ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಟಿ.ಎಸ್ ಉಮೇಶ್ ಮಾತನಾಡಿ, ಎಚ್ಐವಿ ರೋಗವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಮುಖ್ಯವಾಗಿದೆ. ವಿವಾಹ ಆಗುವವರೆಗೂ ಬ್ರಹ್ಮಚಯೆರ್ ಪಾಲನೆ, ರೋಗ ಬಂದವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿದರೆ ರೋಗ ಹರಡುವುದಿಲ್ಲ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ರೋಗ ಹರಡುವುದಿಲ್ಲ. ಆಗ ಮಾತ್ರ ಇದನ್ನು ಶೂನ್ಯಕ್ಕೆ ತರಬಹುದು. ಇದರಲ್ಲಿ ಯುವಕರ ಸಹಕಾರ, ಅರಿವು ಮತ್ತು ಜವಾಬ್ದಾರಿ ಬಹಳ ಮುಖ್ಯ ಎಂದರು.