ಹಲವು ಸಚಿವರ 'ಸ್ಟಿಂಗ್' ಆಗಿರುವ ಸಾಧ್ಯತೆ, ಸಿದ್ದು ವರ್ಚಸ್ಸು ಹಾಳು ಮಾಡಲು ಯತ್ನ!....ಡಿಜಿಪಿ ಭೇಟಿ ಬಳಿಕ ಎಚ್‌ಡಿಕೆ ಹೊಸ ಬಾಂಬ್!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಪೊಲೀಸ್ ಮಹಾನಿರ್ದೇಶಕರನ್ನು (ಡಿಜಿ) ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಡಿಜಿ ಭೇಟಿ ಬಳಿಕ ಎಚ್‌ಡಿಕೆ ಹೊಸ ಬಾಂಬ್! (ಸಂಗ್ರಹ ಚಿತ್ರ)
ಡಿಜಿ ಭೇಟಿ ಬಳಿಕ ಎಚ್‌ಡಿಕೆ ಹೊಸ ಬಾಂಬ್! (ಸಂಗ್ರಹ ಚಿತ್ರ)
Published on: 

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಪೊಲೀಸ್ ಮಹಾನಿರ್ದೇಶಕರನ್ನು (ಡಿಜಿಪಿ) ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್​​ಡಿಕೆ, ಈ ಪ್ರಕರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರಲು ಹುನ್ನಾರ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರು, ಸ್ಟಿಂಗ್ ಆಪರೇಷನ್ ಹಿಂದಿರುವವರನ್ನು 48 ಗಂಟೆಗಳೊಳಗೆ ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇಂದು ನೀಡಿದ್ದ ಗಡುವು ಮುಗಿಯುತ್ತಿದ್ದಂತೆ ಮತ್ತೆ ಡಿಜಿ ಕಚೇರಿಗೆ ತೆರಳಿದ ಎಚ್​ಡಿಕೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನಡೆಯುತ್ತಿರುವ ಗಂಭೀರ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಈ ಪ್ರಕರಣವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದ್ದು, ಘಟನೆ ಬಗ್ಗೆ ಯಾವುದೇ ಸೂಕ್ತ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಸರ್ಕಾರದ ಈ ನಿಷ್ಕ್ರಿಯತೆಯು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಹೌದು ಪ್ರಧಾನಿ ಮೋದಿ ವಿರುದ್ಧದ ಪ್ರತಿಭಟನೆಗೆ ನಾವು ಆರ್ಥಿಕ ನೆರವು ನೀಡೋದು ಸತ್ಯ!...ಎಚ್​​​ಡಿಕೆ ಆರೋಪ ಒಪ್ಪಿಕೊಂಡ ಹರಿಪ್ರಸಾದ್​ | B K Hariprasad

ಕೇವಲ ಒಬ್ಬಿಬ್ಬರು ಮಾತ್ರವಲ್ಲದೆ, ಪ್ರಸ್ತುತ ಸಚಿವ ಸಂಪುಟದ ಹಲವು ಪ್ರಭಾವಿ ಸಚಿವರೇ ಈ ಸ್ಟಿಂಗ್ ಆಪರೇಷನ್‌ಗೆ ಒಳಗಾಗಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಘಟನೆ ನಡೆದು ಇಷ್ಟು ದಿನಗಳಾದರೂ ಸರ್ಕಾರ ಮತ್ತು ಗೃಹ ಸಚಿವರು ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎಚ್​​ಡಿಕೆ, ಆರೋಪಿಗಳ ವಿರುದ್ಧ 17ರಿಂದ 18 ವಿರುದ್ಧ ಜಾಮೀನು ರಹಿತ ವಾರೆಂಟ್‌ಗಳಿದ್ದರೂ ಅವರನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಮುಕ್ತ ಸ್ವಾತಂತ್ರ್ಯ ನೀಡದೆ ಸರ್ಕಾರ ಕೈಕಟ್ಟಿ ಕುಳಿತಿದೆ ಎಂಬ ಗಂಭೀರ ಆರೋಪ ಮಾಡಿದರು.

Also Read
ಆ ಒಬ್ಬ ವ್ಯಕ್ತಿಗೆ ಇಡೀ ಸರ್ಕಾರವೇ ಶರಣು, ಸಿಎಂ ಡಿಕೆಶಿ ಕೂಡ ಟ್ರ್ಯಾಪ್ ಆಗಿರಬಹುದು!...ಸ್ಟಿಂಗ್​ ಆಪರೇಷನ್​ ಬಗ್ಗೆ ಎಚ್​​ಡಿಕೆ ಸ್ಫೋಟಕ ಹೇಳಿಕೆ
ಡಿಜಿ ಭೇಟಿ ಬಳಿಕ ಎಚ್‌ಡಿಕೆ ಹೊಸ ಬಾಂಬ್! (ಸಂಗ್ರಹ ಚಿತ್ರ)

ಸರ್ಕಾರದ ಅಸಮರ್ಥತೆ ಮತ್ತು ಮೌನವನ್ನು ಖಂಡಿಸಿದ ಕುಮಾರಸ್ವಾಮಿ ಅವರು, ಸರ್ಕಾರದ ನಡೆ ಹೀಗೆಯೇ ಮುಂದುವರಿದರೆ ಮುಂಬರುವ ಕನ್ನಡ ರಾಜ್ಯೋತ್ಸವದ ದಿನದಂದು ವಿಧಾನಸೌಧದ ಮುಂಭಾಗ ಸಿಂಹಾಸನ ಹಾಕಿ ಈ ಘಟನೆ ಹಿಂದಿರುವ ವ್ಯಕ್ತಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟುಬಿಡುವುದು ಸೂಕ್ತ ಎಂದು ವ್ಯಂಗ್ಯವಾಡಿದರು. ಪೊಲೀಸ್ ಮಹಾನಿರ್ದೇಶಕರು ಈ ವಿಚಾರದಲ್ಲಿ ಕಾನೂನುಬದ್ಧವಾಗಿ ಯಾವ ರೀತಿಯ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡುತ್ತೇವೆ ಇದೇ ವೇಳೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net