ಅಂಬಾರಿ, ಸಿಂಹಾಸನ ಬಾಡಿಗೆಗೆ ಬಿಟ್ಟಿಲ್ಲ: ಸರ್ಕಾರದ ‘ರಾಯಲ್ಟಿ’ ರಹಸ್ಯ ಬಿಚ್ಚಿಟ್ಟ ಪ್ರಮೋದಾದೇವಿ ಒಡೆಯರ್! Pramoda Devi Wadiyar

Addressing a press conference in Mysore, royal family member Pramodadevi Wadiyar provided clarifications regarding the use of the golden howdah and the throne, as well as the royalty payable to the government.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಚಿನ್ನದ ಅಂಬಾರಿ, ಸಿಂಹಾಸನ ಬಳಕೆ ಹಾಗೂ ಸರ್ಕಾರದ ರಾಯಲ್ಟಿ ಕುರಿತು ಸ್ಪಷ್ಟನೆ ನೀಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್.
Published on: 

ಮೈಸೂರು: ಅರಮನೆಯ ಅಂಬಾರಿ ಮತ್ತು ಸಿಂಹಾಸನ ಯದುವಂಶದ ಖಾಸಗಿ ಸ್ವತ್ತುಗಳಾಗಿದ್ದು, ಅವುಗಳನ್ನು ಸರ್ಕಾರಕ್ಕೆ ಬಾಡಿಗೆ ನೀಡುತ್ತಿಲ್ಲ. ನಮ್ಮ ಸ್ವತ್ತುಗಳನ್ನು ದಸರಾ ಉತ್ಸವದಲ್ಲಿ ಬಳಸಿಕೊಂಡು, ಪ್ರಚಾರಕ್ಕೂ ಉಪಯೋಗಿಸುವುದರಿಂದ ಸರ್ಕಾರ ಗೌರವಧನದ ರೂಪದಲ್ಲಿ ರಾಯಲ್ಟಿ ನೀಡುತ್ತಿದೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ವ್ಯವಸ್ಥೆ ಎಂದು ರಾಜವಂಶಸ್ತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ದಸರಾ ಆಚರಣೆ, ಅಂಬಾರಿ ಬಳಕೆ, ಜಟ್ಟಿ ಕಾಳಗ, ಧಾರ್ಮಿಕ ಸಂಪ್ರದಾಯಗಳು ಹಾಗೂ ಅರಮನೆ ಮತ್ತು ಸರ್ಕಾರದ ನಡುವಿನ ವಿವಾದಗಳ ಕುರಿತು ಮಾತನಾಡಿದ ಅವರು, ನಮ್ಮ ಧಾರ್ಮಿಕ ಆಚರಣೆಗಳಿಗೆ ಸರ್ಕಾರ ಅಡ್ಡಿಪಡಿಸಬಾರದು. ಅದೇ ರೀತಿ ಸರ್ಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನಾವು ಅಡ್ಡಿಯಾಗುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂಬಾರಿ ನಮ್ಮ ಖಾಸಗಿ ಸ್ವತ್ತು!

ಅಂಬಾರಿ ಮತ್ತು ಸಿಂಹಾಸನ ನಮ್ಮ ಕುಟುಂಬದ ಖಾಸಗಿ ಸ್ವತ್ತುಗಳು. ಮೈಸೂರು ಅರಮನೆಯನ್ನೂ ಸರ್ಕಾರ ನಿರ್ಮಿಸಿದ್ದಲ್ಲ. ಬೆಂಗಳೂರು ಅರಮನೆಯನ್ನು ನಮ್ಮ ಕುಟುಂಬ ಖರೀದಿಸಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಕಾನೂನು ಪ್ರಕಾರ ತೆರಿಗೆ ಪಾವತಿಸುತ್ತಿದ್ದೇವೆ. ತೆರಿಗೆ ಕಟ್ಟಿದ ನಂತರವೂ ಇವು ನಮ್ಮ ಖಾಸಗಿ ಸ್ವತ್ತುಗಳಾಗಿಯೇ ಉಳಿದಿವೆ. ಕೆಲವರು ಮಾಹಿತಿ ಕೊರತೆಯಿಂದ ಈ ಬಗ್ಗೆ ಮಾತನಾಡುತ್ತಿದ್ದಾರೆ. ಅಧಿಕಾರಿಗಳೂ ಈ ವಿಚಾರದಲ್ಲಿ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಬೇಕಿದೆ ಎಂದು ಹೇಳಿದ್ದಾರೆ.

Also Read
ಚುನಾವಣೆಯಲ್ಲಿ ಸೋತು ಸುಣ್ಣಾದ ರಿಪಬ್ಲಿಕನ್ಸ್​​​​: ‘ಬ್ಯಾಲೆಟ್‌ನಲ್ಲಿ ನನ್ನ ಹೆಸರಿದ್ದರೆ ಗೆಲುವು ನಮ್ಮದಾಗಿತ್ತು’; ಟ್ರಂಪ್​ ವಿಚಿತ್ರ ಸಮರ್ಥನೆ! Donald Trump
Addressing a press conference in Mysore, royal family member Pramodadevi Wadiyar provided clarifications regarding the use of the golden howdah and the throne, as well as the royalty payable to the government.

ನಾನು ಸರ್ಕಾರಕ್ಕೆ ದೂಷಣೆ ಮಾಡಿಲ್ಲ!

ಈ ಬಾರಿ ನಡೆದ ದಸರಾ ಉತ್ಸವದ ಸಂದರ್ಭದಲ್ಲಿ, ಸರ್ಕಾರದ ಕೆಲ ಆಯೋಜನೆಗಳಿಂದ ದಸರಾ ಆಚರಣೆಗೆ ತೊಂದರೆ ಉಂಟಾಗಿತ್ತು. ಕೆಲವು ಸಂಗತಿಗಳನ್ನು ತಮ್ಮ ಗಮನಕ್ಕೆ ತಂದೇ ಇರಲಿಲ್ಲ. ನಿಯೋಜನೆಗೊಂಡ ಅಧಿಕಾರಿಗಳು ಸರಿಯಾಗಿ ಸಹಕರಿಸಿಲ್ಲವೆಂದು ರಾಜವಂಶಸ್ತೆ ಪ್ರಮೋದಾದೇವಿ ಒಡೆಯರ್, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.

ನಾನು, ಆ ಪತ್ರವನ್ನು ಸರ್ಕಾರಕ್ಕೆ ದೂಷಣೆ ಮಾಡಲು ಬರೆದಿದ್ದಲ್ಲ. ನಾನು ಕೇವಲ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದೆ. ಆದರೆ ಅದನ್ನು ಅನೇಕರು ತಪ್ಪಾಗಿ ಅರ್ಥೈಸಿಕೊಂಡರು. ಆದರೆ ನನ್ನ ನಿಲುವು ಸ್ಪಷ್ಟವಾಗಿದೆ. ನಮಗೆ ಮೂಲ ಸಮಸ್ಯೆ ಎನ್ನಿಸಿದ್ದು, ದಸರಾ ಆನೆಗಳ ಜತೆಯಲ್ಲಿ ಪೊಲಸರು ಫೋಟೊ ತೆಗೆದುಕೊಂಡಿದ್ದಾಗಿದೆ. ಇದಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಲೇ ಬೇಕೆಂದು ಅವರು ಆಗ್ರಹಿಸಿದ್ದಾರೆ.