ಗುರುಮಠಕಲï ತಾಲೂಕಿನ ಗೋಪಾಳಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ದೇವಿಂದ್ರಪ್ಪ ಹಾಗೂ ಸಹಾಯಕಿ ರಾಮಲಿಂಗಮ್ಮ ಬಸಪ್ಪ ಮೇಲೆ ಹ¯್ಲೆ ನಡೆಸಿದ ಆನಂದ ಭಜಂತ್ರಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಯಾದಗಿರಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಅಂಗನವಾಡಿ ನೌಕರರ ಸಂಘದವರು ಡಿಸಿ ರಾಹುಲ್ ಪಾಂಡ್ವೆ ಅವರಿಗೆ ಮನವಿಪತ್ರ ಸಲ್ಲಿಸಿದರು. ಕೆ.ಸೋಮಶೇಖರ, ಶರಣಗೌಡ, ಡಿ.ಉಮಾದೇವಿ, ಮಲ್ಲಿಕಾರ್ಜುನ ಸತ್ಯಂಪೇಟ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗೋಪಾಳಪುರದಲ್ಲಿ ಕೇಂದ್ರ ಭಜಂತ್ರಿ ಕೃತ್ಯ
ನೌಕರರಿಗೆ ಸೂಕ್ತ ರಕ್ಷಣೆ ನೀಡಲು ಮನವಿ
ಯಾದಗಿರಿ : ಗುರುಮಠಕಲï ತಾಲೂಕಿನ ಗೋಪಾಳಪುರ ಗ್ರಾಮದ ಅಂಗನವಾಡಿ ಕೇಂದ್ರ-೦೨ರ ಕಾರ್ಯಕರ್ತೆ ನಿರ್ಮಲಾ ದೇವಿಂದ್ರಪ್ಪ ಹಾಗೂ ಸಹಾಯಕಿ ರಾಮಲಿಂಗಮ್ಮ ಬಸಪ್ಪ ಮೇಲಿನ ಹ¯್ಲÉ ಖಂಡಿಸಿ ಮತ್ತು ಕರ್ತವ್ಯನಿರತ ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದಿAದ ಜಿಲ್ಲಾಽಕಾರಿ ಕಚೇರಿ ಎದುರು ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ನೇತೃತ್ವ ವಹಿಸಿದ್ದ ಸಂಘಟನೆ ಅಧ್ಯಕ್ಷ ಕೆ. ಸೋಮಶೇಖರ, ಜಿ¯್ಲÁಧ್ಯಕ್ಷ ಶರಣಗೌಡ, ಅಂಗನವಾಡಿ ಸಂಘದ ಜಿ¯್ಲÁಧ್ಯಕ್ಷೆ ಡಿ. ಉಮಾದೇವಿ ಅವರು ಜು.೨೦ರಂದು ಗೋಪಾಳಪುರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹಾಲು ಮತ್ತು ಆಹಾರ ವಿತರಿಸುತ್ತಿz್ದÁಗ ಆನಂದ ಭಜಂತ್ರಿ ಎಂಬಾತ ಅಕ್ರಮವಾಗಿ ಪ್ರವೇಶಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ. ಇಲಾಖೆ ನಿಯಮಾವಳಿಗಳಂತೆ ಹಿರಿಯ ಅಽಕಾರಿಗಳ ಅನುಮತಿ ಪತ್ರ ತೋರಿಸುವಂತೆ ಕೇಳಿದಾಗ ಅಶ್ಲೀಲ ಮಾತುಗಳಿಂದ ನಿಂದಿಸಿದ್ದಲ್ಲದೆ ಕಾರ್ಯಕರ್ತೆ ಕತ್ತು ಹಿಸುಕಿ, ಕೂದಲು ಹಿಡಿದು ಎಳೆದಾಡಿ ಹೊಡೆದಿದ್ದಾನೆ. ಸಹಾಯಕಿ ಮೇಲೂ ಮುಷ್ಟಿ ಹಾಗೂ ಚಪ್ಪಲಿಯಿಂದ ಹ¯್ಲÉ ನಡೆಸಿz್ದÁನೆ ಎಂದು ಆರೋಪಿಸಿದರು.
ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದಿದ್ದನ್ನು ಮರೆಮಾಚಲು ಆರೋಪಿ ಆನಂದ, ಅಂಗನವಾಡಿ ಸಿಬ್ಬಂದಿ ವಿರುದ್ಧವೇ ಗುರುಮಠಕಲï ಪೊಲೀಸ್ ಠಾಣೆಯಲ್ಲಿ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿz್ದÁನೆ. ಈತ ಆರೇಳು ತಿಂಗಳಿAದ ಮಾಡುತ್ತಿದ್ದ ಆರೋಪಗಳು ಇಲಾಖೆ ಆಂತರಿಕ ತನಿಖೆಯಲ್ಲಿ ನಿರಾಧಾರ ಎಂದು ಸಾಬೀತಾಗಿದ್ದರೂ ಗೂಂಡಾವರ್ತನೆ ತೋರಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ರೇಣುಕಾ ಪಾಟೀಲ, ಪದಾಽಕಾರಿಗಳಾದ ಗೌರಮ್ಮ, ಪ್ರತಿಮಾದೇವಿ, ಗಿರಿಜÁ, ರಾಧಾ, ಶೈಲಜÁ, ಅಯ್ಯಮ್ಮ, ಎಲಿಜÁ, ಶಾರದಾ, ವಿಜಯಲಕ್ಷಿ÷್ಮ, ಶಶಿಕಲಾ, ಸಾವಿತ್ರಿ, ರಾಧಮ್ಮ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ ಇತರರಿದ್ದರು.
ಸ್ಥಳಕ್ಕೆ ಆಗಮಿಸಿ ಮನವಿಪತ್ರ ಸ್ವೀಕರಿಸಿದ ಜಿ¯್ಲÁಽಕಾರಿ ರಾಹುಲ್ ಪಾಂಡ್ವೆ ಅವರು, ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದರ ಜತೆ ನೌಕರರ ರಕ್ಷಣೆ ಕೊಡಲಾಗುವುದು ಎಂದು ಭರವಸೆ ನೀಡಿದರು.
ಬೇಡಿಕೆಗಳೇನು?
* ಹ¯್ಲÉಗೊಳಗಾದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ವಿರುದ್ಧದ ಸುಳ್ಳು ಅಟ್ರಾಸಿಟಿ ಪ್ರಕರಣ ತಕ್ಷಣ ರದ್ದುಪಡಿಸಬೇಕು.
* ಹ¯್ಲÉ ನಡೆಸಿದವನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
* ಊರ ಹೊರಗಿನ ಅಸುರಕ್ಷಿತ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ಹೆಣ್ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸಬೇಕು.
* ಕುಟುಂಬಕ್ಕೆ ಆಸರೆಯಾಗಿರುವ ಈ ನೌಕರರಿಗೆ ಯಾವುದೇ ತೊಂದರೆ ಆಗದಂತೆ ಸೇವೆಯಲ್ಲಿ ಮುಂದುವರಿಸಬೇಕು.
* ನಿಯಮ ಮೀರಿ ಅಂಗನವಾಡಿಗಳಿಗೆ ಅಕ್ರಮವಾಗಿ ಪ್ರವೇಶಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.