಕಿಯರ ವಿವಿಧ ಬೇಡಿಕೆಈಡೇರಿಕೆಗಾಗಿ ನಡೆಸುತ್ತಿರುವಹೋರಾಟ ರಾಷ್ಟ್ರ ರಾಜಧಾನಿ ನವದೆಹಲಿಗೆಶಿಫ್ಟ್ ಆಗಿದೆ.ಏ.21ರಿಂದ ಮೂರು ದಿನಗಳಕಾಲ ದೆಹಲಿಯ ಜಂತರ್ ಮಂತರ್‌ನಲ್ಲಿಪ್ರತಿಭಟನೆ ನಡೆಸುವುದಾಗಿಎಐಟಿಯುಸಿ ಅಂಗಸಂಸ್ಥೆಯಾದ ಕರ್ನಾಟಕರಾಜ್ಯ ಅಂಗನವಾಡಿ ಕಾರ್ಯಕರ್ತೆಯರುಮತ್ತು ಸಹಾಯಕಿಯರ ಫೆಡರೇಷನ್ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿಈ ಕುರಿತು ವಿವರ ನೀಡಿದ ಸಂಸ್ಥೆಯಅಧ್ಯಕ್ಷ ಬಿ.ಅಮ್ಜದ್,ಅಂಗನವಾಡಿಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆನೀಡಲಾಗುತ್ತಿರುವ ಗೌರವ ಸಂಭಾವನೆಯಬದಲಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು.ಆ ಮೂಲಕ ಸೇವೆಯನ್ನುಖಾಯಂಗೊಳಿಸಿ ನಿವೃತ್ತಿ ವೇತನ,ಗ್ರಾಚ್ಯುಟಿಸೇರಿದಂತೆ ಇತರೆ ಸರ್ಕಾರಿ ನೌಕರರಿಗೆದೊರೆಯುವ ಎಲ್ಲ ಸೌಲಭ್ಯಗಳನ್ನುನೀಡಬೇಕೆಂದು ಕಳೆದ ಹತ್ತಾರುವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ.ಆದರೆ ಸರ್ಕಾರಕಿವಿಗೊಡುತ್ತಿಲ್ಲ. ಅಂಗನವಾಡಿಗಳುರಾಜ್ಯ ಮತ್ತು ಕೇಂದ್ರ ಸರ್ಕಾರಎರಡರ ಅನುದಾನದ ಕಾರ್ಯಕ್ರಮಗಳಿಗೆಒಳಪಡುವುದರಿಂದ ಇದುವರೆಗೂ ರಾಜ್ಯಸರ್ಕಾರದ ವಿರುದ್ಧ ಸಾಕಷ್ಟುಹೋರಾಟಗಳನ್ನು ಮಾಡಿದ್ದೇವೆ.ಆದರೆ ಕೇಂದ್ರಸರ್ಕಾರದ ಜವಾಬ್ದಾರಿಯೂ ಇರುವುದರಿಂದಇದೇ ಮೊದಲ ಬಾರಿಗೆ ಕೇಂದ್ರದಗಮನವನ್ನು ಸೆಳೆಯುವುದಕ್ಕಾಗಿದೆಹಲಿಯಲ್ಲಿ ಪ್ರತಿಭಟನೆಹಮ್ಮಿಕೊಂಡಿದ್ದೇವೆ ಎಂದರು.
ಕಳೆದ50 ವರ್ಷಗಳಹಿಂದೆ ಇಂದಿರಾಗಾಂಧಿಯವರು ಜಾರಿಗೆತಂದ ಸಮಗ್ರ ಶಿಶು ಅಭಿವೃದ್ಧಿಯೋಜನೆಯಲ್ಲಿ ನಿಧಾರವಾದ ಗೌರವಸಂಭಾವನೆ ನೀಡುವ ಕ್ರಮ ಹಾಗೆಯೇಮುಂದುವರೆದಿದೆ ಈಗ ಕೆಲಸದ ವಿಧಾನ,ಸಮಯ,ಶ್ರಮ ಬದಲಾಗಿದೆ.ಆದರೂ ಅವರನ್ನುಗೌರವ ಸಂಭಾವನೆಯಲ್ಲೇದುಡಿಸಿಕೊಳ್ಳುತ್ತಿರುವುದುಯಾವ ನ್ಯಾಯ ಎಂದು ಪ್ರಶ್ನಿಸಿರುವಸಂಘಟನೆ, ಕನಿಷ್ಠವೇತನ, ಗ್ರಾಚ್ಯುಟಿ,ನಿವೃತ್ತಿ ವೇತನ,ಆರೋಗ್ಯ ವಿಮೆಸೇರಿದಂತೆ ವಿವಿಧ ಬೇಡಿಕೆಗಳನ್ನಈಡೇರಿಸುವಂತೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಸಂಘದ ಪ್ರಧಾನ ಕಾರ್ಯದರ್ಶಿಎಂ.ಜಯಮ್ಮ,ಜಿಲ್ಲಾ ಕಾರ್ಯದರ್ಶಿಅನುಸೂಯ ಉಪಸ್ಥಿತರಿದ್ದರು.
ಉತ್ತರ ಭಾರತದಲ್ಲಿ ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆಯುವಂತೆ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಆದೇಶ ಮಾಡಿರುವುದು, ಅಂಗನವಾಡಿಗಳ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಅಂಗನವಾಡಿಗಳು ಶಿಕ್ಷಣ ಕೇಂದ್ರಗಳಲ್ಲ. ಬದಲಾಗಿ ಆಹಾರ, ಆರೋಗ್ಯ ಮತ್ತು ಆರೈಕೆ ಕೇಂದ್ರಗಳು. ಆದ್ದರಿಂದ ಯುಜಿಸಿ ಆದೇಶ ಹಿಂಪಡೆಯಬೇಕು.