

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಸಾಮಾನ್ಯವಾಗಿಉದ್ಯಮ, ಬಿಜಿನೆಸ್ಎಂದ ತಕ್ಷಣ ಕೃಷಿ ಕ್ಷೇತ್ರವನ್ನುಹೊರಗಿಟ್ಟು ಯೋಚನೆ ಮಾಡುವವರೇಹೆಚ್ಚು. ಆದರೆಕೃಷಿ ಕ್ಷೇತ್ರವು ದೇಶದಲ್ಲಿಎಲ್ಲಕ್ಕಿಂತ ದೊಡ್ಡ ಉದ್ಯಮವಾಗಿದೆಎಂದು ಕನೇರಿ ಮಠದ ಶ್ರೀ ಅದೃಶ್ಯಕಾಡಸಿದ್ದೇಶ್ವರ ಸ್ವಾಮೀಜಿಹೇಳಿದರು.
ಅರಮನೆಮೈದಾನದ ವೈಟ್ ಪೆಟಲ್ ಸಭಾಂಗಣದಲ್ಲಿಇಂಟರ್‌ನ್ಯಾಷನಲ್ ಲಿಂಗಾಯತ್ಯೂತ್ ಫೋರಂ (ಐಲೈಫ್)ವಿಜಯವಾಣಿ ಮಾಧ್ಯಮಸಹಯೋಗದಲ್ಲಿ ಆಯೋಜಿಸಿದ್ದ ವೀರಶೈವಲಿಂಗಾಯತ ಬಿಜಿನೆಸ್ ಕಾನ್‌ಕ್ಲೇವ್‌ನಲ್ಲಿಉಪನ್ಯಾಸ ನೀಡಿದರು.
ದೇಶದಜಿಡಿಪಿ ಯಲ್ಲಿ ಕೃಷಿಯ ಪಾತ್ರಗಮನಾರ್ಹವಾಗಿದೆ. ಕೃಷಿ ಕೇವಲಅವಿದ್ಯಾವಂತರು,ಬೇರೆ ನೌಕರಿಇಲ್ಲದವರು,ಗ್ರಾಮೀಣ ಪ್ರದೇಶಜನರು ಮಾಡುವ ಉದ್ಯೋಗ ಎಂಬ ತಪ್ಪುಕಲ್ಪನೆ ಇದೆ.ಆದರೆ ದೇಶದ ಎಲ್ಲಪ್ರಗತಿ ಕಾರ್ಯಗಳಿಗೆ ಬೇಕಾದಕಚ್ಚಾವಸ್ತುಗಳನ್ನು ಒದಗಿಸುವಮಹತ್ತರ ಹೊಣೆಗಾರಿಕೆ ಕೃಷಿಕರಮೇಲಿದೆ. ಈಬಗ್ಗೆ ಅರಿತ ನಮ್ಮ ಯುವ ಸಮುದಾಯಇತ್ತೀಚೆಗೆ ಕೃಷಿ ಕ್ಷೇತ್ರದಬಗ್ಗೆಯೂ ಆಸಕ್ತಿಯನ್ನು ತೋರುತ್ತಿದೆ.ಇತ್ತೀಚೆಗೆ 20ಯುರೋಪಿಯನ್ರಾಷ್ಟ್ರಗಳ ಒಕ್ಕೂಟದೊಂದಿಗೆಭಾರತ ಮುಕ್ತ ವ್ಯಾಪಾರದ ಒಪ್ಪಂದವನ್ನುಮಾಡಿಕೊಂಡಿದ್ದು,ಕೃಷಿಕ್ಷೇತ್ರದಮೇಲಿನ ಅವಕಾಶ ಮತ್ತು ಭರವಸೆಗಳುಹೆಚ್ಚಾಗಿವೆ.ಈ ಒಪ್ಪಂದದಪ್ರಕಾರ ಕೃಷಿ ಉತ್ಪನ್ನಗಳುರಸಾಯನಿಕ ಮುಕ್ತವಾಗಿರಬೇಕು ಎಂಬಕರಾರನ್ನು ಹೊಂದಿದೆ.