ಶ್ರೀ ಕಾಡು ಬಸವೇಶ್ವರ ಸ್ವಾಮಿಗೆ ಅಮಾವಾಸ್ಯೆ ಪೂಜೆ

 ತಿ.ನರಸೀಪುರ ಪಟ್ಟಣದ ಹೊರವಲಯದಲ್ಲಿನ ಈಶ್ವರ ಗೌಡನ ಹಳ್ಳಿ ವ್ಯಾಪ್ತಿಯ ಶ್ರೀ ಕಾಡು ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಅನ್ನ ಪ್ರಸಾದ ಕಾರ್ಯಕ್ರಮಕ್ಕೆ ಪುರಸಭೆ ಮಾಜಿ ಸದಸ್ಯೆ ರೂಪಾ ಪರಮೇಶ್ ಚಾಲನೆ ನೀಡಿದರು .
ತಿ.ನರಸೀಪುರ ಪಟ್ಟಣದ ಹೊರವಲಯದಲ್ಲಿನ ಈಶ್ವರ ಗೌಡನ ಹಳ್ಳಿ ವ್ಯಾಪ್ತಿಯ ಶ್ರೀ ಕಾಡು ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಅನ್ನ ಪ್ರಸಾದ ಕಾರ್ಯಕ್ರಮಕ್ಕೆ ಪುರಸಭೆ ಮಾಜಿ ಸದಸ್ಯೆ ರೂಪಾ ಪರಮೇಶ್ ಚಾಲನೆ ನೀಡಿದರು .
Published on
ತಿ.ನರಸೀಪುರ: ಧನುರ್ಮಾಸದ ಮೊದಲ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈಶ್ವರಗೌಡನಹಳ್ಳಿ, ಹೆಳವರಹುಂಡಿ ಸಮೀಪದ ಶ್ರೀ ಕಾಡು ಬಸವೇಶ್ವರಸ್ವಾಮಿ ದೇವಸ್ಥಾನದ ಸನ್ನಿಧಾನದಲ್ಲಿ ಶುಕ್ರವಾರ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಅಮಾವಾಸ್ಯೆ ಹಿನ್ನೆಲೆಯಲ್ಲಿ ಶ್ರೀ ಕಾಡು ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಪುರಸಭೆ ಮಾಜಿ ಸದಸ್ಯೆ ರೂಪಾ ಪರಮೇಶ್ ಅವರ ಸೇವಾರ್ಥದೊಂದಿಗೆ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.

ಹೆಳವರಹುಂಡಿ ಸುತ್ತಮುತ್ತಲ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ದೇವರಿಗೆ ಕಾಣಿಕೆ ಸಲ್ಲಿಸಿದರು. ಅಮಾವಾಸ್ಯೆ ಹಿನ್ನೆಲೆಯಲ್ಲಿ ಬಸವೇಶ್ವರ ಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ವೀರಶೈವ ಲಿಂಗಾಯತ ಸಮಾಜದ ಮಹಿಳಾ ಘಟಕದ ವತಿಯಿಂದ ದೇವಸ್ಥಾನದ ಆವರಣದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು. ಖ್ಯಾತ ಗಾಯಕ ಕಿರಗಸೂರು ರಾಜಪ್ಪ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಅನ್ನ ದಾಸೋಹಕ್ಕೆ ನಿರ್ಮಿಸಲಾಗಿದ್ದ ಎರಡು ಕೌಂಟರ್‌ಗಳಲ್ಲಿ ಭಕ್ತರಿಗೆ ಕಡ್ಲೆಹುಳಿ, ಪಾಯಸ, ಬೂಂದಿ, ಅನ್ನ ಸಾಂಬಾರ್, ಮಜ್ಜಿಗೆ ಬಡಿಸಲಾಯಿತು. ಹೊಸೂರುಂಡಿ ಗುರು ಮಲ್ಲೇಶ್ವರ ದಾಸೋಹ ಮಠದ ಅಧ್ಯಕ್ಷ ರಾಜಶೇಖರ ಸ್ವಾಮೀಜಿ, ನೆರಗ್ಯಾತನಹಳ್ಳಿ ವಿರಕ್ತ ಮಠದ ಇಮ್ಮಡಿ ಶಿವಕುಮಾರ ಸ್ವಾಮೀಜಿ, ಹೆಳವರಹುಂಡಿ ಶಿವಲಿಂಗ ಸ್ವಾಮೀಜಿ, ಪುರಸಭೆ ಮಾಜಿ ಸದಸ್ಯೆ ರೂಪಾ ಪರಮೇಶ್, ವಕೀಲ ಪರಮೇಶ್, ಬಿಲಿಗೆರೆಹುಂಡಿ ಹುಂಡಿ ಮಂಟೇಸ್ವಾಮಿ, ಬನ್ನಳ್ಳಿ ಹುಂಡಿ ಶಿವಕುಮಾರ್, ಜೆಎಸ್‌ಎಸ್ ನಟರಾಜು, ಕೆಬ್ಬೇಹುಂಡಿ ಶಿವಕುಮಾರ, ತೊಂಟೇಶ್, ಸುಂದರ್ ಸ್ವಾಮಿ, ಕೇಬಲ್ ರಾಜಶೇಖರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net