2ವರ್ಷದೊಳಗೆ 4.5 ಕೋಟಿ ವೆಚ್ಚ ಅಂಬೇಡ್ಕರ್​ ಭವನ ನಿರ್ಮಾಣ Ambedkar

2ವರ್ಷದೊಳಗೆ 4.5 ಕೋಟಿ ವೆಚ್ಚ ಅಂಬೇಡ್ಕರ್​ ಭವನ ನಿರ್ಮಾಣ Ambedkar
2ವರ್ಷದೊಳಗೆ 4.5 ಕೋಟಿ ವೆಚ್ಚ ಅಂಬೇಡ್ಕರ್​ ಭವನ ನಿರ್ಮಾಣ Ambedkar
Published on

ಪ್ರಮುಖ ಮುಖ್ಯಾಂಶಗಳು

  • ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​ ಹೇಳಿಕೆ
  • ಕ್ಷೇತ್ರದ ಐದು ಹೋಬಳಿಯಲ್ಲೂ ಕಟ್ಟಡ
ಮುಳಬಾಗಿಲು: ಜಿಲ್ಲೆಯಲ್ಲಿ ಸುಸಜ್ಜಿತ ವ್ಯವಸ್ಥೆಯನ್ನೊಳಗೊಂಡ ವಿಶಾಲ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಸಮುದಾಯ ಭವನವನ್ನು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ 2028ರ ಏ.14ರಂದು ಲೋಕಾರ್ಪಣೆ ಗೊಳಿಸಲಾಗುವುದು ಎಂದು ಶಾಸಕ ಸಮೃದ್ಧಿ ಮಂಜುನಾಥ್​ ತಿಳಿಸಿದರು.
ತಾಲೂಕಿನ ದೇವರಾಯಸಮುದ್ರ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಅಂಬೇಡ್ಕರ್​ ಭವನ ನಿಮಾರ್ಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನನ್ನ ಸಮುದಾಯಕ್ಕೆ ಅನೇಕ ವರ್ಷಗಳಿಂದ ಇದ್ದಂತಹ ಕೊರಗು ನನ್ನ ಅವಧಿಯಲ್ಲಿ ನೆರವೇರುತ್ತಿದೆ. ದಲಿತ ಸಂಘಟನೆ ಬೇಡಿಕೆಯಂತೆ 1.20 ಎಕರೆ ಜಮೀನಿನಲ್ಲಿ ಹೈಟೆಕ್​ ಮಾದರಿಯಲ್ಲಿ ಅಂಬೇಡ್ಕರ್​ ಭವನ, ಕಲ್ಯಾಣ ಮಂಟಪ ನಿಮಾರ್ಣದ ಮುಂದುವರೆದ ಕಾಮಗಾರಿಗೆ ಇನ್ನೂ 50 ಲಕ್ಷ ರೂ. ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಈಗಾಗಲೇ ಭವನ ನಿರ್ಮಿಸಲು ಸರ್ಕಾರದಿಂದ 2 ಕೋಟಿ ರೂ. ಮಂಜೂರಾಗಿದ್ದು ಜತೆಗೆ ಶಾಸಕರ ಅನುದಾನದಿಂದ 1 ಕೋಟಿ ರೂ., ಸಿಎಂ ಅನುದಾನದಲ್ಲಿ <1.5 ಕೋಟಿ ಬಿಡುಗಡೆಯಾಗಲಿದೆ. ತಾಲೂಕಿನ ಅಂಬೇಡ್ಕರ್​ ಅಭಿಮಾನಿಗಳ ಅನೇಕ ವರ್ಷಗಳ ಬೇಡಿಕೆಯಂತೆ ಸುಸಜ್ಜಿತ ಅಂಬೇಡ್ಕರ್​ ಭವನ, ಪಾರ್ಕ್​, ಮ್ಯೂಸಿಯಂ ನಿಮಾರ್ಣ ಮಾಡಿ ದಲಿತ ಸಮುದಾಯದವರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲಾಗುವುದು. ತಾಲೂಕಿನ 5 ಹೋಬಳಿ ಕೇಂದ್ರಗಳಲ್ಲಿ ತಲಾ 30 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್​ ಸಮುದಾಯ ಭವನ ನಿರ್ಮಿಸಿ ಎಸ್ಸಿ, ಎಸ್ಟಿ ಹಾಗೂ ಇತರೆ ಸಮುದಾಯಗಳ ಬಡವರ ಮದುವೆ ಸೇರಿ ಇತರೆ ಸಮಾರಂಭ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ ಅಭಿವೃದ್ಧಿ ಸಮಿತಿಯಲ್ಲಿ ನನ್ನನ್ನು ಒಬ್ಬ ಸದಸ್ಯನನ್ನಾಗಿ ಆಯ್ಕೆ ಮಾಡಿದ್ದಾರೆ. ಈಗ ಮುಳುಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಬೇಕಾದ ಪೂರ್ಣ ಪ್ರಮಾಣದ ಅನುದಾನ ತರಲು ಇದರಿಂದ ಸಾಧ್ಯವಾಗಲಿದೆ ಎಂಬ ಮಾಹಿತಿ ನೀಡಿದರು.
ನವನಗರವಾಗಲಿರುವ ದೇವರಾಯಸಮುದ್ರ ಗೇಟ್​: ರಾ.ಹೆ. 75ರ ದೇವರಾಯಸಮುದ್ರ ಬಳಿ 750 ಎಕರೆಯಲ್ಲಿ ಕೈಗಾರಿಕೆ ನಿಮಾರ್ಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಕೈಗಾರಿಕೆ ಪ್ರಾರಂಭವಾಗುವ ಸಾಧ್ಯತೆಗಳಿವೆ. ಈ ಭಾಗದಲ್ಲಿ ಕೈಗಾರಿಕೆಗಳು ಪ್ರಾರಂಭವಾದರೆ ಈ ಸ್ಥಳ ನವನಗರವಾಗಲಿದೆ ಎಂದರು.
ಜೆಡಿಎಸ್​ ಮುಖಂಡರಾದ ಗೊಲ್ಲಹಳ್ಳಿ ಜಗದೀಶ್​, ಬಂಡಹಳ್ಳಿ ಲಕ್ಷ್ಮೀನಾರಾಯಣ, ನಾಗಮಂಗಲ ಶಂಕರಪ್ಪ, ಡೆಕ್ಕನ್​ ಶ್ರೀನಿವಾಸ್​, ಅನಂತ ಪದ್ಮನಾಭರಾವ್​, ದಲಿತ ಮುಖಂಡರಾದ ಸಂಗಸಂದ್ರ ವಿಜಯ್​ಕುಮಾರ್​, ಮೆಕಾನಿಕ್​ ಜಿ.ಶ್ರೀನಿವಾಸ್​, ಕೀಲುಹೊಳಲಿ ಸತೀಶ್​, ಪೆದ್ದಕಸುವು ರಾಜು, ವಿ.ಶ್ರೀನಿವಾಸ್​, ಮಲ್ಲೆಕುಪ್ಪ ಅಂಬರೀಶ್​, ಬೈರಕೂರು ರಾಮಾಂಜಿ, ವಿಜಿ, ಕೀಲುಹೊಳಲಿ ಹರೀಶ್​, ಜಮ್ಮನಹಳ್ಳಿ ಜಗದೀಶ್​, ವೇಮಗಲ್​ ಮುರಳಿ, ಶಂಕರ್​, ಚರಣ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net