ಎಸ್‌ಐಆರ್ ಹೋರಾಟ ಸಮರ್ಥಿಸಿದ ಅಮಾನ್ ಅಂಬೇಡ್ಕರ್

ಚುನಾವಣೆಗಳಲ್ಲಿ ಪಕ್ಷದ ಆಭ್ಯಥಿಗಳನ್ನು ಕಣಕ್ಕಿಳಿಸುವ ಘೋಷಣೆ
Murugesh of Whitefield congratulated Republican Sena party chief Aman Ambedkar by presenting him with a bouquet.
ರಿಪಬ್ಲಿಕನ್ ಸೇನೆ ಪಕ್ಷದ ಮುಖ್ಯಸ್ಥ ಅಮಾನ್ ಅಂಬೇಡ್ಕರ್ ಅವರನ್ನು ವೈಟ್‌ಫೀಲ್ಡ್ ಮುರುಗೇಶ್ ಹೂಗುಚ್ಛ ನೀಡಿ ಅಭಿನಂದಿಸಿದರು.
Published on: 

ಬೆಂಗಳೂರು : ದೇಶದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಕುರಿತಂತೆ ತೀವ್ರತರವಾದ ಹೋರಾಟ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಕೂಡ ಮತದಾರ ಪಟ್ಟಿಯಿಂದ ಕೆಲವರನ್ನು ಕೈ ಬಿಡಲಾಗಿದೆ ಇದರಲ್ಲಿ ಮೋಸ ನಡೆದಿದೆ ಯುವ ಜನಾಂಗದವರು ದ್ವನಿ ಎತ್ತಿರುವುದು ಸಮಂಜಸವಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಮರಿಮೊಮ್ಮಗ ಅಮಾನ್ ಅಂಬೇಡ್ಕರ್ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಿಪಬ್ಲಿಕನ್ ಸೇನೆ ಪಕ್ಷದ ದಕ್ಷಿಣ ಭಾರತ ಅಧ್ಯಕ್ಷ ವೈಟ್‌ಫೀಲ್ಡ್ ಮುರುಗೇಶ್ ನಿಯೋಗದ ಜತೆ ಮಾತಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಂಬರುವ ಜಿಬಿಎ ಮತ್ತು ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ರಿಬಿಪ್ಲಕನ್ ಸೇನೆ ಪಕ್ಷ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಯುವಕರನ್ನು ಸಂಘಟಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳದೇ ಮುಂಬರುವ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ದೇಶಾದ್ಯಂತ ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅಮಾನ್ ಇದೇವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಭೀಮ್ ಪ್ರಜಾ ಸಂಘದ ಉಪಾಧ್ಯಕ್ಷ ಬೊಮ್ಮಸಂದ್ರ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.

ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆ ವಿಚಾರ ಕುರಿತು ಅಮಾನ್ ಅಂಬೇಡ್ಕರ್ ಜತೆ ಮಾತುಕತೆ ನಡೆಸಲಾಗಿದೆ, ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.
ವೈಟ್‌ಫೀಲ್ಡ್ ಮುರುಗೇಶ್, ರಿಪಬ್ಲಿಕನ್ ಸೇನೆ ದಕ್ಷಿಣ ಭಾರತ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net