ಅವ್ಯವಸ್ಥೆಯ ಆಗರ ಅಣೆಘಟ್ಟದ ಅಂಗನವಾಡಿ / DEVANAHALLI

ದೇವನಹಳ್ಳಿ ಅಣೆಟ್ಟ ಅಂಗನವಾಡಿ ಕೇಂದ್ರಕ್ಕೆ ನ್ಯಾಯಾಧೀಶ ಶ್ರೀಶೈಲ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸೇವಕ ಕೃಷ್ಣಪ್ರಸಾದ್​ ಇದ್ದರು.
ದೇವನಹಳ್ಳಿ ಅಣೆಟ್ಟ ಅಂಗನವಾಡಿ ಕೇಂದ್ರಕ್ಕೆ ನ್ಯಾಯಾಧೀಶ ಶ್ರೀಶೈಲ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸೇವಕ ಕೃಷ್ಣಪ್ರಸಾದ್​ ಇದ್ದರು.
Published on
ದೇವನಹಳ್ಳಿ : ತಾಲೂಕಿನ ಅಣೆಘಟ್ಟದ ಅಂಗನವಾಡಿ ಕೇಂದ್ರಕ್ಕೆ ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀಶೈಲ ಭೀಮಸೇನ್​ ಬಾಗಡಿ ಅವರು ದಿಢೀರ್​ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಕೇಂದ್ರದಲ್ಲಿ ಹಲವು ಅವ್ಯವಸ್ಥೆ ಕಂಡುಬಂದಿದ್ದು, ಸಿಬ್ಬಂದಿ ವಿರುದ್ಧ ಗರಂ ಆದರು. ಮಕ್ಕಳಿಗೆ ಫ್ಯಾನ್​ ವ್ಯವಸ್ಥೆ ಇದ್ದರೂ ವಿದ್ಯುತ್​ ಇಲ್ಲದಿರುವುದು, ಅಡುಗೆ ಕೋಣೆಯಲ್ಲಿಯೂ ವಿದ್ಯುತ್​ ಸಮಸ್ಯೆ, ಕತ್ತಲಲ್ಲಿ ಆಹಾರ ತಯಾರಿಸುವಾಗ ಏನಾದರೂ ಬಿದ್ದರೂ ತಿಳಿಯುವುದಿಲ್ಲ. ಎರಡು ತಿಂಗಳಿಂದ ಮಕ್ಕಳಿಗೆ ಆಹಾರ ವಿತರಣೆ ಮಾಡಿಲ್ಲ ಎಂಬುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿತು. ಮಕ್ಕಳ ಹಾಜರಾತಿ ಪುಸ್ತಕವನ್ನೂ ಸಮರ್ಪಕವಾಗಿ ನಿರ್ವಹಿಸಿರಲಿಲ್ಲ. ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ, ಅಂಗನವಾಡಿ ಕಟ್ಟಡ ದುಸ್ಥಿತಿ, ಶೌಚಗೃಹಕ್ಕೆ ಬಾಗಿಲು ಇಲ್ಲದಿರುವುದು, ಮಕ್ಕಳಿಗೆ ನೀಡುವ ಔಷಧಗಳ ಅವಧಿ ಮುಗಿದಿರುವುದು, ಅಂಗನವಾಡಿ ಕಟ್ಟಡದ ಮೇಲ್ಭಾಗದಲ್ಲಿ ವಿದ್ಯುತ್​ ತಂತಿ ಬಿದ್ದಿರುವುದನ್ನು ಕಂಡ ನ್ಯಾಯಾಧೀಶರು, ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದು ಮಕ್ಕಳ ಸುರಕ್ಷತೆ ಮತ್ತು ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net