ಮಧುಗಿರಿ:ವಚನಗಳ ಮೂಲಕ ಬದುಕಿನ ಹಾಗೂ ಸಾವಾಜಿಕ ವಿಚಾರಗಳನ್ನು ತಿಳಿಸುವುದರೊಂದಿಗೆ ಸವಾಜ ಸುಧಾರಣೆಗೆ ವಾರ್ಗದರ್ಶನ ನೀಡಿದ ತ್ರಿಪದಿ ಬ್ರಹ್ಮ ಸರ್ವಜ್ಞ ನಮಗೆಲ್ಲ ಆದರ್ಶಪ್ರಾಯರು ಎಂದು ತಾಲೂಕು ಸರ್ವಜ್ಞ ವೇದಿಕೆ ಅಧ್ಯಕ್ಷ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ಸಂಚಾಲಕ ವೆಂಕಟರವಣಪ್ಪ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ತಾಲೂಕು ಆಡಳಿತ ಹಾಗೂ ಸರ್ವಜ್ಞ ವೇದಿಕೆಯಿಂದ ಆಯೋಜಿಸಿದ್ದ ಸರ್ವಜ್ಞ ಜಯಂತಿಯಲ್ಲಿ ವಾತನಾಡಿ, ಹಿಂದುಳಿದ ಜನಾಂಗಗಳು ವೃತ್ತಿಪರ ವರ್ಗಗಳಾಗಿದ್ದು, ಬಹಳ ಹಿಂದಿನಿಂದ ಕಾಯಕ ನಿಷ್ಠೆಗೆ ಹೆಸರುವಾಸಿಯಾಗಿದ್ದವು. ಆದರೆ ಆಧುನಿಕ ಯುಗದಲ್ಲಿ ವೈಜ್ಞಾನಿಕ ಅವಿಷ್ಕಾರಗಳಿಂದ ಗುಡಿ ಕೈಗಾರಿಕೆಗಳು ಮೂಲೆಗುಂಪಾಗಿ ಈ ವರ್ಗದ ಜನರು ನಿರುದ್ಯೋಗಿಗಳಾಗಲು ಕಾರಣವಾಯಿತು ಎಂದರು.
ತಹಸೀಲ್ದಾರ್ ಎಚ್. ಶ್ರೀನಿವಾಸ್ ವಾತನಾಡಿ, ನಮ್ಮಲ್ಲಿ ಕೀಳರಿಮೆ ತೊರೆದು ಎಲ್ಲರೂ ವಿದ್ಯಾವಂತರಾದಾಗ ಸವಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ, ಕವಿ ಸರ್ವಜ್ಞ ತಮ್ಮ ತ್ರಿಪದಿಗಳ ಮೂಲಕ ಸವಾಜವನ್ನು ತಿದ್ದುವ ಕಾರ್ಯ ವಾಡಿದಂತಹ ಮಹಾನ್ ತತ್ವಜ್ಞಾನಿ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ತತ್ವದಂತೆ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿ, ಪ್ರತಿಯೊಬ್ಬರು ತಮ್ಮ ಕಾಯಕವನ್ನು ಶ್ರದ್ಧೆಯಿಂದ ವಾಡುವಂತೆ ತಿಳಿಸಿಕೊಟ್ಟಿದ್ದಾರೆ. ಸವಾಜದಲ್ಲಿ ಒಳ್ಳೆಯ ಸಾಧಕರಾಗಲು ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಮಹನೀಯರ, ಸಾಧಕರ, ವಿಜ್ಞಾನಿಗಳ, ಕವಿಗಳ, ಆದರ್ಶ ರೈತರ ಬಗೆಗಿನ ಪುಸ್ತಕಗಳನ್ನು ಓದಿದಾಗ ಅವರಲ್ಲಿ ನೆಗೆಟಿವ್ ಹೋಗಿ ಪಾಸಿಟೀವ್ ಚಿಂತನೆಗಳು ಬರುತ್ತವೆ ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಡಿವಾಳ ಸಂದ ಅಧ್ಯಕ್ಷ ಈಶ್ವರಯ್ಯ, ಸವಿತ ಸವಾಜ ಅಧ್ಯಕ್ಷ ಶ್ರೀನಿವಾಸ್, ಉಪ್ಪಾರ ಸಂದ ಗೌರವಾಧ್ಯಕ್ಷ ಸಿದ್ದಪ್ಪ, ಪಿಡಿಒ ಪ್ರಶಾಂತ್, ಶಿವಕುವಾರ್, ಸರ್ವಜ್ಞ ವೇದಿಕೆ ಖಜಾಂಚಿ ಬಸವರಾಜು, ಮುಖಂಡರಾದ ಗಂಗಾಧರಪ್ಪ, ಜಯರಾಮ್, ಸವಾಜಸೇವಕಿ ದರ್ಶಿನಿ ಗೋಪಾಲಕೃಷ್ಣ, ಶಿಲ್ಪಾ, ಕಂದಾಯ ತನಿಖಾಧಿಕಾರಿ ರಜಾಲಿ ಇದ್ದರು.