ಅಂದರೆ ಸಾವಯವಕೃಷಿಗೆ ಹೆಚ್ಚಿನ ಒತ್ತು ನೀಡಬೇಕು.ಸಾವಯವ ಕೃಷಿಯನ್ನುಅಳವಡಿಸಿಕೊಳ್ಳಲು ಪ್ರತಿ ಮನೆಯಲ್ಲಿಕನಿಷ್ಟ ಎರಡಾದರೂ ಆಕಳುಗಳನ್ನುಸಾಕಬೇಕು. ಆಕಳಸಗಣಿ, ಗೋಮೂತ್ರ,ಹಾಲು,ತುಪ್ಪ ಇತ್ಯಾದಿಗೋಉತ್ಪನ್ನಗಳಿಗೆ ಜಾಗತಿಕಮಾರುಕಟ್ಟೆಯಲ್ಲಿ ಬಹಳ ಬೇಡಿಕೆಇದೆ. ಜೊತೆಗೆನಮ್ಮ ಭೂಮಿಯ ಸತ್ವಾಂಶವನ್ನುಮರುಸ್ಥಾಪಿಸಲು ಕೊಟ್ಟಿಗೆ ಗೊಬ್ಬರ,ಜೀವಾಮೃತ,ಗೋಮೂತ್ರಗಳಪಾತ್ರ ಬಹಳ ಮುಖ್ಯವಾಗಿದೆ.ಸಾವಯವ ಕೃಷಿಯಿಂದಇಳುವರಿ ಕಡಿಮೆಯಾಗುತ್ತದೆ ಎಂಬಮಾತಿದೆ. ಆದರೆಕನೇರಿ ಮಠ ಕಳೆದ 30ವರ್ಷದಿಂದ ಸುಮಾರು200 ಎಕರೆಕೃಷಿಯನ್ನು ಸಾವಯವ ಪದ್ದತಿಯಲ್ಲಿಮಾಡುತ್ತಿದ್ದು,ಇಳುವರಿಕಡಿಮೆಯಾಗಿಲ್ಲ.ಮಠದಲ್ಲಿ 1500ಹಸುಗಳಿದ್ದು,ಆ ಹಸುಗಳ ನಿರ್ವಹಣೆಗೆಯಾವುದೇ ದೇಣಿಗೆ ಪಡೆಯದೇ ಅವುಗಳಉತ್ಪನ್ನಗಳ ಮಾರಾಟದಿಂದಲೇಸಂಪನ್ಮೂಲವನ್ನು ಸಂಗ್ರಹಿಸುತ್ತೇವೆ.ಗೋವು ಸಾಕಾಣಿಕೆಯಿಂದಸಾವಯವ ಕೃಷಿ ಹಾಗೂ ಗೋ ಉತ್ಪನ್ನಗಳಮಾರಾಟ ಉದ್ಯಮ ಎರಡನ್ನೂ ನಿರ್ವಹಿಸಬಹುದು.ವೀರಶೈವ ಲಿಂಗಾಯತಬಿಜಿನೆಸ್ ಕಾನ್‌ಕ್ಲೇವ್‌ನಲ್ಲಿಸಾವಯವ ಕೃಷಿಯ ಕುರಿತು ಒಂದುಗೋಷ್ಠಿಯನ್ನು ಏರ್ಪಡಿಸುವುದರಮೂಲಕ ಇಲ್ಲಿರುವ ಉದ್ಯಮದ ಅವಕಾಶವನ್ನುಯುವಕರಿಗೆ ತಿಳಿಸಿಕೊಡುವ ಕೆಲಸವನ್ನುಐಲೈಫ್ ಸಂಸ್ಥೆ ಮಾಡಿರುವುದುಸ್ತುತ್ಯಾರ್ಹ ಕೆಲಸ ಎಂದು ಸ್ವಾಮೀಜಿಪ್ರಶಂಸೆ ವ್ಯಕ್ತಪಡಿಸಿದರು.
