ಆನೆ ಚೌಕೂರು ರಸ್ತೆ ವಿಸ್ತರಣೆ ಅವೈಜ್ಞಾನಿಕ

ಪಿರಿಯಾಪಟ್ಟಣದ ಆನೆ ಚೌಕೂರು ರಸ್ತೆ ವಿಸ್ತರಣೆ ಮತ್ತು ರಸ್ತೆ ವಿಭಜಕ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿರುವುದು.
ಪಿರಿಯಾಪಟ್ಟಣದ ಆನೆ ಚೌಕೂರು ರಸ್ತೆ ವಿಸ್ತರಣೆ ಮತ್ತು ರಸ್ತೆ ವಿಭಜಕ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಆನೆ ಚೌಕೂರು ರಸ್ತೆ ವಿಸ್ತರಣೆ ಮತ್ತು ರಸ್ತೆ ವಿಭಜಕ ಅಳವಡಿಕೆ ಕಾಮಗಾರಿ ಅವೈಜ್ಞಾನಿಕ
  • ಜೆಡಿಎಸ್ ಮುಖಂಡ ಪಿ.ಕೆ.ವಿಜಯಕುಮಾರ್
ಪಿರಿಯಾಪಟ್ಟಣ: ಪಟ್ಟಣದ ಆನೆ ಚೌಕೂರು ರಸ್ತೆ ವಿಸ್ತರಣೆ ಮತ್ತು ರಸ್ತೆ ವಿಭಜಕ ಅಳವಡಿಕೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಜೆಡಿಎಸ್ ಮುಖಂಡ ಪಿ.ಕೆ.ವಿಜಯಕುಮಾರ್ ಆರೋಪಿಸಿದ್ದಾರೆ.
ಈಗಾಗಲೇ ಪಟ್ಟಣದ ಬಸವೇಶ್ವರ ವೃತ್ತದಿಂದ ಆನೆ ಚೌಕೂರು ರಸ್ತೆವರೆಗೆ ಸುಮಾರು 1 ಕಿಮೀ ನಷ್ಟು ರಸ್ತೆ ವಿಭಜಕ ಅಳವಡಿಸಲಾಗಿದ್ದು ವಿಭಜಕ ಮಧ್ಯದಲ್ಲಿ ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ಪಿಡಬ್ಲ್ಯೂಡಿ ಕಚೇರಿ ಮುಂಭಾಗ, ಪುಷ್ಪ ವಿದ್ಯಾಸಂಸ್ಥೆ ಮತ್ತು ಹೌಸಿಂಗ್ ಬೋರ್ಡ್ ಜಂಕ್ಷನ್ ಹಾಗೂ ಚರ್ಚ್ ಮುಂಭಾಗ ವಾಹನಗಳ ಓಡಾಟಕ್ಕೆ ಅಧಿಕೃತವಾಗಿ ಜಾಗ ಬಿಡಲಾಗಿದ್ದು ತಂಬಾಕು ಮಂಡಳಿಯ ವಿಭಾಗಿಯ ವ್ಯವಸ್ಥಾಪಕ ಕಚೇರಿ ಮುಂಭಾಗ ಕೆಲವರು ಅನಧಿಕೃತವಾಗಿ ವಿಭಜಕ ತೆರವು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದೀಗ ಆನೆ ಚೌಕೂರು ರಸ್ತೆಯಲ್ಲಿ ಸುಮಾರು 500 ಮೀ ರಸ್ತೆ ವಿಸ್ತರಣೆ ಮತ್ತು ರಸ್ತೆ ವಿಭಜಕ ಅಳವಡಿಕೆ ಕಾಮಗಾರಿ ನಡೆಸಲಾಗುತ್ತಿದ್ದು, ಕಡಿಮೆ ಅಂತರದಲ್ಲಿ 3 ಸ್ಥಳಗಳಲ್ಲಿ ಅವೈಜ್ಞಾನಿಕವಾಗಿ ವಿಭಜಕ ತೆರವು ಮಾಡಿದ್ದಾರೆ. ನಿತ್ಯ ಈ ರಸ್ತೆಯಲ್ಲಿ ಗೋಣಿಕೊಪ್ಪ ಕಡೆಯಿಂದ ಬರುವ ಟಿಪ್ಪರ್ ವಾಹನಗಳು ವೇಗವಾಗಿ ಬರಲಿದ್ದು, ರಸ್ತೆ ತಿರುವಿನ ಬಳಿ ವಿಭಜಕ ತೆರವು ಇರುವುದು ವಾಹನ ಸವಾರರಿಗೆ ಕಾಣದಿರುವುದರಿಂದ ಅಪಘಾತವಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗೆ ದೂರು ನೀಡಿದರೂ ಸಹ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಅವೈಜ್ಞಾನಿಕವಾದ ವಿಭಜಕ ತೆರವುಗಳನ್ನು ಮುಚ್ಚಬೇಕು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net