

ಬೆಂಗಳೂರು: ಬ್ಯಾಂಕ್ ಸಾಲದ ಕಂತು ಕಟ್ಟುವುದಿದೆ ಎಂಬ ಕಾರಣವನ್ನು ನೆಪವಾಗಿಟ್ಟುಕೊಂಡು ಕೌಟುಂಬಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಆಸ್ತಿ ಗಳಿಸುವ ಮೊದಲು ಹೆಂಡತಿ- ಮಕ್ಕಳ ಅಗತ್ಯಗಳನ್ನು ಪೂರೈಸುವುದು ಪತಿಯ ಕರ್ತವ್ಯ ಎಂದು ಹೈಕೋರ್ಟ್ ಹೇಳಿದೆ.
ℹ️
ಪತಿಯ ಆರೋಪಕ್ಕೆ ಸಾಕ್ಷ್ಯಗಳಿಲ್ಲ
ಅರ್ಜಿದಾರರ ವಾದ ನಿರಾಕರಿಸಿರುವ ನ್ಯಾಯಪೀಠ, ಎರಡನೇ ಹೆಂಡತಿಯು ಮಗುವಿನ ಹೆತ್ತ ತಾಯಿ ಅಲ್ಲದಿದ್ದರೂ ಆ ಮಗುವನ್ನು ಪ್ರೀತಿಯಿಂದ ಸಾಕಿ ಬೆಳೆಸುತ್ತಿದ್ದಾರೆ. ಅವರಿಗೆ ಬೇರೊಬ್ಬರ ಜೊತೆ ಸಂಬಂಧವಿತ್ತು ಹಾಗೂ ದಾಂಪತ್ಯ ಜೀವನಕ್ಕೆ ಸಹಕರಿಸಲಿಲ್ಲ ಎಂಬ ಪತಿಯ ಆರೋಪಗಳಿಗೆ ಪುರಾವೆಗಳಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ.