ಗಡಿ ಭಾಗಕ್ಕೆ ನೀರು ನೀಡಿದ್ದ ದಿ.ಅಜಿತ ಪವಾರ

ಗಡಿ ಭಾಗಕ್ಕೆ ನೀರು ನೀಡಿದ ಅಜಿತ ಪವಾರ
ಗಡಿ ಭಾಗಕ್ಕೆ ನೀರು ನೀಡಿದ ಅಜಿತ ಪವಾರ
Published on

ಪ್ರಮುಖ ಮುಖ್ಯಾಂಶಗಳು

  • ಗಡಿ ಭಾಗಕ್ಕೆ ನೀರು ನೀಡಿದ ದಿ.ಅಜಿತ ಪವಾರ
  • ಬೆಳಗಾವಿ ಗಡಿಯಲ್ಲಿ ನೀರಾವರಿಗೆ ಸಹಕಾರ
  • ಕಾಳಮ್ಮವಾಡಿ ಒಪ್ಪಂದದ ರೂವಾರಿ ಪವಾರ
ಗಡಿ ಭಾಗಕ್ಕೆ ದಿ. ಅಜಿತ ಪವಾರ ನಂಟು
| ಕಾಳಮ್ಮವಾಡಿ ಒಪ್ಪಂದದ ರೂವಾರಿ |
ಆನಂದ ಭಮ್ಮನ್ನವರ ಚಿಕ್ಕೋಡಿ
ಗಡಿಭಾಗದ ಚಿಕ್ಕೋಡಿ, ರಾಯಬಾಗ,ನಿಪ್ಪಾಣಿ ಅಥಣಿ,ಕಾಗವಾಡ ತಾಲೂಕುಗಳಿಗೆ ಕೃಷ್ಣ ,ದೂಧಗಂಗಾ ನದಿಗಳೇ ಆಧಾರ.ಕಳೆದ ಎರಡು ದಶಕದ ಹಿಂದೆ ಕೃಷ್ಣಾ ನದಿ ನೀರಿನ ಅಭಾವವನ್ನು ತಗ್ಗಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ನಡೆದ ಕಾಳಮ್ಮವಾಡಿ ಜಲಾಶಯ ಒಪ್ಪಂದದ ಗಡಿಭಾಗದ ರೈತರು ಪಾಲಿಗೆ ವರದಾನವಾಗಿದೆ.ಈ ಒಪ್ಪಂದ ರೂವಾರಿಯಾಗಿದ್ದು ದಿ. ಅಜಿತ ಪವಾರ ಎಂಬುವುದು ವಿಶೇಷ.
ಚಿಕ್ಕೋಡಿ ಉಪ ವಿಭಾಗದ ದೂಧಗಂಗಾ ವೇದಗಂಗಾ ನದಿಯಲ್ಲಿ ಕೃಷ್ಣಾ ನದಿ ಸೇರುತ್ತದೆ. ದೂಧಗಂಗಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾದರೆ ಕೃಷ್ಣಾ ನದಿ ನೀರಿನ ಹರಿವು ಕೂಡ ಕಡಿಮೆಯಾಗಿ ಗಡಿ ಭಾಗದ ಜನರಿಗೆ ಕೃಷಿ ಹಾಗೂ ಕುಡಿಯುವ ನೀರು ನೀರಿನ ಅಭಾವವಾಗುತಿತ್ತು. ಪಕ್ಕದ ಮಹಾರಾಷ್ಟ್ರದ ದೂಧಗಂಗಾ ನದಿಗೆ ರಾಧಾನಗರಿಯಲ್ಲಿ ಕಾಳಮ್ಮವಾಡಿ ಜಲಾಶಯ ನಿರ್ಮಿಸಿ ನೀರನ್ನು ಸಂಗ್ರಹಿಸುತ್ತದೆ. ಇದು ಕೃಷಾ ನದಿ ತಟದಲ್ಲಿ ನೀರಿನ ಅಭಾವಕ್ಕೆ ಕಾರಣವಾಗಿತ್ತು.
ಗಡಿಭಾಗದ ರೈತರ ನೀರಾವರಿ ಅಭಾವ ಪರಿಸ್ಥಿತಿಯನ್ನು ಮನಗಂಡು ಶಾಶ್ವತ ಪರಿಹಾರವನ್ನು ನಿರ್ಧರಿಸಿದ್ದ ಅಂದಿನ ನಿಪ್ಪಾಣಿ ಕ್ಷೇತ್ರದ ಶಾಸಕ ದಿ.ಕಾಕಾಸಾಹೇಬ ಪಾಟೀಲರು,ವಿ.ಪ ಮಾಜಿ ಸದಸ್ಯ ವೀರಕುಮಾರ ಪಾಟೀಲರು ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮತ್ತು ನೀರಾವರಿ ಸಚಿವರಾದ ಎಚ್.ಕೆ. ಪಾಟೀಲರಿಗೆ ಗಡಿಭಾಗದ ರೈತರ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಂಡು ಮಹಾರಾಷ್ಟ್ರಕ್ಕೆ ನಿಯೋಗ ಕರೆದುಕೊಂಡು ಹೋಗಿ ಅಗಿನ ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸರಾವ ದೇಶಮುಖ ಮತ್ತು ನೀರಾವರಿ ಸಚಿವ ಪದ್ಮಸಿಂಹ ಪಾಟೀಲ ಜತೆ ಸೇರಿ ಉಭಯ ರಾಜ್ಯಗಳ ನಡುವೇ ಕಾಳಮ್ಮವಾಡಿ ಒಪ್ಪಂದ ಮಾಡಿಕೊಂಡರು.
ಒಪ್ಪಂದ ರೂವಾರಿ ಪವಾರ
ಗಡಿಭಾಗದ ರೈತರ ಸಮಸ್ಯೆ ಬಗ್ಗೆ ಅಪಾರ ಕಾಳಜಿ ಪ್ರೀತಿಯನ್ನು ಹೊಂದಿದ್ದ ಅಜೀತ ಪವಾರ ಮಾಡಿದ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಾಗಿದೆ.ಅಂದು ಮಹಾರಾಷ್ಟ್ರ ಸರ್ಕಾರದ ಕೃಷ್ಣ ಕಣಿವೆ ಅಭಿವೃದ್ಧಿ ಮತ್ತು ಕೊಂಕಣ ಕಣಿವೆ ಅಭಿವೃದ್ಧಿ ಮಹಾಮಂಡಲದ ಅಭಿವೃದ್ಧಿ ಅಧ್ಯಕ್ಷರಾದವರು ದಿ. ಅಜಿತ ಪವಾರ ಅವರು.ಅಂದು ಅವರ ಮಹಾಮಂಡಲದ ವ್ಯಾಪ್ತಿಗೆ ಬರುವ ಈ ಕರಾರು ಪ್ರತಿ ವರ್ಷ ಬೆಸಿಗೆಯಲ್ಲಿ ಕರ್ನಾಟಕಕ್ಕೆ ಒಟ್ಟು 4 ಟಿಎಂಸಿ ನೀರು ಬಿಡುವ 2001ರ ಒಪ್ಪಂದದಲ್ಲಿ ಪವಾರರು ಮಾಡಿದ ಕೆಲಸ ಗಡಿಭಾಗದ ಜನರಲ್ಲಿ ಮನಸ್ಸಲಿ ಉಳಿದಿದೆ.
ಒಪ್ಪಂದದಂತೆ ನೀರು:
ಕಾಳಮ್ಮವಾಡಿ ಒಪ್ಪಂದದಂತೆ ಕಳೆದ 25 ವರ್ಷಗಳ ಕರ್ನಾಟಕದ ಗಡಿ ಭಾಗದ ತಾಲೂಕುಗಳಲ್ಲಿ ಕೃಷಿ ಭೂಮಿ ಹಚ್ಚು ಹಸಿರಿನಿಂದ ಕಂಗೊಳಿಸುತ್ತಿದೆ .ಮತ್ತು ಬೇಸಿಗೆಯಲ್ಲಿ ರೈತರಿಗೆ ಜಾನುವಾರುಗಳಿಗೆ ವರದಾನವಾಗಿದೆ .
ಕೋಟ್ -
ಅಜಿತ ಪವಾರ ಅವರು ಕಾಳಮ್ಮವಾಡಿ ಒಪ್ಪಂದದ ಪ್ರಮುಖ ರೂವಾರಿಗಳು. ಈ ಒಪ್ಪಂದದಿಂದ ಬೆಸಿಗೆಯಲ್ಲಿ ಕಾಳಮ್ಮವಾಡಿ ಜಲಾಶದಿಂದ ಚಿಕ್ಕೋಡಿ ಭಾಗ ಜನರಿಗೆ ಅನುಕೂಲವಾಗಿದೆ.ನಾನು ಅವರ ಕ್ಷೇತ್ರಕ್ಕೆ ಎರಡು ಬಾರಿ ಭೇಟಿ ನೀಡಿದ್ದೇನೆ. ನೀಡಿದ್ದೆನೆ.ಮಾದರಿ ಕ್ಷೇತ್ರವಾಗಿದೆ.
ಮಹಾದೇವ ಕೌಲಾಪುರೆ
ಅಧ್ಯಕ್ಷರು
ಗ್ರಾ.ಪಂ.ವಾಳಕಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net