ನಂತರ ಅಕ್ಷಯ ತೃತೀಯದ ದಿನವಾದ ಏಪ್ರಿಲ್ 19ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯೊಳಗೆ ಉಳಿದ ಹಣವನ್ನು ಪಾವತಿಸಿ ಖರೀದಿಯನ್ನು ಪೂರ್ಣಗೊಳಿಸಬೇಕು. ವಿಶೇಷವೆಂದರೆ, ಗ್ರಾಹಕರು ಮುಂಗಡ ಕಾಯ್ದಿರಿಸಿದ ದಿನದ ಬೆಲೆ ಅಥವಾ ಏಪ್ರಿಲ್ 19ರ ಮಾರುಕಟ್ಟೆ ಬೆಲೆ — ಇವೆರಡರಲ್ಲಿ ಯಾವುದು ಕಡಿಮೆಯಿರುತ್ತದೆಯೋ ಅದೇ ಬೆಲೆಗೆ ಚಿನ್ನವನ್ನು ನೀಡಲಾಗುತ್ತದೆ. ಇದರ ಜೊತೆಗೆ, ಈ ಯೋಜನೆಯಡಿ ಮುಂಗಡ ಬುಕ್ಕಿಂಗ್ ಮಾಡಿದ ಪ್ರತಿಯೊಬ್ಬರಿಗೂ ಉಚಿತ ಬೆಳ್ಳಿ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಗುತ್ತದೆ.