ಕಾನ್‌ಕ್ಲೇವ್‌ನ2ನೇದಿನದ ಕಾರ್ಯಕ್ರಮದಲ್ಲಿ ಬೆಳಗ್ಗೆಯಿಂದವಿವಿಧ ಗೋಷ್ಠಿಗಳು ನಡೆದವು.ವಿವಿಧ ವಿಷಯಗಳಕುರಿತು ತಜ್ಞರು ಉಪನ್ಯಾಸಗಳನ್ನುನೀಡಿದರು. ಸಂಜೆನಡೆದ ಗೋಷ್ಠಿಯಲ್ಲಿ ಪ್ರಗತಿಪರರಾಜಕೀಯ ಕುರಿತು ಬಿಜೆಪಿ ರಾಜ್ಯಾಧ್ಯಕ್ಷಬಿ.ವೈ.ವಿಜಯೇಂದ್ರಮಾತನಾಡಿದರು.ಬಾಲಚಂದ್ರಸಿಂಹರಾವ್ ರಾಣೆ ಸಾಹಿಬ್,ವಿಶ್ವನಾಥ್,ಸಂತೋಷ್ ಕೆಂಚಾಂಬಮತ್ತಿತರರು ಗೋಷ್ಠಿಯಲ್ಲಿಪಾಲ್ಗೊಂಡಿದ್ದರು.ಮಳಿಗೆಗಳಲ್ಲಿಜನದಟ್ಟಣೆ ಇದ್ದು,ವ್ಯಾಪಾರಜೋರಾಗಿತ್ತು. ವಾರಾಂತ್ಯಕ್ಕೆಇನ್ನೂ ಹೆಚ್ಚಿನ ಜನ ಆಗಮಿಸುವನಿರೀಕ್ಷೆ ಇದೆ.
ಜನರ ಆರೋಗ್ಯಕ್ಕೆ ರಾಸಾಯನಿಕ ಆಹಾರ ಪದಾರ್ಥಗಳು ಹಾನಿ ಮಾಡುತ್ತಿದ್ದು, ಸಾವಯವ ಆಹಾರುತ್ಪನ್ನಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಭೂತಿಪುರ ಮಠದಿಂದಲೇ ಎಸ್‌ವಿವಿಎಸ್ ಫುಡ್ ಪ್ರಾಡಕ್ಟ್‌ಗಳನ್ನು ಪರಿಚಯಿಸಿದ್ದೇವೆ. ವೀರಶೈವ ಲಿಂಗಾಯತ ಕಾನ್‌ಕ್ಲೇವ್‌ನಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯಿ ವ್ಯಕ್ತವಾಗುತ್ತಿದೆ.
ಹಿಂದೊಂದು ಕಾಲದಲ್ಲಿ ಜನಸಂಖ್ಯಾ ಸ್ಫೋಟ ಎಂಬ ಪದವನ್ನು ಬಳಸಲಾಗುತ್ತಿತ್ತು. ಆದರೆ ಇಂದು ಜನರನ್ನು ಸಂಪನ್ಮೂಲ ಎಂದು ಕರೆಯುತ್ತಿದ್ದೇವೆ. 25 ವರ್ಷಗಳ ಹಿಂದೆ ಆರಂಭವಾದ ಜಾಗತೀಕರಣ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತದಲ್ಲಿ ಊಹೆ ಮೀರಿದ ಅವಕಾಶಗಳು ಸೃಷ್ಟಿಯಾಗುತ್ತಿವೆ. ನಮ್ಮ ಸುತ್ತಲಿನ ಸಮಸ್ಯೆಯನ್ನು ಗುರುತಿಸುವ ಗುಣವಿದ್ದವರು ಅದಕ್ಕೆ ಪರಿಹಾರ ಒದಗಿಸುವ ಮೂಲಕ ಉನ್ನತ ಸಾಧನೆ ಗೈಯ್ಯುತ್ತಾರೆ. ಇದೇ ನಿಜವಾದ ವಿಕಸಿತ ಭಾರತ.