

ಪ್ರಮುಖ ಮುಖ್ಯಾಂಶಗಳು
ಹೆಜ್ಜೆ ಗುರುತಿಗೆ ಅನುದಾನ ಕೊರತೆ!
| ಬಾಬಾಸಾಹೇಬರ ಸ್ಮಾರಕ ನಿರ್ಮಾಣಕ್ಕೆ ನಿರಾಸಕ್ತಿ |
ಆನಂದ ಭಮ್ಮನ್ನವರ ಚಿಕ್ಕೋಡಿ :
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಭೇಟಿ ನೀಡಿದ್ದ
ರಾಜ್ಯದ 10 ಸ್ಥಳಗಳಲ್ಲಿ ಸ್ಮಾರಕ ನಿರ್ಮಿಸಲು ಹೆಜ್ಜೆ ಗುರುತು ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10 ಕೋಟಿ ರೂ.ಅನುದಾನ ಮಿಸಲಿರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.ಇದರಲ್ಲಿ ಬೆಳಗಾವಿ,ಚಿಕ್ಕೋಡಿ ಮತ್ತು ನಿಪ್ಪಾಣಿ ಸ್ಥಳಗಳು ಇವೆ. ಆದರೆ ಐತಿಹಾಸಿಕ ಸ್ಮಾರಕ ನಿರ್ಮಾಣ ಕಾಮಗಾರಿಗೆ ಅನುದಾನದ ಕೊರತೆಯಿಂದ ಜಿಲ್ಲೆಯಲ್ಲಿ ಸ್ಮಾರಕ ನಿರ್ಮಾಣ ಕಾಮಗಾರಿಗೆ ಗ್ರಹಣ ಹಿಡಿದಿದೆ.
ಡಾ.ಅಂಬೇಡ್ಕರ್ ಅವರ ವಿಚಾರಧಾರೆ, ಚಿಂತನೆ, ಜೀವನ ಚರಿತ್ರೆ ಇಂದಿನ ಯುವ ಪೀಳಿಗೆಗೆ ಪರಿಚಯಿಸಲು ರಾಜ್ಯ ಸರ್ಕಾರದಿಂದ ಸ್ಮಾರಕ ನಿರ್ಮಾಣ ಘೋಷಣೆ ಮಾಡಿದರು. ಜಿಲ್ಲೆಗೆ ಮೂರು ಸ್ಥಳಗಳ ಕಾಮಗಾರಿಗೆ ತಲಾ 1 ಕೋಟಿಯಂತೆ ಅನುದಾನ ಕೂಡ ೨೦೨೩-೨೪ರಲ್ಲಿ ಮಂಜೂರು ಮಾಡಲಾಗಿದೆ.ಇದರಲ್ಲಿ ಬೆಳಗಾವಿಯಲ್ಲಿ ಕಾಮಗಾರಿ 80% ಮುಕ್ತಾಯಗೊಂಡಿದೆ.ಉಳಿದೆರಡು ಕಾಮಗಾರಿಗೆ ಗರ ಬಡಿದಿದೆ.
ಚಿಕ್ಕೋಡಿ, ನಿಪ್ಪಾಣಿ ಸ್ಮಾರಕ ನೆನೆಗುದಿಗೆ:
ಚಿಕ್ಕೋಡಿ ಪಟ್ಟಣದ ಹೊರವಲಯದ ಬಾಣಂತಿಖೋಡಿ ಬಳಿ ಸ್ಮಾರಕ ನಿರ್ಮಾಣಕ್ಕೆ 9 ಜಾಗ ಜಾಗ ನೀಡಿದ್ದು, ಹಾಗೂ ನಿಪ್ಪಾಣಿಯ ಗವಾನ ಮುರಾರ್ಜಿ ಶಾಲೆಯ ಶಾಲೆಯ ಬಳಿ ಸ್ಥಳ ಗುರುತಿಸಲಾಗಿದೆ. ಆದರೆ ಸರ್ಕಾರವು 1 ಕೋಟಿ ರೂ.ಅನುದಾನದಲ್ಲಿ ಜಾಗ ಸಮತಟ್ಟು, ರಕ್ಷಣಾ ಗೋಡೆ ನಿರ್ಮಾಣ, ಸ್ಮಾರಕ, ಮ್ಯೂಸಿಯಂ,ಸಆಶೋಧನಾ ಕೇಂದ್ರ ನಿರ್ಮಾಣಕ್ಕೆ ಹಣ ಕಳೆದ ಮೂರು ವರ್ಷದಿಂದ ಕಾಮಗಾರಿ ಪೂರ್ಣಗೊಂಡಿಲ್ಲ.
ಹೆಚ್ಚಿನ ಅನುದಾನ ನಿರೀಕ್ಷೆ:
ಬಿಜೆಪಿ ಸರ್ಕಾರದ ಈ ಸ್ಮಾರಕ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಸ್ಥಳಿಯ ಶಾಸಕರು ಹೆಚ್ಚಿನ ಅನುದಾನ ಮಂಜೂರೂ ಮಾಡಿಕೊಂಡು ದೊಡ್ಡ ಮಟ್ಟದಲ್ಲಿ ಸ್ಮಾರಕ ನಿರ್ಮಿಸೋಣ ಎಂಬ ಮಾತುಗಳು ಕಳೆದ ಮೂರು ವರ್ಷದಿಂದ ಹೇಳುತ್ತಿದ್ದಾರೆ. ಆದರೆ ಮಹಾಪುರುಷನ ಸ್ಮಾರಕ ನಿರ್ಮಾಣದ ಬಗ್ಗೆ ಕಾಂಗ್ರೆಸ್ ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಭಕ್ಸ
ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸಚಿವರು,ಶಾಸಕರು ಅಂಬೇಡ್ಕರ್ ಅವರು ಬರೆದ ಸಂವಿಧಾನದ ಬಗ್ಗೆ ಭಾಷಣ ಮಾಡುತ್ತಾರೆ.ಆದರೆ ಸಂವಿಧಾನ ಶಿಲ್ಪಿಯ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಬಳಿ ಅನುದಾನ ಇಲ್ಲವೇ? ಇದು ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅಪಮಾನ ಎಂದು ಅಂಬೇಡ್ಕರ್ ಅನುಯಾಯಿಗಳು ಆರೋಪಿಸಿದ್ದಾರೆ.
ಕೋಟ್-1
ಬೆಳಗಾವಿಯಲ್ಲಿನ ಅಂಬೇಡ್ಕರ್ ಸ್ಮಾರಕ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ.ಆದರೆ ಚಿಕ್ಕೋಡಿ ಮತ್ತು ನಿಪ್ಪಾಣಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಸ್ಥಳೀಯರು ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸುತ್ತಿರುವ ಶಾಸಕರು ಕಾಮಗಾರಿ ವಿಳಂಬವಾಗಿದೆ.
ರಾಮನಗೌಡ ಕನ್ನೋಳಿ
ಜಂಟಿ ನಿರ್ದೇಶಕರು,ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