ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ: ನಟ ಧನ್ವೀರ್ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮ್ಯಾನೇಜರ್‌ ದೂರು ದಾಖಲು! Dhanveer

ಫೋನ್ ಕರೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ನಟ ಧನ್ವೀರ್ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಮ್ಯಾನೇಜರ್ ನಾಗರಾಜ್ ಆರ್.ಆರ್. ನಗರ ಠಾಣೆಗೆ ದೂರು ನೀಡಿದ್ದಾರೆ.
Sandalwood actor Dhanveer faces allegations of using abusive language.
ಅವಾಚ್ಯ ಪದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಸ್ಯಾಂಡಲ್‌ವುಡ್ ನಟ ಧನ್ವೀರ್
Published on: 

ಬೆಂಗಳೂರು: ಸ್ಯಾಂಡಲ್​ವುಡ್​ ನಟ, ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಟ ಧನ್ವೀರ್​ ವಿರುದ್ಧ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಅವರ ಆಪ್ತ ಸಹಾಯಕ​ ನಾಗರಾಜ ಎನ್ನುವವರು ಪೊಲೀಸ್​ ಕಂಪ್ಲೇಂಟ್ (NCR)​ ನೀಡಿದ್ದಾರೆಂದು ತಿಳಿದುಬಂದಿದೆ.

ಪೋನ್​ ಕರೆಯಲ್ಲಿ ಅವಾಚ್ಯ ಪದಗಳನ್ನು ಬಳಸಿದ ಹಿನ್ನಲೆಯಲ್ಲಿ ನಟ ಧನ್ವೀರ್​ ವಿರುದ್ಧ ಮ್ಯಾನೇಜರ್​ ನಾಗರಾಜ್ ರಾಜರಾಜೇಶ್ವರಿ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆಂದು ಹೇಳಲಾಗುತ್ತಿದೆ. ದೂರವಾಣಿ ಕರೆಯಲ್ಲಿ ಧನ್ವೀರ್​ ಕೆಟ್ಟಾ-ಕೊಳಕ ಪದಗಳನ್ನು ಬಳಸಿದ್ದಾರೆಂದು ಆರೋಪಿಸಿರುವ ನಾಗರಾಜ್​, ಕಾಲ್​ ರೆಕಾರ್ಡ್​ ಅನ್ನು ಪೊಲೀಸರಿಗೆ ಸಾಕ್ಷಿರೂಪದಲ್ಲಿ ಸಲ್ಲಿಸಿದ್ದು, ಕೆಲವೇ ಸಮಯದಲ್ಲಿ ನಟ ಧನ್ವೀರ್​ನನ್ನು ಆರ್​ಆರ್​ ನಗರ ಪೊಲೀಸರು ವಿಚಾರಣೆಗೆ ಕರೆತರಲಿದ್ದಾರೆಂದು ಹೇಳಲಾಗುತ್ತಿದೆ.

ಇನ್​ಸ್ಟಾಗ್ರಾಂ ವಿವಾದ!

ಕಳೆದ ಕೆಲ ದಿನಗಳಿಂದ ನಟ ಧನ್ವೀರ್ ವಿಚಾರ ಸೋಷಿಯಲ್​ ಮೀಡಿಯಾನಲ್ಲಿ ವಿವಾದಕ್ಕೆ ಕಾರಣವಾಗುತ್ತಲೇ ಇದೆ. ಯುವ ದಸರಾ ಸಂದರ್ಭದಲ್ಲಿ ಕೂಡ ಧನ್ವೀರ್ ನೀಡಿದ್ದ ಹೇಳಿಕೆ ವಿವಾದದ ರೂಪವನ್ನು ಪಡೆದುಕೊಂಡು ತೀವ್ರ ಚರ್ಚೆಗೆ ಕಾರಣವಾಗಿತ್ತು.

ನಂತರ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಇನ್​ಸ್ಟಾಗ್ರಾಂನಲ್ಲಿ, "ಕೆಲವರು ದರ್ಶನ್​ ಅವರ ಹೆಸರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ" ಎನ್ನುವ ಅರ್ಥದಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದರು. ಇದು ನಟ ಧನ್ವೀರ್​ಗೆ ಪರೋಕ್ಷವಾಗಿ ನೀಡಿದ್ದ ಟಾಂಗ್​ ಎಂಬ ವದಂತಿ ಹಬ್ಬಿತ್ತು.

Also Read
"ನನ್ನ ಮೇಲೆ ಯಾವುದೇ ಸ್ಟಿಂಗ್ ನಡೆದಿಲ್ಲ, ಇದೆಲ್ಲ ಬ್ಲ್ಯಾಕ್‌ಮೇಲ್ ತಂತ್ರ!": ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಿದ್ದರಾಮಯ್ಯ ತಿರುಗೇಟು! Siddaramaiah
Sandalwood actor Dhanveer faces allegations of using abusive language.

ಇದಕ್ಕೆ ಪ್ರತಿಯಾಗಿ ನಟ ಧನ್ವೀರ್ ಕೂಡ, ಬೇರೆಯವರ ಮೇಲೆ ಗೂಬೆ ಕೂರಿಸಿ, ಕೊನೆಗೆ ತಾವೇ ಸಂತ್ರಸ್ತರೆಂಬಂತೆ ವರ್ತಿಸುವುದು ಕೆಲವರ ಜಾಯಮಾನ. ಹೆದರಿಸುವುದು ನಿಮ್ಮ ಚಾಳಿಯಾದರೆ, ಅದನ್ನು ಎದುರಿಸಿ ನಿಲ್ಲುವುದು ನನ್ನ ಗುಣವಾಗಿದೆ ಎಂದು ವಿಜಯಲಕ್ಷ್ಮೀಗೆ ಧನ್ವೀರ್ ಪರೋಕ್ಷ ತಿರುಗೇಟನ್ನು ನೀಡಿದ್ದರು. ಈ ಘಟನೆ ಬಳಿಕ, ನಟ ಧನ್ವೀರ್​, ಮ್ಯಾನೇಜರ್ ನಾಗರಾಜ್​ಗೆ ಕರೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ಈಗ ದೂರನ್ನು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net