ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ನೀಡಿದ ಅಂಬೇಡ್ಕರ್​

Ambedkar, who gave democracy its true meaning.
Ambedkar, who gave democracy its true meaning.
Published on
ಮಾಸ್ತಿ: ಭಾರತದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿ, ಶತಮಾನಗಳಿಂದ ಅನ್ಯಾಯದ ಕಗ್ಗತ್ತಲಿನಲ್ಲಿ ಬದುಕುತ್ತಿದ್ದ ಜನರಿಗೆ ಸಂವಿಧಾನದ ಮೂಲಕ ಸಮಾನತೆ, ಸ್ವಾತಂತ್ರ$್ಯ, ಘನತೆಯ ಬದುಕು ನೀಡಿದ ಮಹಾನ್​ ಚಿಂತಕ ಡಾ.ಬಿ.ಆರ್​.ಅಂಬೇಡ್ಕರ್​ ಎಂದು ಡಾ.ಸುರೇಶ ಗೌತಮ್​ ಹೇಳಿದರು.
ಮಾಸ್ತಿ ಗ್ರಾಮದ ಗೋವರ್ಧನ ಕಲ್ಯಾಣ ಮಂಟಪದಲ್ಲಿ ದಸಂಸ ಆಯೋಜಿಸಿದ್ದ ಸದ್ಯದ ಸವಾಲುಗಳಿಗೆ ಅಂಬೇಡ್ಕರ್​ ಚಿಂತನೆಗಳು ಹಾಗೂ ಸಂವಿಧಾನವೇ ಪರಿಹಾರ ಎಂಬ ವಿಷಯದ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.
ಸಂವಿಧಾನ ಜಾರಿಯಾಗುವ ಮೊದಲು ದೇಶದಲ್ಲಿ ರಾಜರ ಆಡಳಿತ ಮತ್ತು ಖಡ್ಗದ ಆಳ್ವಿಕೆ ನಿಯಂತ್ರಿಸುತ್ತಿತ್ತು. ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ$್ಯ, ಸಮಾನ ಹಕ್ಕು, ಪ್ರಜಾಪ್ರಭುತ್ವದ ಅವಕಾಶಗಳು ಇರಲಿಲ್ಲ. ಅಂಬೇಡ್ಕರ್​ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡಿ, ದೇಶದ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿದರು. ಪಾರ್ಲಿಮೆಂಟ್​ನ ಕೀಲಿ ಜನಸಾಮಾನ್ಯರ ಕೈಗೆ ಒಪ್ಪಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ನೀಡಿದರು ಎಂದರು.
ಪ್ರಸ್ತುತ ಕೆಲವರು ಅಮೂಲ್ಯ ಮತ ಹಣಕ್ಕೆ ಮಾರಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯ ಕುಗ್ಗಿಸುತ್ತಿದೆ. ದೇಶ ಅಭಿವೃದ್ಧಿ ಸಾಧಿಸುತ್ತಿದ್ದರೂ ಬಡತನ, ಸಾಮಾಜಿಕ ಅಸಮಾನತೆ ನಿಮೂರ್ಲನೆಯಾಗಿಲ್ಲ. ಸಾಮಾಜಿಕ, ರಾಜಕೀಯ, ಆರ್ಥಿಕ ಸವಾಲುಗಳಿಗೆ ಡಾ.ಅಂಬೇಡ್ಕರ್​ ಅವರ ಚಿಂತನೆಗಳನ್ನು ಅರ್ಥಮಾಡಿಕೊಂಡು ಅನುಷ್ಠಾನಗೊಳಿಸಿದರೆ ಶಾಶ್ವತ ಪರಿಹಾರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಾಸ್ತಿ ಹೋಬಳಿಯ ಸರ್ಕಾರಿ ಶಾಲೆಗಳ ಎಸ್​ಎಸ್​ಎಲ್​ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಜತೆಗೆ ದಸಂಸ ಸಂಘಟನೆಯ ಹಿರಿಯ ಮುಖಂಡರು, ಸಮಾಜಮುಖಿ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net